Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 20.05.2024

ಧೈನಂದಿನ ಧ್ಯಾನ(Kannada) – 20.05.2024

 

ತಂದೆಯ ಚಿತ್ತ

 

"…ನಿನ್ನ ಚಿತ್ತವೇ ಆಗಲಿ..." - ಲೂಕ 22:42

 

ಹದಿನಾಲ್ಕು ವರ್ಷದ ಐಡಾ ಸ್ಕಡ್ಡರ್ ಅವರ ಕನಸುಗಳು ಮತ್ತು ಆದರ್ಶಗಳು ಅಮೆರಿಕಾದಲ್ಲಿ ವಾಸಿಸಬೇಕು ಎಂಬುದೇ. ಅವರು ಎಂದಿಗೂ ಮಿಷನರಿಯಾಗಿ ಭಾರತಕ್ಕೆ ಬಂದು ತನ್ನ ಹೆತ್ತವರಂತೆ ಕಷ್ಟಗಳನ್ನು ಅನುಭವಿಸಲು ಬಯಸಲಿಲ್ಲ. ರಜೆಗೆಂದು ಭಾರತಕ್ಕೆ ಬಂದಿದ್ದಾಗ ಕಣ್ಣೆದುರೇ ಮೂವರು ಯುವತಿಯರ ಸಾವು ಆಕೆಯನ್ನು ತೀವ್ರವಾಗಿ ಬಾಧಿಸಿತ್ತು. ಅದರಲ್ಲೂ ಮಹಿಳಾ ವೈದ್ಯರ ಕೊರತೆಯಿಂದ ಹೆರಿಗೆಯಲ್ಲಿ ಸಾವನ್ನಪ್ಪಿದ ಮಹಿಳೆಯರ ಸಾವು ಐಡಾ ಅವರನ್ನು ವೈದ್ಯಕೀಯ ಅಧ್ಯಯನಕ್ಕೆ ಪ್ರೇರೇಪಿಸಿತು. ಅಜ್ಞಾನದಿಂದ ನಶಿಸುತ್ತಿರುವ ಭಾರತೀಯ ಸ್ತ್ರೀಯರನ್ನು ಕಾಪಾಡುವುದೇ ತನ್ನ ಕುರಿತು ದೇವರ ಚಿತ್ತ ಎಂದು ಅರಿತುಕೊಂಡಳು. ಐಡಾ ತಕ್ಷಣವೇ ಭಾರತದಲ್ಲಿ ವೈದ್ಯಕೀಯ ಮಿಷನರಿಯಾಗಿ ಸೇವೆ ಮಾಡಲು ತನ್ನ ಜೀವನವನ್ನು ಮುಡಿಪಾಗಿಟ್ಟಳು. ಇಂದಿಗೂ ಅನೇಕರು ವೇಲೂರ್ C.M.C. ಆಸ್ಪತ್ರೆಯ ಮೂಲಕ ಪ್ರಯೋಜನ ಪಡೆಯುತ್ತಿದ್ದಾರೆ. ಐಡಾ ದೇವರ ಚಿತ್ತವನ್ನು ತಿಳಿದುಕೊಂಡು ನಡೆದುಕೊಂಡಿದ್ದೇ ಇದಕ್ಕೆ ಕಾರಣ.

 

ಕರ್ತನಾದ ಯೇಸುಕ್ರಿಸ್ತನು ಶಿಲುಬೆಗೇರಿಸುವ ಮೊದಲು ಪ್ರಾರ್ಥಿಸಿದ ಪ್ರಾರ್ಥನೆ, "ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ." (ಲೂಕ 22:42) ಯೇಸು ಕ್ರಿಸ್ತನು ಪರಲೋಕದಿಂದ ಇಳಿದು ಬಂದು ಲೋಕದಲ್ಲಿ ನಾಶವಾಗುತ್ತಿರುವ ಜನರನ್ನು ವಿಮೋಚಿಸಲು ತಂದೆಯ ಚಿತ್ತವನ್ನು ಮಾಡಲು ತನ್ನನ್ನು ಜೀವಂತ ಯಜ್ಞವಾಗಿ ಅರ್ಪಿಸಿದರು.

 

ಪ್ರಿಯರೇ! ತಂದೆಯ ಚಿತ್ತವನ್ನು ಶಿಲುಬೆಯಲ್ಲಿ ಯೇಸು ಜಯಕರವಾಗಿ ಮಾಡಿ ಮುಗಿಸಿದರು. ಯೇಸುಕ್ರಿಸ್ತನು ತನ್ನ ಸ್ವಾರ್ಥಕ್ಕೆ ಸ್ಥಳ ಕೊಡಲಿಲ್ಲ. ಅವರು ಎಲ್ಲದಕ್ಕೂ ತಂದೆಯ ಮೇಲೆ ಅವಲಂಬಿತರಾಗಿದ್ದರು. ತಂದೆಯ ಚಿತ್ತಕ್ಕೆ ವಿರುದ್ಧವಾಗಿ ಏನನ್ನೂ ಮಾಡಲಿಲ್ಲ. ಮತ್ತು ಯೇಸುವಿನ ತಾಯಿಯಾದ ಮರಿಯಳು ದೇವದೂತನ ಮಾತುಗಳಿಗೆ ಪ್ರತ್ಯುತ್ತರವಾಗಿ, ಇಗೋ ನಾನು ದೇವರಿಗೆ ದಾಸಳು. ನಿಮ್ಮ ಮಾತಿನಂತೆ ನನಗೆ ಆಗಲಿ ಎಂದು ದೇವರ ಚಿತ್ತಕ್ಕೆ ಹಾಗೆಯೇ ತನ್ನನ್ನು ಒಪ್ಪಿಸಿ ಕೊಟ್ಟರು. ನಾವು ಸ್ವಯಂ ಇಚ್ಛೆಗೆ ಅವಕಾಶ ಕೊಡದೇ, ನಮ್ಮನ್ನು ಸೃಷ್ಟಿಸಿದ ದೇವರ ಚಿತ್ತವನ್ನು ಅರಿತು ಅದರಂತೆ ವರ್ತಿಸಲು ಪ್ರಯತ್ನಿಸುತ್ತಿದ್ದೇವಾ? ದೇವರ ಚಿತ್ತಕ್ಕೆ ತನ್ನನ್ನೇ ಸಮರ್ಪಿಸಿಕೊಂಡವರನ್ನು ಮಾತ್ರವೇ ದೇವರು ತನ್ನ ಬಹುದೊಡ್ಡ ವಿಮೋಚನೆಯ ಯೋಜನೆಗಾಗಿ ಉಪಯೋಗಿಸುತ್ತಾರೆ. ಇಂದಿನಿಂದ ದೇವರ ಚಿತ್ತವನ್ನು ಅರಿತು ಕಾರ್ಯ ನಿರ್ವಹಿಸುತ್ತೀರಾ?

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ಇಂದು ನಮ್ಮ ಮಿಷನರಿಗಳಾದ ಗುಣಶೀಲನ್-ರೂತ್ ವಿವಾಹವನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)