Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 22.07.2024

ಧೈನಂದಿನ ಧ್ಯಾನ(Kannada) – 22.07.2024

 

ನಂಬಿಕೆ

 

"ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೋ" - 1 ತಿಮೊಥೆಯ 1:19

 

ರಾಮು ಮತ್ತು ಅವನ ತಾಯಿ ಆಲಯಕ್ಕೆ ಹೋಗಲು ತಯಾರಾಗುತ್ತಿದ್ದರು. ಹೆಸರಿಗೆ ಮಾತ್ರ ಕ್ರೈಸ್ತನಾಗಿರುವ ಅವರ ತಂದೆ ಚರ್ಚ್‌ಗೆ ಬರುವುದಿಲ್ಲ. ಇಬ್ಬರನ್ನೂ ತನ್ನ ದ್ವಿಚಕ್ರ ವಾಹನದಲ್ಲಿ ಆಲಯಕ್ಕೆ ಕರೆದುಕೊಂಡು ಹೋಗುವುದೊಂದೇ ಅವರ ಕೆಲಸವಾಗಿತ್ತು. ಅಂದು ಅದೇ ರೀತಿ ಅವರಿಬ್ಬರನ್ನೂ ಆಲಯಕ್ಕೆ ಕರೆದುಕೊಂಡು ಹೋದರು. ಆಗ ಉಪದೇಶಕರು ಸಾಸಿವೆ ಕಾಳಿನಷ್ಟು ನಂಬಿಕೆಯಿದ್ದರೆ ಬೆಟ್ಟವನ್ನು ನೋಡಿ ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವುದು ಎಂಬ ಮಾತು ಕಿವಿಗೆ ಬಿತ್ತು. ನಂತರ ಮನೆಗೆ ಹೋದರು. ರಾತ್ರಿಯಲ್ಲಿ ಮೊಣಕಾಲೂರಿ ಪ್ರಾರ್ಥಿಸಿದರು. ಇದನ್ನು ನೋಡಿದ ರಾಮು ಮತ್ತು ಅಮ್ಮ ಆಶ್ಚರ್ಯಪಟ್ಟರು. ತನ್ನ ತೋಟದಲ್ಲಿದ್ದ ದೊಡ್ಡ ಕಲ್ಲು ಮಾಯವಾಗಬೇಕು ಎಂಬುದು ಅವರ ಕೋರಿಕೆ. ರಾತ್ರಿ ಎಲ್ಲರೂ ಮಲಗಿದರು. ಮರುದಿನ ಬೆಳಿಗ್ಗೆ ಓಡಿಹೋಗಿ ತೋಟವನ್ನು ನೋಡಿದರು. ಆ ದೊಡ್ಡ ಕಲ್ಲು ಅಲ್ಲೇ ಇತ್ತು. ತಕ್ಷಣ ರಾಮುವಿನ ತಂದೆ, "ನನಗೆ ಆಗಲೇ ಗೊತ್ತಿತ್ತು ಕಲ್ಲು ಮಾಯವಾಗುವುದಿಲ್ಲ ಎಂದು!"

  

ಇದೇ ರೀತಿಯ ಘಟನೆ ಸತ್ಯವೇದದಲ್ಲಿ ಬರೆಯಲ್ಪಟ್ಟಿದೆ. ಒಬ್ಬ ಮನುಷ್ಯನು ತನ್ನ ಮಗನ ಸ್ವಸ್ಥತೆಗಾಗಿ ಯೇಸುವಿನ ಶಿಷ್ಯರ ಬಳಿಗೆ ಬಂದರು. ಯೇಸುವಿನ ಶಿಷ್ಯರು ಮಗನನ್ನು ಸ್ವಸ್ಥಗೊಳಿಸಲು ಸಾಧ್ಯವಾಗಲಿಲ್ಲ. ಅವರು ಮಗನನ್ನು ಯೇಸುವಿನ ಬಳಿಗೆ ಕರೆತಂದರು. ಆಗ ಯೇಸು ಅವನಲ್ಲಿರುವ ದೆವ್ವವನ್ನು ಗದಸಿದರು. ತಕ್ಷಣ ಅದು ಅವನನ್ನು ಬಿಟ್ಟು ಹೋಯಿತು. ಆ ಕ್ಷಣದಲ್ಲೇ ಯುವಕನು ಸ್ವಸ್ಥವಾದನು. ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು ಏಕೆ ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಕೇಳಿದಾಗ, ನಿಮ್ಮ ಅಪನಂಬಿಕೆಯಿಂದಲೇ, ನಿಮಗೆ ಸಾಸಿವೆ ಕಾಳಿನಷ್ಟು ನಂಬಿಕೆಯಿದ್ದರೆ ಸಾಕು ಎಂದು ಹೇಳಿದರು.

 

ಪ್ರಿಯರೇ! ನಂಬಿಕೆಯು ಸಾಸಿವೆಕಾಳಿನಂತೆ ಚಿಕ್ಕದು. ಆದರೆ ಪೂರ್ಣವಾಗಿ ಇರುವಂಥದ್ದು. ಅದರಂತೆಯೇ ನಮಗೆ ಪೂರ್ಣ ನಂಬಿಕೆ ಬೇಕು. ಯೇಸುವಿನಲ್ಲಿ ನಂಬಿಕೆಯಿಂದ ಪ್ರಾರ್ಥಿಸುವ ಪ್ರಾರ್ಥನೆಗಳಿಗೆ ಉತ್ತರ ಸಿಗುವುದು ಖಚಿತ. ಯೇಸುವಿನ ಬಳಿ ಎಲ್ಲಾ ರೀತಿಯ ಸ್ವಸ್ಥತೆ ಮತ್ತು ಪ್ರಯೋಜನಗಳೂ ಇವೆ. ನಾವೇ ನಂಬಿಕೆಯಿಂದ ಯೇಸುವಿನಿಂದ ನಮಗೆ ಬೇಕಾದುದನ್ನು ಪಡೆಯಬೇಕು. ನಮ್ಮ ನಂಬಿಕೆಯು ಲೋಕವನ್ನು ಜಯಿಸುವಂಥಹ ವಿಜಯ ಎಂದು ಸತ್ಯವೇದವು ಹೇಳುತ್ತಿದೆ. ನಮ್ಮ ನಂಬಿಕೆ ಚಿನ್ನ ಮತ್ತು ಬೆಳ್ಳಿಗಿಂತ ಹೆಚ್ಚು. ನಂಬಿಕೆಯಿಲ್ಲದಿರುವುದು ದೇವರಿಗೆ ಅಪ್ರಿಯವಾಗಿದೆ. ಪ್ರತಿದಿನ ನಮ್ಮ ನಂಬಿಕೆಯನ್ನು ಹೆಚ್ಚಿಸುವಂತೆ ದೇವರನ್ನು ಪ್ರಾರ್ಥಿಸೋಣ. ನಾವು ಸಹ ಕ್ರಿಸ್ತನಲ್ಲಿ ನಂಬಿಕೆಯಿಟ್ಟು ಆತನನ್ನು ಹಿಡಿದುಕೊಂಡು ವಿಜಯವನ್ನು ಪಡೆಯೋಣ. ಆಮೆನ್!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ನಾವು ನಡೆಸುವ ಮಕ್ಕಳ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳು ತಮ್ಮ ನಿರ್ಧಾರಗಳಲ್ಲಿ ದೃಢವಾಗಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)