Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ (Kannada) – 15.04.2024

ಧೈನಂದಿನ ಧ್ಯಾನ(Kannada) – 15.04.2024

 

ಗ್ರಹಿಕೆಯಿಲ್ಲದ ಹೃದಯ

 

"ಇಂಥವರು ಏನೂ ತಿಳಿಯದವರು, ಏನೂ ಗ್ರಹಿಸಲಾರದವರು; ಅವರ ಕಣ್ಣು ಕಾಣದಂತೆಯೂ ಹೃದಯ ಗ್ರಹಿಸದಂತೆಯೂ ಯೆಹೋವನು ಅಂಟು ಬಳಿದಿದ್ದಾನಲ್ಲಾ" - ಯೆಶಾಯ 44:18

 

ಇಬ್ಬರು ಸ್ನೇಹಿತರು ಸಂಜೆ ವೇಳೆಯಲ್ಲಿ ತಮ್ಮ ಮನೆಯ ಹೊರಗೆ ನಿಂತು ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ದೂರದಲ್ಲಿರುವ ಎತ್ತರದ ಕಟ್ಟಡದಿಂದ ಸಾಕಷ್ಟು ಹೊಗೆ ಕಾಣಿಸಿಕೊಂಡಿತು. ಕೂಡಲೇ ತಡಮಾಡದೆ ಹೊಗೆಯ ದಿಕ್ಕಿನತ್ತ ಧಾವಿಸಿದರು. ಅಂತಸ್ತಿನ ಮನೆಯ ಮೇಲ್ಛಾವಣಿ ಬೆಂಕಿಗಾಹುತಿಯಾಯಿತು. ಬಾಗಿಲು ಒಡೆದು ಒಳ ಪ್ರವೇಶಿಸಿದರು. ಕೊಠಡಿಗಳನ್ನು ದುಬಾರಿ ಕಾರ್ಪೆಟ್‌ಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಒಳಗೆ ಯಾರಾದರೂ ಇದ್ದಾರೆಯೇ? ಎಂದು ಕರೆದು ಕೋಣೆಯಿಂದ ಕೋಣೆಗೆ ಹೋದರು. ಉತ್ತರ ಇಲ್ಲ. ಇನ್ನು ಒಂದೇ ಒಂದು ಕೋಣೆಯನ್ನು ಮಾತ್ರ ನೋಡಿರಲಿಲ್ಲ. ಅಲ್ಲಿ ಮನೆಯವರೆಲ್ಲ ಟೆಲಿವಿಷನ್ ಪೆಟ್ಟಿ ಮುಂದೆ ಕುಳಿತು ಕಣ್ಣು ಮಿಟುಕಿಸದೆ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು, ಟೆಲಿವಿಷನ್ ಪೆಟ್ಟಿಯ ಸಂಪರ್ಕವನ್ನು ಕಿತ್ತು ಹಾಕಿ "ಬೇಗ ಹೊರಗೆ ಹೋಗಿ, ನಿಮ್ಮ ಮನೆಗೆ ಬೆಂಕಿ ಹೊತ್ತಿಕೊಂಡಿದೆ" ಎಂದು ಕೂಗಿದರು, ನಂತರ ಅಗ್ನಿಶಾಮಕ ದಳದವರು ಬಂದು ಸೇರಿಸಿದರು. ಬೆಂಕಿ ಆರಿಸಲಾಯಿತು. ಬೆಂಕಿ ಹೊತ್ತಿಕೊಂಡಾಗ, ಬಾಗಿಲು ಮುರಿದ ಸದ್ದು, ಮನುಷ್ಯರ ಕಾಲ್ನಡಿಗೆಯ ಸದ್ದು ಇದ್ಯಾವುದನ್ನೂ ಗಮನಿಸದೆ ಟಿವಿ ನೋಡುತ್ತಿದ್ದ ಕುಟುಂಬದವರು ಊರಿನ ಜನರನ್ನು ನೋಡಲು ನಾಚಿಕೆಪಟ್ಟರು.

 

ಇಸ್ರಾಯೇಲ್ ಮಕ್ಕಳು ಮೋವಾಬಿನ ಬಯಲು ಪ್ರದೇಶದಲ್ಲಿ ಪ್ರಯಾಣಿಸಿ ಪಾಳೆಯ ಮಾಡಿಕೊಂಡಾಗ, ಮೋವಾಬಿನ ರಾಜನಾದ ಬಾಲಾಕನು ಇಸ್ರಾಯೇಲ್ಯರನ್ನು ಶಪಿಸುವಂತೆ ಕೂಲಿ ಕೊಟ್ಟು ಬಿಳಾಮನನ್ನು ಕರೆತರುವಂತೆ ಹೇಳುತ್ತಾರೆ. ವಿಧೇಯತೆಯ ಹೃದಯವುಳ್ಳ ಬಾಲಾಕನು ಅವರೊಂದಿಗೆ ಹೋಗಲು ಸಿದ್ಧವಾದರು. ಕತ್ತೆಯ ಮೇಲೆ ತಡಿ ಹಾಕಿಕೊಂಡು, ತನಗೆ ವಿರೋಧವಾಗಿ ನಿಂತ ದೇವದೂತನನ್ನೂ ನೋಡದೆ ಗ್ರಹಿಕೆಯಿಲ್ಲದ ಹೃದಯದೊಂದಿಗೆ ಹೋಗುತ್ತಾರೆ. ಆದರೆ ಬಿಳಾಮನ ಕತ್ತೆ ದಾರಿ ತಪ್ಪಿದಾಗ ಕರ್ತನು ಕತ್ತೆಯ ಬಾಯಿಯನ್ನು ತೆರೆದರು. ಕತ್ತೆಯನ್ನು ಮೂರು ಬಾರಿ ಹೊಡೆದರೇ ಹೊರತು, ಹೀಗೆ ಏಕೆ ನಡೆಯುತ್ತಿದೆ ಎಂದು ಯೋಚಿಸಲಿಲ್ಲ.

 

ಇದನ್ನು ಓದುತ್ತಿರುವ ಪ್ರಿಯರೇ! ಇಂದು ಅನೇಕ ಜನರು ಹಾಗೆಯೇ ಬದುಕುತ್ತಿದ್ದಾರೆ. ನಾವು ಏನು ಮಾಡುತ್ತಿದ್ದೇವೆ? ನಮ್ಮ ಸುತ್ತಲೂ ಏನು ನಡೆಯುತ್ತಿದೆ? ಎಂಬ ಗ್ರಹಿಕೆಯೇ ಇಲ್ಲ ಯಾವುದರ ಬಗ್ಗೆಯೂ ಯೋಚನೆ ಇಲ್ಲ. ಅವರು ಮಾಡುವುದನ್ನು ಅವರು ಸತತವಾಗಿ ಮಾಡುತ್ತಲೇ ಇರುತ್ತಾರೆ. ಎಲ್ಲಿ ಏನು ನಡೆದರೆ ನನಗೇನು? ಎಷ್ಟೇ ಅಪಾಯ ಸುತ್ತಲಿದ್ದರೂ ಈ ಕ್ಷಣ ಚೆನ್ನಾಗಿದ್ದರೆ ಸಾಕು. ಯಾವುದರ ಬಗ್ಗೆಯೂ ಚಿಂತೆಯಿಲ್ಲ ಎಂದು ಬದುಕಿದರೆ ಹೃದಯದ ಗ್ರಹಿಕೆ ಕ್ರಮೇಣ ಕಡಿಮೆಯಾಗಿ ಆತ್ಮಸಾಕ್ಷಿ ಸತ್ತು ಬತ್ತಿಹೋದ ಸ್ಥಿತಿ ಕಾಣುತ್ತದೆ. ಜಾಗರೂಕರಾಗಿರೋಣ.

- Sis. ಫಾತಿಮಾ

 

ಪ್ರಾರ್ಥನಾ ಅಂಶ:

ಸುವಾರ್ತಾ ಶಿಬಿರದ ಮೂಲಕ ಭೇಟಿ ನೀಡಿದ ಗ್ರಾಮಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)