Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 21.07.2024

ಧೈನಂದಿನ ಧ್ಯಾನ(Kannada) – 21.07.2024

 

ರಾಜ ಯಾರು?

 

"ಕೋಪಿಷ್ಟನು ವ್ಯಾಜ್ಯವನ್ನೆಬ್ಬಿಸುವನು; ದೀರ್ಘಶಾಂತನು ಜಗಳವನ್ನು ಶಮನಪಡಿಸುವನು" - ಜ್ಞಾನೋಕ್ತಿ 15:18

 

ಸುಂದರವಾದ ಕಾಡಿನಲ್ಲಿ ಅನೇಕ ಪ್ರಾಣಿಗಳು ವಾಸಿಸುತ್ತಿದ್ದವು. ಅವು ಯಾವಾಗಲೂ ತಮ್ಮತಮ್ಮಲ್ಲೇ ಜಗಳವಾಡುತ್ತಿದ್ದವು. ಒಂದು ದಿನ ಮೊಲ, ಜಿಂಕೆ ಮತ್ತು ಕರಡಿ ಜಗಳವಾಡುತ್ತಿದ್ದವು. ಕಾಡಿಗೆ ರಾಜನಿಲ್ಲವಾದ್ದರಿಂದ ಒಬ್ಬೊಬ್ಬರೂ ನಿಮ್ಮಷ್ಟಕಕ್ಕೆ ನೀವು ದಬ್ಬಾಳಿಕೆ ಮಾಡ್ತಾ ಇದೀರ ಎಂದು ಕರಡಿ ಹೇಳಿತು. ಹೌದು, ನಮಗೆ ಒಬ್ಬ ರಾಜನಿದ್ದರೆ, ನಾವು ಅವರಿಗೆ ನಮ್ಮ ಸಮಸ್ಯೆಯನ್ನು ಹೇಳಬಹುದು.... ತಕ್ಷಣ ಜಿಂಕೆ ಹೇಳಿತು ಹೌದು... ಹೌದು.. ಆಗಲೇ ನಮ್ಮ ಜಗಳ ಮುಗಿಯೋದು. ಆದರೆ ಕಾಡಿನ ರಾಜ ಆಗೋದು ಯಾರು ಎಂದು ಆನೆ ತನ್ನ ಘನ ಧ್ವನಿಯಲ್ಲಿ ಕೇಳಿತು! ಇದರಿಂದಾಗಿ ಒಂದು ರಗಳೆಯೇ ಪ್ರಾರಂಭವಾಯಿತು. ಮೊಲ ಹೇಳಿತು ನಾನೇ ಕಾಡಿನ ರಾಜ ಎಂದು. ನಿನ್ನನ್ನು ಒಂದೇ ಕಾಲಿನಿಂದ ತುಳಿಯುತ್ತೇನೆ, ನಾನೇ ರಾಜ ಎಂದಿತು ಕರಡಿ.

  

ಏನು ಪುಟಾಣಿಗಳೇ, ನೀವು ಕೂಡ ಮನೆಯಲ್ಲಿ ಒದೀತಿನಿ, ತುಳೀತಿನಿ ಎಂದು ನಿಮ್ಮ Sister, Brother ಜೊತೆ ಹೀಗೆ ಜಗಳ ಮಾಡ್ತೀರಾ? ಜಗಳ ತಂದಿಡೋದು ಸೈತಾನನ ಕೆಲಸ. ಆದಷ್ಟು ಮಟ್ಟಿಗೆ ಜಗಳವಾಡದೇ ಇರಬೇಕು ಸರೀನಾ. ಮುಂದೆ ಏನು ನಡೀತು ಅಂತ ಕೇಳೋಣ್ವಾ?

 

ಬದಲಾಯಿಸಿ, ಬದಲಾಯಿಸಿ ನಾನು... ನಾನು ಎಂದು ಕೂಗುವ ಶಬ್ದವನ್ನು ಕೇಳಿ ಸಿಂಹವೊಂದು ಎಚ್ಚರವಾಯಿತು. ಅದು ಪಕ್ಕದ ಕಾಡಿನಿಂದ ಬಂದು ಎರಡು ದಿನಗಳು ಮಾತ್ರವೇ ಆಗಿತ್ತು. ಏನಿಲ್ಲಿ ಶಬ್ದ ಎಂದು ಕೇಳಿದ ಸಿಂಹವನ್ನು ನೋಡಿ ಪ್ರಾಣಿಗಳೆಲ್ಲವೂ ಸ್ತಬ್ಧವಾದವು. ಆನೆ ಹೇಳಿದ್ದೇನು ಗೊತ್ತಾ? ಈ ಸಿಂಹವೇ ನಮ್ಮ ರಾಜನಾದರೆ ಏನು? ಸರಿಯಾಗಿ ಹೇಳ್ದೆ ಎಂದಿತು ಕರಡಿ. ಅದರ ನಂತರ ಜಿಂಕೆ ಮತ್ತು ಮೊಲ ಎಲ್ಲಾ ಪ್ರಾಣಿಗಳು Ok..Ok.. ಎಂದವು. ಸರಿ, ರಾಜನಾಗಲು ನನಗೆ ಯಾವುದೇ ತೊಂದರೆ ಇಲ್ಲ. ನಿಮ್ಮ ನಡುವಿನ ಜಗಳ ಅತಿರೇಕವಾದರೆ ನಾನು ನಿಮಗೆ ಮರಣದಂಡನೆ ವಿಧಿಸುತ್ತೇನೆ ಎಂದು ಹೇಳಿದ ಸಿಂಹರಾಜನ ಬಳಿ, ಇಡೀ ಪ್ರಾಣಿಸಮೂಹ ಹಾಗೇ ಆಗಲಿ ಎಂದಿತು. ಎಂದಿನಂತೆ ಮರುದಿನವೂ ಅದೇ ಗೂಡಿಗಾಗಿ ಮೊಲ ಮತ್ತು ನರಿ ಕಾದಾಡಿದವು. ಇದು ನನ್ನ ಮನೆ ಎಂದಿತು ಮೊಲ. ಇಲ್ಲ, ನಾನೇ ಮೊದಲು ಬಂದೆ. ಇದು ನನ್ನದು ಎಂದಿತು ನರಿ. ನಂತರ ಇನ್ನೇನು ಸಿಂಹ ರಾಜನ ಬಳಿಗೆ ಹೋಗಿ ನ್ಯಾಯ ಕೇಳಿದವು. ಅವು ಪರ್ಯಾಯವಾಗಿ ಜಗಳವಾಡುತ್ತಿದ್ದದರಿಂದ, ಸಿಂಹ ಲಬುಕ್ ಎಂದು ಬಾಯೊಳಗೆ ಹಾಕಿಕೊಂಡು ತನಗೆ ಆಹಾರ ಮಾಡಿಕೊಂಡಿತು. ಇದನ್ನು ಕಂಡ ಇತರ ಪ್ರಾಣಿಗಳು ನಮ್ಮ ಒಗ್ಗಟ್ಟಿನ ಕೊರತೆಯಿಂದ ನಮ್ಮ ಸ್ನೇಹಿತರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪಶ್ಚಾತ್ತಾಪಪಟ್ಟು, ಇನ್ನು ಮುಂದೆ ಯಾರೊಂದಿಗೂ ಜಗಳವಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದವು.

 

ಏನು ಮುದ್ದು ಮಕ್ಕಳೇ! ಎಲ್ಲಾದಕ್ಕೂ ಜಗಳ ಮಾಡೋದನ್ನು ಬಿಟ್ಟು, ಬಿಟ್ಟುಕೊಟ್ಟು ಬದುಕುವುದೇ ಉತ್ತಮ. ಕೋಪಗೊಂಡು ಜಗಳ ಮಾಡುವ (ಗುಣವನ್ನು) ಸೈತಾನನನ್ನು ಯೇಸಪ್ಪನ ಹೆಸರಿನಲ್ಲಿ ತೊಲಗಿಸಬೇಕು Ok ತಾನೇ ಪುಟಾಣಿಗಳೇ.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)