Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 18.05.2024

ಧೈನಂದಿನ ಧ್ಯಾನ(Kannada) – 18.05.2024

 

ಕೊರತೆಯನ್ನು ಪೂರೈಸುವರು 

 

"ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು" - ಫಿಲಿಪ್ಪಿ 4:19

 

ಮಹಾನ್ ಬೋಧಕ ಚಾರ್ಲ್ಸ್ ಸ್ಪರ್ಜನ್, ಇವರು ತನ್ನ ಅಜ್ಜನ ಜೀವನದಲ್ಲಿ ನಡೆದ ಅನೇಕ ಅದ್ಬುತಗಳನ್ನು ತನ್ನ ಸಂದೇಶಗಳಲ್ಲಿ ಉಲ್ಲೇಖಿಸುವುದುಂಟು. ಇವರ ಅಜ್ಜನ ಹೆಸರು ಸಹ ಸ್ಪರ್ಜನ್. ಸೇವಕರಾಗಿದ್ದ ಅವರಿಗೆ ಹತ್ತು ಮಕ್ಕಳು. ಸೇವೆಯಲ್ಲಿ ಬರುವ ಪ್ರೋತ್ಸಾಹಧನ ಕಡಿಮೆ. ಆದ್ದರಿಂದ ಬಡ ಸ್ಥಿತಿಯಲ್ಲಿ ವಾಸಿಸುತ್ತಿದ್ದರು. ಮಕ್ಕಳ ಹಸಿವು ನೀಗಿಸಲು ಅವರ ಬಳಿ ಇದ್ದದ್ದು ಒಂದು ಹಸು ಮಾತ್ರವೇ. ಇದ್ದಕ್ಕಿದ್ದಂತೆ ಆ ಹಸು ಕೂಡ ಸಾವನ್ನಪ್ಪಿತು. ಸ್ಪರ್ಜನ್‌ನ ಹೆಂಡತಿ ಮಕ್ಕಳಿಗೆ ಇನ್ಮುಂದೆ ಹಾಲು ಕೊಡಲು ಸಾಧ್ಯವಿಲ್ಲವಲ್ಲಾ ಏನು ಮಾಡುವುದು ಎಂದು ಚಿಂತಿಸುತ್ತಾ ಅಂಗಲಾಚಿದಳು.

 

ಹಿರಿಯ ಸ್ಪರ್ಜನ್, ಸ್ವಲ್ಪವೂ ಹಿಂಜರಿಯದೆ ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ. ಆದರೆ ನಮ್ಮ ದೇವರು ಮಕ್ಕಳಿಗೆ ಹಾಲು ಬೇಕು ಎಂಬುದನ್ನು ಅರಿತಿದ್ದಾರೆ. ಹಾಗಾಗಿ ಅದನ್ನು ದೇವರು ಕೊಡುತ್ತಾರೆ ಎಂದರು. ಮರುದಿನ ಬೆಳಿಗ್ಗೆ ಒಬ್ಬ ವ್ಯಕ್ತಿ ಅವರ ಮನೆಗೆ ಬಂದು ಇಪ್ಪತ್ತು ಪೌಂಡ್ ಹಣವನ್ನು ಕೊಟ್ಟು ಹೋದರು. ತಕ್ಷಣವೇ ಸ್ಪರ್ಜನ್ ಹಾಲು ಕೊಡುವ ಒಂದು ಹಸುವನ್ನು ಖರೀದಿಸಿದರು. ಆನಂತರವಷ್ಟೇ ಆ ಹಣ ಹೇಗೆ ಬಂತು ಎಂಬುದನ್ನು ತಿಳಿದುಕೊಂಡರು.

 

ಇಂಗ್ಲೆಂಡಿನ ಶ್ರೀಮಂತರು ತಮ್ಮ ಕಾಣಿಕೆಯ ಹಣವನ್ನು ಅನೇಕ ಸೇವಕರಿಗೆ ಹಂಚಿಕೊಡಲು ಒಟ್ಟುಗೂಡಿದರು. ಹಿರಿಯ ಸ್ಪರ್ಜನ್ ರವರು ಅವರ ನೆನಪಿಗೆ ಬಂದರು ಆದ್ದರಿಂದಲೇ ಅವರಿಗೂ ಸಹ ಇಪ್ಪತ್ತು ಪೌಂಡ್ ಅನ್ನು ನೀಡಲು ನಿರ್ಧರಿಸಲಾಯಿತು. ಸಮಯಕ್ಕೆ ಸರಿಯಾಗಿ ಹಣ ಬಂದಿದ್ದು, ಸೇವಕರ ಕುಟುಂಬದ ಕುಂದುಕೊರತೆಗಳು ಪೂರೈಸಲ್ಪಟ್ಟವು.

 

ಪೌಲನ ಸೇವೆಯ ಅಗತ್ಯಗಳನ್ನು ಪೂರೈಸಲು ಫಿಲಿಪ್ಪಿಯವರು ಸ್ವಇಚ್ಛೆಯಿಂದ ವಸ್ತು ಕಾಣಿಕೆಗಳನ್ನು ಕಳುಹಿಸಿದರು. ಹೀಗೆ ಅನೇಕರು ಮನಃಪೂರ್ವಕವಾಗಿ ಕೊಟ್ಟು ಉಪದ್ರವಗಳಲ್ಲಿರುವವರ ಸಭೆಯನ್ನು ಮತ್ತು ಸೇವೆಯನ್ನು ಬೆಂಬಲಿಸಿದರು. ನಿಜವಾದ ಸೇವಕರಿಗೆ ವಸ್ತು ಬೆಂಬಲವನ್ನು ನೀಡಿದಾಗ, ನಮ್ಮ ಲೆಕ್ಕಕ್ಕೆ ಫಲ ಹೆಚ್ಚಾಗುತ್ತದೆ.

 

ನನಗೆ ಪ್ರಿಯವಾದವರೇ, ನಮ್ಮ ಜೀವನದಲ್ಲಿ ಏರ್ಪಡುವ ಕೊರತೆಗಳನ್ನು ಕಂಡು ಭಯ, ಆತಂಕವಿಲ್ಲದೆ ನಂಬಿಕೆಯಿಂದ ದೇವರೊಂದಿಗೆ ನಾವು ಹೊಂದಿರುವ ಆಳವಾದ ಸಂಬಂಧದಲ್ಲಿ, ಪ್ರೀತಿಯಲ್ಲಿ ನಮ್ಮನ್ನು ಮತ್ತು ನಮ್ಮ ಕುಟುಂಬವನ್ನೂ ಅರ್ಪಿಸೋಣ! ಪ್ರೀತಿಯ ದೇವರು ನಮ್ಮ ಅಗತ್ಯಗಳನ್ನು ಪೂರೈಸುತ್ತಾರೆ ಮತ್ತು ನಮ್ಮ ಅಗತ್ಯಗಳಿಗೆ ಅನುಗುಣವಾಗಿ ನಮ್ಮನ್ನು ಆಶೀರ್ವದಿಸುತ್ತಾರೆ. ಸಿಂಹದ ಮರಿಗಳು ಹಸಿವಿನಿಂದ ಬಳಲುತ್ತಿದ್ದರೂ ದೇವರನ್ನು ಹುಡುಕುವವರಿಗೆ ಯಾವ ಮೇಲಿಗೂ ಕೊರತೆಯಿಲ್ಲ. ಆಮೆನ್.

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ದೆಬೋರಾಳ್ ಸೇವಕರನ್ನು ಪ್ರತಿತಿಂಗಳು ಕಾಣಿಕೆಯೊಂದಿಗೆ ಬೆಂಬಲಿಸುವ ವ್ಯಕ್ತಿಗಳನ್ನು ದೇವರು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)