Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 25.07.2024

ಧೈನಂದಿನ ಧ್ಯಾನ(Kannada) – 25.07.2024

 

ಕೀಟದ ಬಯಕೆ

 

"ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು ಗೂಡನ್ನು ಬಿಟ್ಟು ಅಲೆಯುವ ಹಕ್ಕಿಯ ಹಾಗೆ" - ಜ್ಞಾನೋಕ್ತಿ. 27:8

  

ಒಂದು ಸುಂದರವಾದ ಹಳ್ಳಿ. ಆ ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಸಂಜೆಯ ನಂತರ ಗ್ರಾಮದಲ್ಲಿ ಕತ್ತಲು ಆವರಿಸಿತ್ತು. ಆದರೆ ಒಂದು ಮನೆಗೆ ಮಾತ್ರ ದಿಢೀರ್ ಬೆಳಕು ಬಂತು. ಇದು ದೀಪದ ಬೆಳಕು. ಆ ಬೆಳಕಿನಲ್ಲಿ ಆಕರ್ಷಿತವಾದ ಕೆಲವು ಕೀಟಗಳು ಮನೆಯೊಳಗೆ ಪ್ರವೇಶಿಸಿದವು. ಒಂದು ಕೀಟವು ಇತರ ಕೀಟಗಳನ್ನು ನೋಡಿ, "ಅಯ್ಯೋ! ಬೆಂಕಿ ಎಷ್ಟು ಸುಂದರವಾಗಿ ಉರಿಯುತ್ತಿದೆ. ಎಲ್ಲರೂ ಈ ಉರಿಯುತ್ತಿರುವ ಬೆಂಕಿಯನ್ನು ಮೆಚ್ಚುತ್ತಿದ್ದಾರೆ. ಹಾಗಾಗಿ ನಾನೂ ಕೂಡ ಈ ಬೆಂಕಿಯಲ್ಲಿ ಬಿದ್ದರೆ ನಾನು ಸಹ ಬೆಂಕಿಯಾಗುತ್ತೇನೆ. ಎಲ್ಲರೂ ನನ್ನನ್ನು ಮೆಚ್ಚುತ್ತಾರೆ." ಅದಕ್ಕೆ ಇತರ ಕೀಟಗಳು, "ಅಯ್ಯೋ! ಯೇಸು ನಮಗೆ ವಿಶಿಷ್ಟವಾದ ರೂಪ ಮತ್ತು ಸೌಂದರ್ಯವನ್ನು ನೀಡಿದ್ದಾರೆ ಆದ್ದರಿಂದ ಬೆಂಕಿಯಾಗಲು ಬಯಸಿ ನಿನ್ನ ಪ್ರತ್ಯೇಕತೆಯನ್ನು ಕಳೆದುಕೊಳ್ಳಬೇಡ" ಎಂದವು. ಆದರೆ ಆ ಕೀಟವು ಯಾರ ಮಾತನ್ನೂ ಕೇಳಲಿಲ್ಲ. ವೇಗವಾಗಿ ಹೋಗಿ ಆ ಉರಿಯುವ ಬೆಂಕಿಯಲ್ಲಿ ಬಿದ್ದುಹೋಯಿತು. ಎಷ್ಟು ಶೋಚನೀಯ! ಅದು ಸುಟ್ಟು ಬೂದಿಯಾಗಿ ಹೋಯಿತು.  

 

ಹಾಗೆಯೇ ದೇವರು ನಮ್ಮ ಜೀವನದಲ್ಲಿಯೂ ಪ್ರತಿಯೊಬ್ಬರಿಗೂ ಒಂದು ಸ್ಥಾನವನ್ನು ಕೊಟ್ಟಿದ್ದಾರೆ . ನಮಗೆ ನೀಡಿರುವ ಸ್ಥಾನದಿಂದ ಅವರ ಉದ್ದೇಶವನ್ನು ಈಡೇರಿಸಬೇಕು. ಉದಾಹರಣೆಗೆ, ನಮ್ಮ ಸತ್ಯವೇದದಲ್ಲಿ ನೋಡುವಾಗ ಲೂಷಿಫರ್ ಎಂಬ ದೂತನಿಗೆ ದೇವರ ಪ್ರಸನ್ನತೆಯಲ್ಲಿ ನಿಂತು ಆತನನ್ನು ಸ್ತುತಿಸುವ ಸ್ಥಾನವನ್ನು ನೀಡಲಾಗಿತ್ತು‌. ಪರ್ವತದಲ್ಲಿ ಇರುವ ಸ್ಥಾನ (ಯೆಹೆಜ್ಕೇಲ 28:14) ಆದರೆ ಅವನು ದೇವರು ಕೊಟ್ಟ ಸ್ಥಾನದ ಮಹಿಮೆಯನ್ನು ಅರಿತುಕೊಳ್ಳದೆ ದೇವರ ಸಿಂಹಾಸನವನ್ನು ಬಯಸಿದ್ದರಿಂದ ಅವನು ಪಾತಾಳಕ್ಕೆ ತಳ್ಳಲ್ಪಟ್ಟನು. ತನ್ನ ಸ್ಥಾನವನ್ನು ಕಳೆದುಕೊಂಡನು. ಹಾಗೆಯೇ, ನಮ್ಮ ಜೀವನದಲ್ಲಿಯೂ ದೇವರು ಇಟ್ಟಿರುವ ಸ್ಥಾನಕ್ಕೆ ಒಂದು ಉದ್ದೇಶವಿದೆ.

 

ಪ್ರಿಯರೇ! ದೇವರು ನಮಗೆ ಇಟ್ಟಿರುವ ಸ್ಥಾನದ ಒಳ್ಳೆತನ ಮತ್ತು ಮಹಿಮೆಯನ್ನು ತಿಳಿಯದೆ, ನಾವು ಇತರರ ಸ್ಥಾನವನ್ನು ನೋಡಿ ಅದೇ ರೀತಿ ಆಗಲು ಬಯಸುತ್ತೇವೆ. ಆದುದರಿಂದ ದೇವರು ನೀಡಿದ ಸ್ಥಾನವನ್ನು ಅಹಂಕಾರದಿಂದಾಗಲಿ, ಆಸೆಯಿಂದಾಗಲಿ ಕಳೆದುಕೊಳ್ಳದೆ ಆತನ ಉದ್ದೇಶವನ್ನು ದೇವರು ನಮಗೆ ನೀಡಿರುವ ಸ್ಥಾನದಿಂದಲೇ ಸಂತೋಷದಿಂದ ಈಡೇರಿಸೋಣ. ನಮ್ಮ ಓಟದಲ್ಲಿ ನಮಗೆ ನೇಮಿಸಿರುವ ಹಾದಿಯಲ್ಲಿ ಓಡಿ ಗೆಲ್ಲೋಣ. ದೇವರು ನಮಗೆ ಸಹಾಯ ಮಾಡಲಿ. ಆಮೆನ್!

- Sis. ಎಲ್ಸಿ

 

ಪ್ರಾರ್ಥನಾ ಅಂಶ: 

ಸಹಸೇವಕರುಗಳಾಗಿ ಸೇರ್ಪಡೆಗೊಂಡ ಸೇವಕರ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)