Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 23.07.2024

ಧೈನಂದಿನ ಧ್ಯಾನ(Kannada) – 23.07.2024

 

ಜೀವನದ ನಂತರ

 

"ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ;…" - ಮಾರ್ಕ 14:8

 

ಸ್ಕಾಟ್ಲೆಂಡ್ ಜಗತ್ತಿಗೆ ಅನೇಕ ಮಿಷನರಿಗಳನ್ನು ನೀಡಿದೆ. ಅವರಲ್ಲಿ ಒಬ್ಬರು ರಾಬರ್ಟ್ ಸಿಂಘಾಲಿಯರ್. ಅವರ ತಂದೆ ಕಮ್ಮಾರರಾಗಿದ್ದರು. ಯುವಕನಾಗಿದ್ದಾಗ ಅವರು ತನ್ನ ಕುಟುಂಬವನ್ನು ಪೋಷಿಸಲು 14 ರಿಂದ 17 ನೇ ವಯಸ್ಸಿನವರೆಗೆ ಕಮ್ಮಾರನಾಗಿ ಕೆಲಸ ಮಾಡಲು ಒತ್ತಾಯಿಸಲ್ಪಟ್ಟರು. ಕೆಲಸ ಮಾಡುವಾಗ, ಅವರು ಚರ್ಚ್ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು ಮತ್ತು ಸೇವೆ ಮಾಡಲು ಕರೆ ಸ್ವೀಕರಿಸಿ ಭಾರತಕ್ಕೆ ಬಂದರು. ಅವರು ನಾಗರಕೋಯಿಲ್ ಪ್ರಾಂತ್ಯದಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಈ ಪ್ರಾಂತ್ಯದಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ ಶಾಲೆಗಳನ್ನು ಆರಂಭಿಸಲಾಯಿತು. ಅವರೊಬ್ಬ ಮಹಾನ್ ಶಿಲ್ಪಿ. ಅವರು ಕಲೆಯಲ್ಲಿ ತುಂಬಾ ತೊಡಗಿಸಿಕೊಂಡರು. ಅವರು ನಿರ್ಮಿಸಿದ ಭವ್ಯವಾದ ಮಾರ್ತಾಂಡಂ ದೇವಾಲಯವು ಇದಕ್ಕೆ ಸಾಕ್ಷಿಯಾಗಿದೆ. ಜನರ ಸ್ನೇಹಿತನಾಗಿಯೂ, ಅವರ ಆಧ್ಯಾತ್ಮಿಕ ತಂದೆಯಾಗಿಯೂ ಕಾಣಲ್ಪಟ್ಟ ಸಿಂಘಾಲಿಯರ್ ದೇವರು ತನಗೆ ನೀಡಿದ ಯೋಜನೆಯನ್ನು ಸುಗಮವಾಗಿ ಮತ್ತು ಅದ್ಭುತವಾಗಿ ಪೂರ್ಣಗೊಳಿಸಿದರು. ಅವರು ಇಂದು ಬದುಕಿಲ್ಲ. ಆದರೆ ಅವರ ಜೀವನದ ಹಿಂದೆ ಅವರು ಮಾಡಿದ ಕೆಲಸಗಳು ಮತ್ತು ಅವರ ಕಾರ್ಯಗಳು ಇಂದಿಗೂ ಜನರು ರಕ್ಷಣೆ ಹೊಂದಲು ಅನುಕೂಲವಾಗಿವೆ

  

ಕರ್ತನಾದ ಯೇಸು ಭೂಮಿಯ ಮೇಲೆ ವಾಸಿಸುತ್ತಿದ್ದ ದಿನಗಳಲ್ಲಿ, ಆತನು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಇದ್ದು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಆ ಭರಣಿಯನ್ನು ಒಡೆದು ತೈಲವನ್ನು ಆತನ ತಲೆಯ ಮೇಲೆ ಹೊಯಿದಳು. ಆದರೆ ಕೆಲವರು ತಮ್ಮೊಳಗೆ ಕೋಪಗೊಂಡು - ಈ ತೈಲವನ್ನು ನಷ್ಟಮಾಡಿದ್ದೇಕೆ? ಇದನ್ನು ಮುನ್ನೂರು ಹಣಕ್ಕಿಂತ ಹೆಚ್ಚು ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಎಂದು ಹೇಳಿ ಆಕೆಗೆ ಛೀ ಹಾಕಿದರು. ಆಗ ಯೇಸು ಅವಳ ಕುರಿತು ಹೇಳಿದ ಕಾರ್ಯ, "ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ" ಎಂದು.

 

ಇದನ್ನು ಓದುತ್ತಿರುವ ಪ್ರಿಯರೇ!ತೈಲವನ್ನು ಒಡೆದು ಹೊಯಿದ ಸ್ತ್ರೀಯ ಜೀವನದ ನಂತರವೂ ಇಂದಿನವರೆಗೂ ನಡೆಯುತ್ತಿರುವ ಕಾರ್ಯವೇನು? ಈ ಸ್ತ್ರೀ ಯ ಬಗ್ಗೆ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ದೇವರು ಹೇಳಿದ್ದಾರೆ. ಯೇಸುವಿನಿಂದ ನಮಗೆ ಕೊಡಲ್ಪಟ್ಟದ್ದು ಒಂದು ಜೀವನ. ಅದನ್ನು ಜೀವಿಸಿ ಮುಗಿಸುವುದರೊಳಗಾಗಿ, ದೇವರ ಹೆಸರನ್ನು ಮಹಿಮೆಪಡಿಸುವ ವಿಷಯಗಳನ್ನು ಮಾಡುವ ಮೂಲಕ ನಾವು ನಮ್ಮ ಓಟವನ್ನು ಪೂರ್ಣಗೊಳಿಸಬೇಕು. ದೇವರೇ! ಲೌಕಿಕ ಮೋಹವನ್ನು ಹೋಗಲಾಡಿಸಿ ನಿಮ್ಮಲ್ಲಿ ಕೆಲಸ ಮಾಡಲು ನನಗೆ ಸಹಾಯ ಮಾಡಿ ಎಂದು ನಾವು ಕೇಳುವಾಗ ಅವರು ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತಾರೆ. ಪ್ರಿಯರೇ! ನಿಮ್ಮ ಜೀವನದ ನಂತರವೂ ಮಾತನಾಡಲ್ಪಡುವಂತಹ ವಿಷಯಗಳನ್ನು ಮಾಡುತ್ತಿದ್ದೀರಾ?

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಶಿಬಿರಗಳನ್ನು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)