Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 29.04.2024

ಧೈನಂದಿನ ಧ್ಯಾನ(Kannada) – 29.04.2024

 

ಅಸ್ತಿವಾರ 

 

". . . ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ . . ." - 2 ತಿಮೊಥೆ. 2:19

 

ಕೆನಡಾದಲ್ಲಿ ಹುಟ್ಟಿ ಬೆಳೆದ, ಮಿಷನರಿ ಜೋನಾಥನ್ ಗೋಫೋರ್ತ್ ಅವರು 20 ನೇ ಶತಮಾನದಲ್ಲಿ ಚೀನಾದಲ್ಲಿ ಉಜ್ಜೀವನ ಉಂಟಾಗಲು ಮುಖ್ಯ ಕಾರಣರಾಗಿದ್ದರು. ಅವರು ಐದನೇ ವಯಸ್ಸಿನಲ್ಲಿ ಸಂಗೀತಗಳನ್ನು ದೋಷರಹಿತವಾಗಿ ಬಾರಿಸುತ್ತಿದ್ದರು. ದೇವರ ವಾಕ್ಯಗಳನ್ನು ಕಂಠಪಾಠ ಮಾಡಿ ಅವುಗಳನ್ನು ಯಾರಿಗಾದರೂ ಹೇಳಲು ಬಯಸುತ್ತಿದ್ದರು. ಮತ್ತು ಚಿಕ್ಕ ವಯಸ್ಸಿನಲ್ಲೇ ಅವರು ದೇವರನ್ನು ಹೆಚ್ಚೆಚ್ಚಾಗಿ ಹುಡುಕಿದರು. ಸಮರ್ಪಣೆಯುಳ್ಳ ಕ್ರೈಸ್ತನಾಗಿ ಜೀವಿಸುತ್ತಿದ್ದರು. ಆತ್ಮಭಾರವು ಅವರನ್ನು ಹೆಚ್ಚಾಗಿ ಒತ್ತಾಯಿಸಿತು. ಹಡ್ಸನ್ ಟೇಲರ್ ಬರೆದ ಪುಸ್ತಕದ ಮೂಲಕ ಮಿಷನರಿಯಾಗಿ ಚೀನಾಕ್ಕೆ ಹೋಗಲು ಮೀಸಲಾದ ಅವರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಚೀನಾಕ್ಕೆ ಹೋದರು. ಕೇವಲ ಸತ್ಯವೇದ ಮತ್ತು ಪ್ರಾರ್ಥನೆ ಮಾತ್ರವೇ ಅವರ ಊರುಗೋಲು ಮತ್ತು ಸಾಂತ್ವನವಾಗಿತ್ತು. ಚೀನಾದ ಬದಲಾದ ಅನಾರೋಗ್ಯ ಪರಿಸ್ಥಿತಿ ಅವರ ಮತ್ತು ಅವರ ಕುಟುಂಬದ ಮೇಲೆ ಪರಿಣಾಮ ಬೀರಲಾರಂಭಿಸಿತು. ರಕ್ತ ಬೇಧಿಯಿಂದಾಗಿ ತನ್ನ ಮೊದಲ ಮಗುವನ್ನು ಕಳೆದುಕೊಂಡು, ಗಂಡ ಹೆಂಡತಿ ಇಬ್ಬರೂ ಆದರಣೆಯಿಲ್ಲದೆ ಇದ್ದರು. ಆದರೂ ಇವರು ತಮ್ಮ ಸೇವೆಯನ್ನು ಬಿಟ್ಟು, ದೇವರನ್ನು ಬಿಟ್ಟು ಹಿಂಜರಿಯದೆ ಸ್ಥಿರವಾಗಿ ಯೇಸುವಿಗಾಗಿ ಸೇವೆ ಮಾಡಿ ತನ್ನ ಓಟವನ್ನು ಮುಗಿಸಿದರು. ಗೋರ್ಫೋತ್ ನ ಸೇವೆಯಿಂದ ಅನೇಕ ಚೀನಿಯರು ರಕ್ಷಿಸಲ್ಪಟ್ಟರು. ಎಲ್ಲವನ್ನು ಕಳೆದುಕೊಂಡರೂ ಸಹ, ಅವರ ಅಸ್ತಿವಾರವು ಕ್ರಿಸ್ತನ ಮೇಲೆಯೇ ಇತ್ತು.

 

ದಾವೀದನು ಮತ್ತು ಅವನ ಜನರು ಯುದ್ಧದಿಂದ ಹಿಂದಿರುಗಿದ ಮೂರನೇ ದಿನದಲ್ಲಿ, ಜಿಕ್ಲಗ್ ಪಟ್ಟಣವು ಬೆಂಕಿಯಿಂದ ಸುಟ್ಟುಹೋಗಿರುವುದನ್ನು ಮತ್ತು ಅವರ ಹೆಂಡತಿಯರು ಮತ್ತು ಪುತ್ರಿಯರು ಸೆರೆಹಿಡಿದು ಕೊಂಡೊಯ್ಯಲ್ಪಟ್ಟರು ಎಂಬುದನ್ನು ಕಂಡರು. ದಾವೀದನು ತುಂಬಾ ಇಕ್ಕಟ್ಟಿನಲ್ಲಿದ್ದರು. ಎಲ್ಲಾ ಜನರು ತಮ್ಮ ಪುತ್ರ ಮತ್ತು ಪುತ್ರಿಯರ ನಿಮಿತ್ತ ಅವರ ಮೇಲೆ ಕಲ್ಲೆಸೆಯಬೇಕೆಂದು ಹೇಳಿಕೊಂಡರು. ದಾವೀದನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು.

 

ಪ್ರಿಯರೇ, ದಾವೀದನ ಅಸ್ತಿವಾರವು ದೇವರಲ್ಲಿ ಇದ್ದುದರಿಂದ ತನ್ನನ್ನು ತಾನು ಬಲಗೊಳಿಸಿಕೊಂಡರು. ಬಲಪಡಿಸಿಕೊಂಡದ್ದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಏನೂ ಕಡಿಮೆಯಾಗದೆ ದಾವೀದನು ಎಲ್ಲವನ್ನೂ ತಿರಿಗಿ ಪಡೆದನು. ಇಂದು ನಮ್ಮ ಅಸ್ತಿವಾರ ಯಾವುದರ ಮೇಲಿದೆ ಎಂದು ಯೋಚಿಸೋಣ. ಅದು ಹಣದ ಮೇಲೆಯೋ, ವಸ್ತುವಿನ ಮೇಲೆಯೋ, ತಮ್ಮ ನೆಚ್ಚಿನ ಜನರ ಮೇಲೆಯೋ! ಕ್ರಿಸ್ತನೆಂಬ ಅಸ್ತಿವಾರದ ಮೇಲೆ ನಮ್ಮ ಜೀವನ ಕಟ್ಟಲ್ಪಡಲು ನಾವು ನಮ್ಮನ್ನು ಸರ್ಪಿಸಿಕೊಳ್ಳೋಣ. ಆಗ ಚಂಡಮಾರುತದಂತಹ ಸಮಸ್ಯೆಗಳು ನಮ್ಮನ್ನು ಜಯಿಸಲು ಬಂದರೂ ನಮ್ಮನ್ನು ಮುಟ್ಟುವುದಿಲ್ಲ. ದೇವರಿಗಾಗಿ ಏನಾದರೂ ಮಾಡೋಣ. ಎಲ್ಲಿಯವರೆಗೆ ನಮ್ಮ ಅಸ್ತಿವಾರವು ಗಟ್ಟಿಯಾಗಿರುತ್ತದೋ ಅಲ್ಲಿಯವರೆಗೆ ನಾವು ಅಷ್ಟು ದೊಡ್ಡ ಮಾಳಿಗೆಯಾಗಿರಬಹುದು.

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲೂ ದೇವರಿಂದ ಪೂರ್ವನಿರ್ಧರಿತ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)