Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 01.12.2022 (Christmas Special)

ಧೈನಂದಿನ ಧ್ಯಾನ(Kannada) – 01.12.2022 (Christmas Special)

 

ನಂಬಿಕೆಯನ್ನು ಹೆಚ್ಚಿಸುವ ಕ್ರಿಸ್ಮಸ್

 

"ನಂಬಿದವಳಾದ ನೀನು ಧನ್ಯಳೇ; ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು" - ಲೂಕ 1:45

 

ಕೆರಿಬಿಯನ್ ಸಮುದ್ರದಲ್ಲಿ ಸ್ನಾನ ಮಾಡಲು ಸಮುದ್ರದ ಆಳವಾದ ಭಾಗವನ್ನು ಹುಡುಕಿಕೊಂಡು ಮೂವರು ದೋಣಿಯಲ್ಲಿ ಹೋದರು. ಮೂವರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಸ್ನಾನ ಮಾಡುತ್ತಿದ್ದಾಗ, ಅವರಲ್ಲಿ ಸ್ವಲ್ಪ ವಯಸ್ಸಾಗಿದ್ದ ಒಬ್ಬರಿಗೆ ಇದ್ದಕ್ಕಿದ್ದಂತೆ ಭಯ ಮತ್ತು ಗಾಬರಿ ಉಂಟಾಯಿತು, ಇವರಿಗೆ ಸಹಾಯ ಮಾಡಲು ಒಬ್ಬರು ಇಲ್ಲಿಗೆ ಬನ್ನಿರಿ. ಇಲ್ಲಿ ನಿಲ್ಲಲು ಒಂದು ಬಂಡೆ ಇದೆ ಎಂದರು. ಮೊದಲು ನಂಬದ ಆ ವ್ಯಕ್ತಿ ತನ್ನ ಸ್ನೇಹಿತ ಎಲ್ಲಿ ನಿಂತಿದ್ದಾನೆಂದು ನೋಡಿ ಅಲ್ಲಿಗೆ ಹೋದನು. ಈಗ ಅವನಿಗೆ ನಿಲ್ಲಲು ಸ್ಥಳವಿದೆ. ಸುತ್ತಲೂ ನೀರಿದ್ದರೂ, ನೀರಿನ ಒತ್ತಡ ಅವನ ಹತ್ತಿರವಿದ್ದರೂ ಈಗಂತೂ ಭಯವಿಲ್ಲ. ಅವನಿಗೆ ನಿಲ್ಲಲು ಬಂಡೆಯಿದೆ. ಹೃದಯದಲ್ಲಿ ನಂಬಿಕೆ ಕಂಡುಬಂದಿತು.

 

ಈ ಘಟನೆಯ ಮೂಲಕ ನಾವು ಪರಿಶುದ್ಧ ಗ್ರಂಥವನ್ನು ಪ್ರವೇಶಿಸಬಹುದು. ಯಾವುದೇ ರೀತಿಯ ಭರವಸೆ ಮತ್ತು ದರ್ಶನವೇ ಇಲ್ಲದ ಕಾಲದಲ್ಲಿ ಜೆಕರ್ಯ-ಎಲಿಜಬೆತ್ ಎಂಬ ವಯಸ್ಸಾದ ದಂಪತಿಗಳು ವಾಸಿಸುತ್ತಿದ್ದರು. ಮಲಾಕಿಯ ನಂತರ ಸುಮಾರು 400 ವರ್ಷಗಳು "ಮೌನದ ಕಾಲ" ಎಂದು ಕರೆಯುವುದನ್ನು ನಾವು ನೋಡಬಹುದು. ಎಲಿಜಬೆತ್ ವಿಷಯಕ್ಕೆ ಬಂದಾಗ, ಬಂಜೆ ಎಂದು ಕರೆಯುವುದನ್ನು ನಾವು ನೋಡುತ್ತೇವೆ. ಎಲಿಜಬೆತ್ ಜೀವನವು ದುಃಖ ಮತ್ತು ನಿಂದೆಯಿಂದ ತುಂಬಿತ್ತು (ಲೂಕ 1-7,24,25). ಈ ನೋವಿನ ವಾತಾವರಣದಲ್ಲಿ, ದೇವರು ಮಧ್ಯಪ್ರವೇಶಿಸಲು ಪ್ರಾರಂಭಿಸಿದರು. ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ದಾರಿಯನ್ನು ಸಿದ್ಧಮಾಡುವವರು ಎಲಿಜಬೆತ್ ಗೆ ಎರಡರಷ್ಟು ಸಂತೋಷವನ್ನು ಕೊಟ್ಟು ಆಶೀರ್ವದಿಸಿದರು. ಮಕ್ಕಳ ಭಾಗ್ಯವಿಲ್ಲದ, ಎಲಿಜಬೆತ್ ಗರ್ಭವತಿಯಾದದ್ದು, ಎರಡನೆಯದಾಗಿ ತನ್ನ ಸಂಬಂಧಿಯಾಗಿದ್ದ ಮರಿಯಳ ಮೂಲಕ ಲೋಕ ರಕ್ಷಕನಾದ ಯೇಸು ಜನಿಸುತ್ತಾರೆ ಎಂಬ ಸುದ್ದಿ ಎಲಿಜಬೆತ್ ಅನ್ನು ಸಂತೋಷದಲ್ಲಿ ತೇಲಾಡುವಂತೆ ಮಾಡಿತು.

 

"ನಂಬಿದವಳಾದ ನೀನು ಧನ್ಯಳೇ; ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು" ಅಂದಳು. ಎಲಿಜಬೆತ್ ನ ಮೊದಲ ಕ್ರಿಸ್ಮಸ್ ನಂಬಿಕೆಯನ್ನು ಹೆಚ್ಚಿಸುವಂತೆಯೂ ಮತ್ತು ಸಂತೋಷದಿಂದ ತುಂಬಿದ್ದಾಗಿಯೂ ಇತ್ತು.

 

ಪ್ರಿಯರೇ! ಈ ಕ್ರಿಸ್ಮಸ್ ನಿಮಗೆ ಒಳ್ಳೆಯ ಕಾರ್ಯಗಳನ್ನು ಹೊತ್ತು ತರಲಿದೆ. ನಂಬುತ್ತೀರಾ? ನೀವು ಜಲರಾಶಿಯ ಮಧ್ಯದಲ್ಲಿ ಇರುವ ಹಾಗೆ, ಭಯ ಮತ್ತು ನೋವುಗಳ ಮಧ್ಯೆ ಇದ್ದೀರ? ನಿಮ್ಮನ್ನು ಬೆಂಬಲಿಸಲು ಮತ್ತು ಸಾಗಿಸಲು ಬಂಡೆಯಾದ ಕ್ರಿಸ್ತನು ಇದ್ದಾರೆ. ನಿಮ್ಮ ಎರಡೂ ಪಾದಗಳನ್ನು ಬಂಡೆಯ ಮೇಲೆ ಬಲವಾಗಿ ನೆಟ್ಟಂತೆ ಇಟ್ಟುಕೊಳ್ಳಿರಿ. ಹೇರಳವಾದ ನೀರು ನಿಮಗೆ ಹಾನಿ ಮಾಡುವುದಿಲ್ಲ. ನಿಮ್ಮಲ್ಲಿ ಅನಗತ್ಯ ಭಯ ಬೇಡ. ನಿಮ್ಮ ನಂಬಿಕೆಯನ್ನು ಕ್ರಿಸ್ತನಲ್ಲಿ ಹೆಚ್ಚಿಸಿಕೊಳ್ಳಿರಿ. ಈ ಕ್ರಿಸ್ಮಸ್ ನಿಮಗೆ ಇಂಪಾಗಿ ಮಾರ್ಪಡಲು ಎಲಿಜಬೆತ್ ಜೊತೆಗೂಡಿ ನಿಮ್ಮನ್ನು ಆಶೀರ್ವದಿಸುತ್ತೇವೆ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯಲಿರುವ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)