Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 19.05.2024 (Kids Special)

ಧೈನಂದಿನ ಧ್ಯಾನ(Kannada) – 19.05.2024 (Kids Special)

 

ಪೀನೂ ಗುಬ್ಬಚ್ಚಿ - ಸ್ನೇಹಿತರು

 

"ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ” - ಕೀರ್ತನೆ 96:2

 

ಹಾಯ್ ಪುಟಾಣಿಗಳೇ, ನಿಮಗೆ birds ಎಂದರೆ ತುಂಬಾ ಇಷ್ಟಾನಾ? ನಿಮ್ಮ ಮನೆಯಲ್ಲೂ love birds ಗಳನ್ನೆಲ್ಲಾ ಸಾಕುತ್ತೀರಾ? ಓಹ್, ನೀವು ಪಕ್ಷಿಧಾಮಕ್ಕೆ ಹೋಗಿದ್ದೀರಾ? ಎಲ್ಲಾ ವರ್ಣರಂಜಿತ ಮತ್ತು ಸುಂದರವಾದ ಪಕ್ಷಿಗಳು ಇವೆ ಎಂದು ನಿಮಗೆ ತಿಳಿದಿದೆಯೇ? ಈ ಬೇಸಿಗೆ ರಜೆಗೆ, ನಿಮ್ಮ ಹೆತ್ತವರೊಂದಿಗೆ ಪಕ್ಷಿಧಾಮಕ್ಕೆ ಹೋಗಿ ಮತ್ತು ಸಾಕಷ್ಟು ಪಕ್ಷಿಗಳನ್ನು ನೋಡಿ.

 

ಹೀಗೆಯೇ ಪೀನೂ ಗುಬ್ಬಚ್ಚಿ ಮತ್ತು ಅದರ ಸ್ನೇಹಿತರು ಒಂದು ದಟ್ಟವಾದ ಕಾಡಿನಲ್ಲಿ ಸುಂದರವಾದ ದೊಡ್ಡ ಮರದಲ್ಲಿ ಗೂಡುಕಟ್ಟಿ ಜೀವಿಸುತ್ತಿದ್ದವು. ಪ್ರತಿದಿನ ಬೆಳಗ್ಗೆ ಎದ್ದು ಪ್ರತ್ಯೇಕವಾಗಿ ಬೇಟೆಯನ್ನು ಹುಡುಕಲು ಹೋಗಿ ಸಂಜೆ ಮರಳಿ ಬಂದು ತಾವು ತಂದ ಬೇಟೆಯನ್ನು ತಮ್ಮ ಮರಿಗಳಿಗೆ ಕೊಟ್ಟು ನೆಮ್ಮದಿಯಿಂದ ಬದುಕುತ್ತಿದ್ದವು. ಹೀಗೆ ಬೇಟೆಯನ್ನು ಹುಡುಕಲು ಹೋದಾಗ ಪೀನೂ ಹೋದ ಜಾಗದಲ್ಲಿ ಮಾತ್ರ ಹೆಚ್ಚು ಬೇಟೆ ಸಿಕ್ಕಿತು. ಅದು ಪ್ರತಿದಿನ ಆ ಜಾಗಕ್ಕೆ ಹೋಗಿ ಬೇಟೆಯನ್ನು ತಂದು ತನ್ನ ಗೂಡಿನಲ್ಲಿ ಇಡುತ್ತಿತ್ತು. ಉಳಿದ ಗುಬ್ಬಚ್ಚಿಗಳಿಗೋ ಕೂಡಿ ಹಾಕುವಷ್ಟು ಕಾಳು ಸಿಗಲಿಲ್ಲ.

 

ಹೀಗೆ ಕೆಲವು ದಿನಗಳು ಕಳೆದವು. ಮಳೆ ಬಂತು. ಈ ಪೀನೂ ಮಾತ್ರ ತಾನು ಸಂಗ್ರಹಿಸಿಟ್ಟಿದ್ದ ಕಾಳುಗಳನ್ನು ತಿಂದು ಹಾಯಾಗಿತ್ತು. ಇತರ ಪಕ್ಷಿಗಳು ಭಾರೀ ಮಳೆಯಿಂದಾಗಿ ಹಸಿವಿನಿಂದ ಬಳಲುತ್ತಿದ್ದವು ಮತ್ತು ಬೇಟೆಯಾಡಲು ಹೋಗಲಿಲ್ಲ. ದಿನಗಳು ಕಳೆದವು. ಮಳೆ ನಿಲ್ಲಲೇ ಇಲ್ಲ. ಆದ್ದರಿಂದ ಪಕ್ಷಿಗಳು ಇನ್ನೂ ಹಸಿವಿನಿಂದ ಬಳಲುತ್ತಿದ್ದವು. ಮರಿಗಳು ಹಸಿವಿನಿಂದ ಸತ್ತವು. ಇದನ್ನೆಲ್ಲ ನೋಡುತ್ತಿದ್ದ ಪೀನೂ ಗುಬ್ಬಚ್ಚಿ ಮನದಲ್ಲೇ “ಅಯ್ಯೋ ತಪ್ಪಾಗೋಯ್ತು, ಬೇಟೆಗೆ ಹೋದ ಜಾಗದಲ್ಲಿ ಕಾಳು ಜಾಸ್ತಿ ಇತ್ತು, ಆಗಲೇ ಹೇಳಿದ್ದರೆ ನನ್ನ ಗೆಳೆಯರು ಸಹ ಹೋಗುತ್ತಿದ್ದರು. ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು." ಎಷ್ಟೋ ಮರಿಗಳು ಅನ್ಯಾಯವಾಗಿ ಸತ್ತುಹೋದವೇ. ನಾನೇ ಇದಕ್ಕೆ ಕಾರಣ ಎಂದು ತಪ್ಪಿತಸ್ಥ ಭಾವನೆಯಿಂದ ಅಳುತ್ತಾ, ತನ್ನಲ್ಲಿರುವ ಆಹಾರವನ್ನು ಹಸಿವಿನಿಂದ ಬಳಲುತ್ತಿರುವ ಇತರ ಪಕ್ಷಿಗಳಿಗೆ ಹಂಚಿತು. ಕೊನೆಗೆ ಧಾನ್ಯ ಖಾಲಿಯಾಯಿತು. ಮಳೆ ನಿಂತಿಲ್ಲ. ಈಗ ಪೀನೂ ಕೂಡ ಹಸಿವಿನಿಂದ ಬಳಲುತ್ತಿದೆ. ಅಂದು ಗೆಳೆಯರಿಗೆ ಹೇಳಿದ್ದರೆ ಇವತ್ತು ಎಲ್ಲರೂ ಖುಷಿಯಾಗಿರುತ್ತಿದ್ದೆವು ಎಂದುಕೊಂಡು ತುಂಬಾ ಬೇಸರಗೊಂಡಿತು.

 

ಪುಟ್ಟ ತಮ್ಮ, ತಂಗಿ ನೀವು ಸಹ ಯೇಸಪ್ಪನ ಬಳಿ ಪಡೆದುಕೊಂಡ ಉಪಕಾರಗಳನ್ನು, ರಕ್ಷಣೆಯನ್ನು ಇತರರಿಗೆ ಹೇಳದೇ ಇರಬಾರದು. ನಿಮ್ಮೊಂದಿಗೆ ಓದುತ್ತಿರುವ ಮತ್ತು ನಿಮ್ಮ ಬೀದಿಯಲ್ಲಿರುವ ಎಷ್ಟು ಜನರು ನನಗೆ ಯಾರು ಉಪಕಾರ ಮಾಡುತ್ತಾರೆ ಎಂದು ಚಿಂತಿಸುತ್ತಿರುತ್ತಾರೆ. ಯೇಸು ನಿಮಗೆ ಸಹಾಯ ಮಾಡುತ್ತಾರೆ ಎಂದು ನೀವು ಅವರಿಗೆ ಹೇಳಬೇಕು. ಬಹುಶಃ ಅವರು ರಕ್ಷಣೆ ಹೊಂದದೆ ನರಕಕ್ಕೆ ಹೋಗಿಬಿಟ್ಟರೇ ಆ ಆಪಾದನೆ ನಿಮ್ಮ ಮೇಲೆಯೇ ಬೀಳುತ್ತದೆ. ನೀವು ಅನುಭವಿಸಿದ ಯೇಸಪ್ಪನ ಬಗ್ಗೆ ಇತರರಿಗೂ ತಿಳಿಸು.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)