Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 24.07.2024

ಧೈನಂದಿನ ಧ್ಯಾನ(Kannada) – 24.07.2024

 

ಸಾಕು ಎಂಬ ಮನ

 

"ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ" - 1 ತಿಮೊಥೆ 6:6

  

ದುರಾಸೆಯ ನಾಯಿಮರಿಯೊಂದು ಇತ್ತು. ಎಲ್ಲಾ ನನಗೇ ಎಂದು ಭಾವಿಸುವ ಗುಣ ಅಧಿಕವಾಗಿ ಕಾಣುತ್ತಿತ್ತು. ಒಂದು ದಿನ ಅದಕ್ಕೆ ಹಸಿವಾಗಿತ್ತು. ಆಹಾರಕ್ಕಾಗಿ ಅಲ್ಲಿ ಇಲ್ಲಿ ಓಡಿತು. ಆಹಾರ ಸಿಗಲಿಲ್ಲ. ಒಂದು ಉಪಾಯ ಕಾಣಿಸಿತು. ಅಂಗಡಿ ಬೀದಿಗೆ ಹೋದರೆ ಏನಾದರೂ ಸಿಗುತ್ತದೆ ಎಂದು ಅಂಗಡಿ ಬೀದಿಗೆ ಹೋಯಿತು. ಅಲ್ಲಿ ಒಂದು ಮಾಂಸದ ಅಂಗಡಿ ನೋಡಿದ ಕೂಡಲೇ ತುಂಬಾ ಖುಷಿಯಾಯಿತು. ಒಂದು ಚಿಕ್ಕ ಮಾಂಸದ ತುಂಡಾದರೂ ಸಿಕ್ಕಿದರೆ ಸಾಕು ಎಂದುಕೊಂಡ ನಾಯಿಮರಿಗೆ ಅಲ್ಲೇ ಬಿದ್ದಿದ್ದ ದೊಡ್ಡ ಮೂಳೆಯ ತುಂಡನ್ನು ಕಂಡು ಬಹಳ ಸಂತೋಷಪಟ್ಟು ಅದನ್ನು ತೆಗೆದುಕೊಂಡು ಎರಡು ದಿನಕ್ಕೆ ಸಾಕಾಗುವಷ್ಟು ಆಹಾರವಿದೆ ಎಂದು ನದಿಯ ದಡಕ್ಕೆ ಹೋಯಿತು. ನಂತರ ನದಿಯತ್ತ ನೋಡಿತು. ಇದರಂತೆಯೇ ಒಂದು ಆಕೃತಿ ಮತ್ತು ಬಾಯಿಯಲ್ಲಿ ದೊಡ್ಡ ಮೂಳೆಯ ತುಂಡು ಕಾಣಿಸಿತು. ಆ ನಾಯಿಯನ್ನು ಓಡಿಸಿದರೆ ಆ ಮೂಳೆಯೂ ನನಗೇ ಸಿಗುತ್ತದೆ ಎಂದುಕೊಂಡು ಈ ನಾಯಿಮರಿ ಆವೇಶದಿಂದ ನೀರಿನತ್ತ ನೋಡಿ ಬೊಗುಳಿತು. ಬಾಯಿಯಲ್ಲಿದ್ದ ಮೂಳೆಯ ತುಂಡು ಕೆಳಗೆ ನದಿಯೊಳಗೆ ಬಿದ್ದುಹೋಯಿತು. ಸ್ವಲ್ಪ ಸಮಯದ ನಂತರವೇ ಅದು ತನ್ನ ನೆರಳು ಎಂದು ಮತ್ತು ನಿಜವಾದ ನಾಯಿಯಲ್ಲ ಎಂದು ಗೊತ್ತಾಯಿತು.  

  

ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವಾಗ ಹೀಗೆ ಬರೆಯುತ್ತಾರೆ. ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ ಎಂದು! ಕೆಲವರು ಯಾವುದರಿಂದಲೂ ತೃಪ್ತರಾಗುವುದಿಲ್ಲ. ಕೆಲವರು ಇನ್ನೂ ಇನ್ನೂ ಎಂದು ಓಡಿ ಕೊನೆಗೆ ಎಲ್ಲವನ್ನೂ ಕಳೆದುಕೊಂಡು ನಿಲ್ಲುತ್ತಾರೆ. ಉಣ್ಣಲು, ಉಡಲು ಇದ್ದರೆ ನಮಗೆ ಸಾಕೆಂದು ಭಾವಿಸೋಣ ಎಂದು ಸಹ ಉಲ್ಲೇಖಿಸುತ್ತಾರೆ. ಎಲ್ಲದರಲ್ಲೂ ಸಂತೃಪ್ತಿಯಿಂದ ಬದುಕಲು, ಮನರಮ್ಯವಾಗಿರಲು ಕಲಿತಿದ್ದೇನೆ ಎಂದು ಬರೆದಿದ್ದಾರೆ.

 

ಇದನ್ನು ಓದುತ್ತಿರುವ ದೇವಜನರೇ! ದೇವರನ್ನು ಹಿಂಬಾಲಿಸುತ್ತಿರುವ ನಾವು ಸಹ ಎಲ್ಲಾ ಸಂದರ್ಭಗಳಲ್ಲಿ ಮನರಮ್ಯವಾಗಿ ಬದುಕಲು ಕಲಿಯಬೇಕು. ತಮಿಳಿನಲ್ಲಿ “ದುರಾಸೆಯೇ ದೊಡ್ಡ ನಷ್ಟ” ಎಂಬ ಗಾದೆಯಿದೆ. ತನ್ನನ್ನು ನಿಷ್ಠೆಯಿಂದ ಅನುಸರಿಸುವ ಮಕ್ಕಳಿಗೆ ದೇವರು ಯಾವ ಕೊರತೆಯನ್ನೂ ಇಡುವುದಿಲ್ಲ. ದೇವರನ್ನು ಹುಡುಕುವವರಿಗೆ ಯಾವ ಮೇಲಿಗೂ ಕೊರತೆಯಿಲ್ಲ. ಆದ್ದರಿಂದ ನಮಗೆ ಆಹಾರ, ಬಟ್ಟೆ ಮತ್ತು ವಸತಿ ಇರುವಾಗ ಇವುಗಳೇ ಸಾಕು ಎಂದು ಪರಿಗಣಿಸೋಣ. ದೇವರು ನಮ್ಮನ್ನು ಆಶೀರ್ವದಿಸಿದರೆ, ಇವುಗಳಿಂದ ಸೇವೆಗಳಿಗೆ ಮತ್ತು ಇಲ್ಲದವರಿಗೆ ಸಹಾಯಮಾಡಿಬಿಡೋಣ. ಇದುವೇ ನಿಜವಾದ ಭಕ್ತಿಯೂ ಸಹ. ನಮಗಿರುವವುಗಳಿಂದ ಅನೇಕರನ್ನು ಪರಲೋಕದ ಸ್ವಂತದವರಾಗಿ ಮಾರ್ಪಡಿಸೋಣ.

- T. ರಾಜನ್

 

ಪ್ರಾರ್ಥನಾ ಅಂಶ: 

ಮಕ್ಕಳ ಶಿಬಿರಗಳ ಮೂಲಕ 10 ಲಕ್ಷ ಮಕ್ಕಳನ್ನು ಭೇಟಿಯಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)