Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 24.04.2024

ಧೈನಂದಿನ ಧ್ಯಾನ(Kannada) – 24.04.2024

 

ಬೇಕಾಗಿರುವುದು ಒಂದೇ

 

"ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ” ಎಂದು ಉತ್ತರಕೊಟ್ಟನು" - ಲೂಕ 10:42

 

ತಂದೆ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಕುಟುಂಬವೂ ತಮಿಳುನಾಡಿನಲ್ಲಿತ್ತು. ರಜೆಗೆಂದು ಊರಿಗೆ ಬಂದಿದ್ದ ತಂದೆ ಒಬ್ಬನೇ ಮಗನಿಗಾಗಿ ಹಲವು ವಸ್ತುಗಳನ್ನು ತೆಗೆದುಕೊಂಡು ಬಂದಿದ್ದರು. ತನ್ನ ಮಗನ ಬಳಿ ಒಂದೊಂದಾಗಿ ಎತ್ತಿ ಕೊಟ್ಟು ಅದನ್ನೆಲ್ಲ ಎಷ್ಟು ಕಷ್ಟಪಟ್ಟು ನಿನಗಾಗಿ ತೆಗದುಕೊಂಡು ಬಂದೆ ಎಂದೆಲ್ಲಾ ಹೇಳಿದರು. ಮಗನು ಆ ವಸ್ತುಗಳಲ್ಲಿ ಆಸಕ್ತಿ ತೋರಲಿಲ್ಲ. ದುಃಖದಿಂದ ತನ್ನ ತಂದೆಯ ಮುಖವನ್ನು ನೋಡುತ್ತಿದ್ದನು. ಮಗನನ್ನು ಅಪ್ಪಿಕೊಂಡು ವಿಚಾರಿಸಿದರು. ಅಪ್ಪಾ ನನಗೆ ಇವೆಲ್ಲಾ ಬೇಡ. ನನಗೆ ನೀವು ಬೇಕು. ನೀವು ಇವುಗಳನ್ನೆಲ್ಲಾ ಪ್ರೀತಿಯಿಂದ ಖರೀದಿಸಿದ್ದು ನಿಜವೇ, ಆದರೆ ನಾನು ಇವುಗಳಿಗಾಗಿ ಹಂಬಲಿಸುವುದಿಲ್ಲ, ನೀವು ನನ್ನೊಂದಿಗೇ ಇರಬೇಕು. ನನ್ನನ್ನು ಸ್ಕೂಲ್ ಗೆ ಕರೆದುಕೊಂಡು ಹೋಗಬೇಕು, ನಾನು ನಿಮ್ಮ ಮಡಿಲಲ್ಲಿ ಕೂತು ಹೋಮ್ ವರ್ಕ್ ಮಾಡ್ಕೊಂಡು ನಿಮ್ಮ ಜೊತೆ ಆಟವಾಡಬೇಕು. ಅದೇ ನನ್ನ ಆಸೆ ಎಂದನು.

 

ಇದನ್ನು ಸತ್ಯವೇದದಲ್ಲಿನ ಒಂದು ಘಟನೆಗೆ ಹೋಲಿಸೋಣ. ಬೇಥಾನ್ಯದ ಮಾರ್ಥಳು ಮರಿಯಳು ಎಂಬ ಇಬ್ಬರು ಸಹೋದರಿಯರ ಮನೆಗೆ ಯೇಸುಕ್ರಿಸ್ತನು ಬಂದರು. ಮಾರ್ಥಳು ಅನೇಕ ಕೆಲಸಗಳನ್ನು ಮಾಡುತ್ತಿದ್ದಳು. ಯೇಸುವಿನ ಪಾದದ ಬಳಿ ಕುಳಿತು ಆತನ ಮಾತನ್ನು ಕೇಳುವುದು ಮತ್ತು ಆತನೊಂದಿಗೆ ಮಾತನಾಡುವುದು ಮರಿಯಳ ಬಯಕೆಯಾಗಿತ್ತು. ಆದರೆ ಮಾರ್ಥಳು ಕೆಲಸದಿಂದ ದಣಿದು ಯೇಸುವಿನ ಬಳಿಗೆ ಹೋಗಿ ನಾನು ಒಬ್ಬಂಟಿಯಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಎಂದು ಪ್ರಲಾಪಿಸುತ್ತಾಳೆ. ನೀನು ಅನೇಕ ಕಾರ್ಯಗಳ ಬಗ್ಗೆ ಕಳವಳಗೊಳ್ಳುತ್ತಿದ್ದೀಯ, ಚಿಂತಿಸುತ್ತಿದ್ದೀಯ. ಬೇಕಾಗಿರುವುದು ಒಂದೇ, ಮರಿಯಳು ಅದನ್ನು ಆರಿಸಿಕೊಂಡಳು ಎಂದರು ಯೇಸು.

 

ಕ್ರಿಸ್ತನಲ್ಲಿ ಪ್ರಿಯರೇ! ಲೋಕದಲ್ಲಿ ವಾಸಿಸುವ ಮಗ ತನ್ನ ತಂದೆ ಎಷ್ಟೇ ವಸ್ತುಗಳನ್ನು ತೆಗೆದುಕೊಂಡು ಬಂದರೂ ತಂದೆಯ ಪ್ರೀತಿಯನ್ನೇ ನಿರೀಕ್ಷಿಸುತ್ತಾನೆ. ಹೀಗಿರುವಾಗ ನಿನ್ನನ್ನೂ ನನ್ನನ್ನೂ ಸೃಷ್ಟಿಸಿದ ದೇವರ ನಿರೀಕ್ಷೆ ಏನು ಗೊತ್ತಾ? ಅವರ ಸಮ್ಮುಖದಲ್ಲಿ ಕಾದಿರಬೇಕು ಎಂದು. ನಾವು ಎಷ್ಟೇ ಕಾಣಿಕೆ ಕೊಟ್ಟರೂ, ಇತರರಿಗೆ ಸಹಾಯ ಮಾಡಿದರೂ, ಸೇವೆ ಮಾಡಿದರೂ ನಾವು ಅವರೊಂದಿಗೆ ಕುಳಿತುಕೊಳ್ಳಬೇಕು. ಸಮಯ ಕಳೆಯಬೇಕು. ಹೌದು, ನಾವು ಅವರ ಪಾದದಲ್ಲಿ ಕಾದಿರೋಣ. ಸಮಾಧಾನ ಮತ್ತು ಸಂತೋಷವನ್ನು ಪಡೆಯೋಣ.

- Sis. ಫಾತಿಮಾ

 

ಪ್ರಾರ್ಥನಾ ಅಂಶ:

ನಮ್ಮ ಸೇವೆಗಳನ್ನು ಬೆಂಬಲಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)