Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 17.05.2024

ಧೈನಂದಿನ ಧ್ಯಾನ(Kannada) – 17.05.2024

 

ವಯಸ್ಕರಿಗೆ ಒಂದು ಸಣ್ಣ ಕಥೆ

 

"…ಉಪಯುಕ್ತನಾಗಿಯೂ ಸಕಲ ಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧನಾಗಿಯೂ ಇರುವನು" - 2 ತಿಮೊಥೆಯ 2:21

 

ಒಬ್ಬ ಮನುಷ್ಯನು ತನ್ನ ಮನೆಯಲ್ಲಿ ಮೂರು ವಸ್ತುಗಳನ್ನು ಇಟ್ಟುಕೊಂಡಿದ್ದನು. ಒಂದು ಕೊಡಲಿ, ಎರಡು ಚಾಕು, ಮೂರು ಬ್ಲೇಡ್‌. ಒಂದು ದಿನ ಮುಂಜಾನೆಯಲ್ಲಿ ಆ ವ್ಯಕ್ತಿ ಮರ ಕಡಿಯಲು ತಯಾರಾಗುತ್ತಿದ್ದ. ಆಗ ಈ ಮೂರು ವಸ್ತುಗಳು ಮಾತನಾಡಿಕೊಳ್ಳುತ್ತಿದ್ದವು. ಕೊಡಲಿಯು ಹೇಳಿತು, "ಈಗ ಯಜಮಾನನು ನನ್ನನ್ನು ತೆಗೆದುಕೊಂಡು ಹೋಗುತ್ತಾರೆ" ಎಂದಿತು. ಅಂತೆಯೇ ಚಾಕು ಮತ್ತು ಬ್ಲೇಡ್ "ಇಲ್ಲ, ಇಲ್ಲ ಅವರು ನನ್ನನ್ನೇ ತೆಗೆದುಕೊಂಡು ಹೋಗುತ್ತಾರೆ" ಎಂದು ಹೇಳಿದವಂತೆ. ಆ ವ್ಯಕ್ತಿ ಕೊಡಲಿಯನ್ನು ತೆಗೆದುಕೊಂಡು ಹೋದರು. ಮರ ಕಡಿದು ಮನೆಗೆ ಬಂದು ಬಿಟ್ಟರು. ಕೊಡಲಿ ತನ್ನ ಬಗ್ಗೆ ಹೆಮ್ಮೆ ಪಡುತ್ತಾ, ಇತರ ಇಬ್ಬರ ಬಗ್ಗೆ ಅಲ್ಪವಾಗಿ ಯೋಚಿಸಿತು. ಸ್ವಲ್ಪ ಹೊತ್ತಿನ ನಂತರ ಆ ಮನುಷ್ಯ ತಿನ್ನಲು ಹಣ್ಣುಗಳನ್ನು ತೊಳೆಯುತ್ತಿದ್ದನು. ಆಗ ಆ ಮೂರು ವಸ್ತುಗಳೂ ನನ್ನನ್ನೇ ಬಳಸಿಕೊಳ್ಳುತ್ತಾನೆ ಎಂದು ಪೈಪೋಟಿ ನಡೆಸಿದವು. ಆದರೆ ಅವರು ಚಾಕು ತೆಗೆದುಕೊಂಡು ಹಣ್ಣನ್ನು ಕತ್ತರಿಸಿ ತಿನ್ನುತ್ತಿದ್ದರು. ಸ್ವಲ್ಪ ಸಮಯದ ನಂತರ ಅವರು ಶೇವಿಂಗ್ ಮಾಡಿಕೊಳ್ಳಲು ಸಿದ್ಧರಾದರು. ಆಗಲೂ ಮೂವರೂ ಚಾಲೆಂಜ್ ಹಾಕಿಕೊಂಡರು. ಅವರು ಬ್ಲೇಡ್ ತೆಗೆದುಕೊಂಡು ಶೇವಿಂಗ್ ಮುಗಿಸಿದರು. ಸ್ವಲ್ಪ ಯೋಚಿಸಿ ನೋಡಿ. ನೀವು ಕೊಡಲಿಯಿಂದ ಹಣ್ಣನ್ನು ಕತ್ತರಿಸಲು ಸಾಧ್ಯವಾ? ನೀವು ಚಾಕುವಿನಿಂದ ಶೇವಿಂಗ್ ಮಾಡಲು ಸಾಧ್ಯವಾ? ಬ್ಲೇಡ್ ನಿಂದ ಮರವನ್ನು ಕತ್ತರಿಸಲು ಸಾಧ್ಯವಾ? ಅಂದರೆ ಮೂರು ವಸ್ತುಗಳ ಕೆಲಸದಲ್ಲಿ ಯಾವುದೇ ಕೊರತೆಯಿಲ್ಲ. ಬಳಸಿದ ಯಜಮಾನನದೂ ಏನೂ ತಪ್ಪಿಲ್ಲ. ಆದರೆ ಈ ಮೂರೂ ವಸ್ತುಗಳು ತಮ್ಮನ್ನು ಮತ್ತು ತಮ್ಮ ಕೆಲಸವನ್ನು ಇತರರೊಂದಿಗೆ ಹೋಲಿಸಿ ನೋಡಿಕೊಂಡಿದ್ದು ತಪ್ಪು!

 

ಪೌಲನು ತಿಮೊಥೆಯನಿಗೆ ಬರೆಯುವಾಗ ಈ ರೀತಿ ಬರೆಯುತ್ತಾರೆ. ಮನೆಯಲ್ಲಿ ಕೇವಲ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳು ಇರುವುದಿಲ್ಲ. ಮರದ ಮತ್ತು ಮಣ್ಣಿನ ಪಾತ್ರೆಗಳಿವೆ ಮತ್ತು ಪ್ರತಿಯೊಂದೂ ಅದಕ್ಕೆ ಅನುಗುಣವಾಗಿ ಬಳಸಲ್ಪಡುತ್ತವೆ. ಹೌದು, ಅವುಗಳಲ್ಲಿ ಪ್ರತಿಯೊಂದನ್ನು ಇತರರೊಂದಿಗೆ ಹೋಲಿಸುವುದರಲ್ಲಿ ಅರ್ಥವಿಲ್ಲ.

 

ಇದನ್ನು ಓದುತ್ತಿರುವ ಸ್ನೇಹಿತರೇ! ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ಅನೇಕ ಬಾರಿ ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು ನಮ್ಮ ಅನುಕೂಲಗಳನ್ನು ಕಳೆದುಕೊಳ್ಳುತ್ತೇವೆ. ಇಲ್ಲಿ ನಾವು ವಿಫಲರಾಗುತ್ತೇವೆ. ದೇವರು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷ ಪ್ರತಿಭೆಯನ್ನು ನೀಡಿದ್ದಾರೆ. "ಕೆಲಸ ಮಾಡಿರಿ, ಹೋಲಿಸಿ ನೋಡಬೇಡಿ". ನೀವು ಒಳ್ಳೆಯದನ್ನು ಮಾಡಲು ಸಿದ್ಧರಾಗಿರಬೇಕು ಮತ್ತು ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು ಬೇಸರಗೊಳ್ಳಬೇಡಿ. ನಿಮ್ಮನ್ನು ನಿಮ್ಮಂತೆಯೇ ದೇವರಿಗೆ ಒಪ್ಪಿಸಿದರೆ ಆತನು ನಿಮ್ಮನ್ನು ಉಪಯೋಗಿಸಲು ಶಕ್ತನಾಗಿದ್ದಾರೆ.

- T. ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಮನೆ ಪ್ರಾರ್ಥನಾ ಕೂಟಗಳಿಗೆ ತಮ್ಮ ಮನೆಗಳನ್ನು ತೆರೆದುಕೊಡುವ ಪಾಲುದಾರರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)