Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 12.04.2024

ಧೈನಂದಿನ ಧ್ಯಾನ(Kannada) – 12.04.2024

 

ಸೂಕ್ತವಾದ ಬಟ್ಟೆ

 

"…ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನಲ್ಲಾ" - ಯೆಶಾಯ 61:10

 

ಸತತ ಭಾರೀ ಮಳೆಯ ನಂತರ ಶಾಲೆ ತೆರೆಯಲಾಯಿತು. ವಿದ್ಯಾರ್ಥಿಗಳು ಬರುತ್ತಿದ್ದರು. ಕೆಲವರ ಬರೋಣ ಅರ್ಥವಾಗಲಿಲ್ಲ. ಬಂದಿದ್ದ ಕೆಲ ವಿದ್ಯಾರ್ಥಿಗಳು ಸಮವಸ್ತ್ರದ ಬದಲು ಬಣ್ಣಬಣ್ಣದ ಬಟ್ಟೆ ಧರಿಸಿದ್ದರು. ಶಾಲೆಯ ಗಂಟೆ ಬಾರಿಸಿದಾಗ ಮೂವರು ವಿದ್ಯಾರ್ಥಿಗಳು ವೇಗವಾಗಿ ಓಡಿದರು. ಪರಿಪೂರ್ಣ ಸಮವಸ್ತ್ರದಲ್ಲಿದ್ದ ಅವರನ್ನು ನೋಡಿ ಶಿಕ್ಷಕರಿಗೆ ಆಶ್ಚರ್ಯವಾಯಿತು! ಯೂನಿಫಾರಂನಲ್ಲಿ ಬರದವರು "ಒದ್ದೆ ಸಾರ್", "ಕೊಳೆಯಾಗಿದೆ ಸಾರ್", "ಒಣಗಿಲ್ಲ ಸಾರ್", ಹೀಗೆ ಹಲವು ಕಾರಣಗಳನ್ನು ಹೇಳುತ್ತಿದ್ದರು. ಈ ಮೂವರಿಗೂ ವಾಸಿಸಲು ಸ್ಥಳವಿಲ್ಲದೆ ಮರದ ಕೆಳಗೆ ಒಟ್ಟಿಗೆ ವಾಸಿಸುವ ಸಮುದಾಯವದು. ಚಾಟಿಯಲ್ಲಿ ಹೊಡೆದುಕೊಂಡು, ಭಿಕ್ಷೆ ಬೇಡುತ್ತಾ, ಸಣ್ಣ ಪ್ರಾಣಿಗಳನ್ನು ಬೇಟೆಯಾಡಿ ಬದುಕುವ ಜನ ಇವರು. ಮಾರಪ್ಪನ್, ನೀವು ಹೇಗೋ ಸಮವಸ್ತ್ರವನ್ನು ಭದ್ರವಾಗಿ ಇಟ್ಟುಕೊಂಡಿದ್ರಿ? "ನಾವು ಶಾಲೆಯ ಬಟ್ಟೆಗಳನ್ನು ಮಾತ್ರ ಪ್ಯಾಕ್ ಮಾಡಿ ಪಕ್ಕದ ಕಟ್ಟಡದ ಒಂದು ಮೂಲೆಯಲ್ಲಿ ಭದ್ರವಾಗಿ ಇಟ್ಟುಬಿಟ್ಟೋ ಟೀಚರ್." ಅದನ್ನು ಹೇಳುವಾಗಲೇ ಆ ವಿದ್ಯಾರ್ಥಿಯ ಮುಖದಲ್ಲಿ ತುಂಬಾ ಸಂತೋಷ! ಮುಖ್ಯೋಪಾಧ್ಯಾಯರು ಅವರಿಗಿದ್ದ ಜವಾಬ್ದಾರಿಯನ್ನು ಕಂಡು ಹೊಗಳಿದರು.

 

ಪ್ರಿಯರೇ! ಈ ವಿದ್ಯಾರ್ಥಿಗಳು ಸಮವಸ್ತ್ರವನ್ನು ಭದ್ರವಾಗಿಟ್ಟುಕೊಂಡು ಶಾಲೆಗೆ ಅದನ್ನು ಧರಿಸಿಕೊಂಡು ಬಂದಂತೆಯೇ ನಮಗೂ ಒಂದು ಜವಾಬ್ದಾರಿ ಇದೆ. ನಮ್ಮ ಪರಲೋಕದ ತಂದೆಯು ನಮ್ಮಿಂದ ನಿರೀಕ್ಷಿಸುವುದು ಅದನ್ನೇ. ನಾವು ನಮ್ಮ ರಕ್ಷಣೆಯ ವಸ್ತ್ರಗಳನ್ನು ಸಂರಕ್ಷಿಸಿದವರಾಗಿ ಪರಲೋಕ ರಾಜ್ಯಕ್ಕೆ ತಲುಪಬೇಕು. ಒಬ್ಬ ರಾಜನು ತನ್ನ ಮನೆಯ ವಿವಾಹಕ್ಕೆ ಆಗಮಿಸಿದ್ದ ಅತಿಥಿಗಳನ್ನು ನೋಡಲು ಒಳಗೆ ಪ್ರವೇಶಿಸಿದಾಗ ಮದುವೆಯ ವಸ್ತ್ರಗಳನ್ನು ಧರಿಸದೆ ಬಂದಿದ್ದ ಒಬ್ಬ ವ್ಯಕ್ತಿಯನ್ನು ನೋಡಿ "ನೀನು ಮದುವೆ ವಸ್ತ್ರವಿಲ್ಲದೆ ಇಲ್ಲಿಗೆ ಹೇಗೆ ಬಂದೆ?" ಎಂದು ಕೇಳಿದರು. ಅದಕ್ಕೆ ಅವನು ಮಾತಾಡಲಿಲ್ಲ." ನೋಡಿ, ನಾವು ಆ ಸ್ಥಳಕ್ಕೆ ಸಂಬಂಧಿಸಿದಂತೆ ಯೋಗ್ಯವಾದ ಬಟ್ಟೆಗಳನ್ನು ಧರಿಸಿದಾಗ ಮಾತ್ರವೇ ಆ ಸ್ಥಳದಲ್ಲಿರಲು ಅರ್ಹರಾಗಿರುತ್ತೇವೆ. ಹಾಗಾದರೆ ಪರಲೋಕ ರಾಜ್ಯದಲ್ಲಿ ಯೇಸುವಿನೊಂದಿಗೆ ಸಂತೋಷವಾಗಿರಲು, ಆತನ ರಕ್ತವು ಮಾತ್ರವೇ ಪಾಪವನ್ನು ಹೋಗಲಾಡಿಸುತ್ತದೆ ಎಂದು ನಂಬಿ, ಯೇಸು ನನಗಾಗಿ ತನ್ನ ಪ್ರಾಣವನ್ನು ಕೊಟ್ಟಿದ್ದಾರೆ ಎಂಬ ದೃಢವಿಶ್ವಾಸದಿಂದ ನಮ್ಮ ಪಾಪಗಳನ್ನು ಒಪ್ಪಿಕೊಂಡು ಬಿಟ್ಟು ಬಿಡುವಾಗ ನಾವು ರಕ್ಷಣೆ ಹೊಂದಿದವರೆಂಬ ಅರ್ಹತೆಯೊಂದಿಗೆ ರಕ್ಷಣೆಯ ವಸ್ತ್ರಗಳನ್ನು ಧರಿಸಿದವರಾಗಿ ಮಾರ್ಪಡುತ್ತೇವೆ. ಸತತವಾಗಿ ನಿಮ್ಮ ರಕ್ಷಣೆಯನ್ನು ಕಾಪಾಡಿಕೊಂಡು ಬಟ್ಟೆಗಳನ್ನು ಅಶುದ್ಧಗೊಳಿಸದೆ ಕಾಪಾಡಿಕೊಳ್ಳುವಾಗ ಪರಲೋಕದಲ್ಲಿ ಅವರೊಂದಿಗೆ ನಡೆಯುವ ಭಾಗ್ಯವನ್ನು ಹೊಂದಬಹುದು. ಪಾಪಕ್ಷಮಾಪಣೆಯೇ, ರಕ್ಷಣೆಯ ವಸ್ತ್ರಗಳನ್ನು ಪಡೆಯುವ ಮಾರ್ಗ!

 

ನಿಮ್ಮ ರಕ್ಷಣೆಯ ವಸ್ತ್ರಗಳನ್ನು ಕಾಪಾಡಿಕೊಳ್ಳುವಂತೆ ಪುನಃ ಪಾಪದ ಕೆಸರಿನಲ್ಲಿ ಬೀಳದಂತೆ ನೀವು ಎಚ್ಚರಿಕೆಯಿಂದಿರುತ್ತೀರಾ? ಮತ್ತೊಬ್ಬರಿಗೂ ಈ ಅಮೂಲ್ಯವಾದ ರಕ್ಷಣೆಯ ಕುರಿತು ಮಾರ್ಗದರ್ಶನ ನೀಡಲು ನೀವು ಹೇಗಾದರೂ ಪ್ರಯತ್ನಿಸುತ್ತೀರಾ?

- Mrs. ಎಮೀಮಾ ಸೌಂದರರಾಜನ್

 

ಪ್ರಾರ್ಥನಾ ಅಂಶ:

ಸೇವಾ ಕ್ಷೇತ್ರಗಳಲ್ಲಿ ನಡೆಯುವ ಮನೆ ಪ್ರಾರ್ಥನಾ ಕೂಟಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)