Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 13.04.2024

ಧೈನಂದಿನ ಧ್ಯಾನ(Kannada) – 13.04.2024

 

ಉಪವಾಸ

 

"ಉಪವಾಸ ದಿನವನ್ನು ಏರ್ಪಡಿಸಿರಿ;..." - ಯೋವೇಲ 1:14

 

ರಾಮು ಒಬ್ಬ ಶ್ರೇಷ್ಠ ಓಟಗಾರ. ಆತ ಆರನೇ ತರಗತಿಯಲ್ಲಿ ಓದುತ್ತಿದ್ದ. ಆಗ ಪ್ರಥಮ ಬಾರಿಗೆ ತಮ್ಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದನು. ಅವನಿಗೆ ವಿಶೇಷ ತರಬೇತಿಯನ್ನು ಪ್ರಾರಂಭಿಸಿದರು. ಅವನ ಎತ್ತರ ಮತ್ತು ತೂಕವನ್ನು ಮೊದಲು ಪರಿಶೀಲಿಸಲಾಯಿತು. ನಂತರ ಶಿಕ್ಷಕರು ತರಬೇತಿಯನ್ನು ಪ್ರಾರಂಭಿಸಿದರು. ಅವರು ತೂಕ ಇಳಿಸಿಕೊಳ್ಳಲು ಸಲಹೆ ನೀಡಿದರು. ಅವರು ಆಹಾರ ವಿಧಾನವನ್ನು ಹೇಳಿದರು. ಓಟದ ದಿನ ಟೀಚರ್ ರಾಮುಗೆ ಬೆಳಿಗ್ಗೆ ಊಟ ಮಾಡಬೇಡ, ನಾನು ಕೊಡುವುದನ್ನು ತೆಗೆದುಕೋ ಎಂದು ಹೇಳಿ ಜ್ಯೂಸ್ ಮತ್ತು ಗ್ಲುಕೋಸ್ ಕೊಟ್ಟರು. ಬೆಳಗ್ಗೆ ಏಳು ಗಂಟೆಗೆ ಪಂದ್ಯ ಆರಂಭವಾಯಿತು. ರಾಮು ಗೆದ್ದನು. ಹೌದು, ಬಯಸಿದ ಆಹಾರವನ್ನು ತೊರೆಯುವವರು ಮತ್ತು ಅಗತ್ಯವಿರುವ ಸಾಮಾನ್ಯ ಆಹಾರವನ್ನು ತೆಗೆದುಕೊಳ್ಳಲು ತಿಳಿದವರು ಮಾತ್ರವೇ ಕ್ರೀಡಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ನಮ್ಮ ಆಧ್ಯಾತ್ಮಿಕ ಜೀವನದಲ್ಲೂ ಉಪವಾಸ ಅಗತ್ಯ.

 

ಆದರೆ ಇಂದಿನ ಕ್ರೈಸ್ತ ಜಗತ್ತಿನಲ್ಲಿ ಉಪವಾಸವು ಮರೆತುಹೋದ ಒಂದು ವಿಷಯವಾಗಿದೆ. Fasting ಅಲ್ಲ, Feasting ಅಭ್ಯಾಸವಾಗಿಬಿಟ್ಟಿದೆ. ಎಸ್ತೇರ್ ರಾಣಿ ಉಪವಾಸವಿದ್ದು ಪ್ರಾರ್ಥಿಸಿ ಯೆಹೂದ ಕುಲವನ್ನು ಕಾಪಾಡಿದರು. ನಿನೆವೆಯ ಜನರು ಉಪವಾಸವಿದ್ದು ಪ್ರಾರ್ಥಿಸಿ ದೇವರ ಕರುಣೆಯನ್ನು ಪಡೆದರು. ಮತ್ತು ವಿನಾಶದಿಂದ ರಕ್ಷಿಸಲ್ಪಟ್ಟರು. ನೆಹೆಮಿಯನು ಉಪವಾಸವಿದ್ದು ಪ್ರಾರ್ಥಿಸಿ ದೇವರ ಯೋಜನೆಯನ್ನು ಸ್ವೀಕರಿಸಿ ನೆರವೇರಿಸಿ ಮುಗಿಸಿದರು. ಅಷ್ಟೇ ಏಕೆ ಯೇಸು ಕ್ರಿಸ್ತನೇ ಈ ಭೂಮಿಯ ಮೇಲೆ ಸಂಚರಿಸಿದ ದಿನಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸುವ ಮೊದಲು ಉಪವಾಸವಿದ್ದು ಪ್ರಾರ್ಥಿಸಿ ಪ್ರಾರಂಭಿಸಿದರು. ಸೈತಾನನನ್ನು ವಾಕ್ಯದ ಮೂಲಕ ಉಪವಾಸದ ಫಲದಿಂದ ಜಯಿಸಿದರು. ದೆವ್ವಗಳನ್ನು ಜಯಿಸಬೇಕಾದರೆ ಉಪವಾಸ ಅಗತ್ಯ. "ಈ ಜಾತಿಯು ದೇವರ ಪ್ರಾರ್ಥನೆ ಮತ್ತು ಉಪವಾಸದಿಂದಲೇ ಹೊರತು ಬೇರೆ ಯಾತರಿಂದಲೂ ಬಿಟ್ಟು ಹೋಗುವದಿಲ್ಲವೆಂದು ಮಾರ್ಕ 9: 29 ರಲ್ಲಿ ಓದುತ್ತೇವೆ. ನಾವು ಉಪವಾಸ ಮಾಡುವಾಗ ಪ್ರಾರ್ಥನೆ ಮತ್ತು ಸತ್ಯವೇದ ಧ್ಯಾನದಲ್ಲಿರಬೇಕು. ಆಗ ಹೊಸ ಶಕ್ತಿಯನ್ನು ಪಡೆಯುತ್ತೇವೆ. ಆದ್ದರಿಂದ ನಾವು ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ಜಯಿಸಬಹುದು.

 

ಪ್ರಿಯರೇ, ಪಾಪ ಶಾಪದ ಕಟ್ಟುಗಳಿಂದ ಬಂಧಿಸಲ್ಪಟ್ಟಿದ್ದೇನೆ, ಬಿಡುಗಡೆ ಬೇಕು ಎಂದು ಬಯಸುತ್ತೀರಾ? ಒಂದು ಹೊತ್ತು ಆದರೂ ಉಪವಾಸವಿದ್ದು ಅವರ ಪಾದದ ಬಳಿ ಕುಳಿತುಕೊಳ್ಳಿರಿ. ಒಂದು ಕೆಲಸವನ್ನು ಪ್ರಾರಂಭಿಸುವ ಮೊದಲು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಉಪವಾಸವಿದ್ದು ಪ್ರಾರ್ಥಿಸಿರಿ. ಮದುಮಗನನ್ನು ಕರೆದೊಯ್ಯುವ ದಿನಗಳು ಬರುತ್ತವೆ ಆಗ ಉಪವಾಸ ಮಾಡುತ್ತಾರೆ ಎಂದು ಯೇಸು ಕ್ರಿಸ್ತನು ಹೇಳುತ್ತಾರೆ. ಆದರೆ ನಾವು ಇರುವ ಕಾಲವನ್ನು ತಿಳಿಯದೆ ಉಪವಾಸ ಮಾಡದೇ ಇದ್ದೇವೆ. ಉಪವಾಸ ಮಾಡೋಣ, ದೆವ್ವಗಳನ್ನು ಜಯಿಸಿ ಲೋಕದಲ್ಲಿ ಅವರೊಂದಿಗೆ ವಿಜಯದ ಜೀವನವನ್ನು ನಡೆಸೋಣ.

- Mrs. ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಅಂಶ:

ನಮ್ಮೊಂದಿಗಿರುವ ಸಹ ಸೇವಕರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)