Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 11.04.2024

ಧೈನಂದಿನ ಧ್ಯಾನ(Kannada) – 11.04.2024

 

ಮಾರ್ಗದರ್ಶಿ 

 

"…ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿಹೋದನು." - 1 ಪೇತ್ರ 2:21

 

ನಮ್ಮಲ್ಲಿ ಪ್ರತಿಯೊಬ್ಬರೂ ಯಾರೋ ಒಬ್ಬರನ್ನು ಹಿಂಬಾಲಿಸುವವರಾಗಿದ್ದೇವೆ. ಬಾಲ್ಯದಲ್ಲಿ ನಾವು ನಮ್ಮ ತಾಯಿ ತಂದೆಯನ್ನು ನೋಡಿ ಅವರಂತೆ ಬದುಕಲು ಪ್ರಾರಂಭಿಸುತ್ತೇವೆ. ನಂತರ ಶಿಕ್ಷಕರನ್ನು ನಂತರ ನಾವು ಇಷ್ಟಪಡುವವರನ್ನು ಕಂಡಾಗ, ಅವರನ್ನು ಅನುಕರಿಸಲು ಪ್ರಾರಂಭಿಸುತ್ತೇವೆ. ನಾವು ನಮ್ಮ ಹದಿಹರೆಯದ ವರ್ಷಗಳಲ್ಲಿ ಕ್ರಿಕೆಟಿಗರನ್ನು ಅಥವಾ ಚಲನಚಿತ್ರ ನಾಯಕರನ್ನು ಅನುಕರಿಸಲು ಪ್ರಾರಂಭಿಸುತ್ತೇವೆ. ಬೆಳೆಯುತ್ತಿರುವಾಗ, ನಾವು ನಮ್ಮ ನೆಚ್ಚಿನ ರಾಜಕಾರಣಿಗಳು ಮತ್ತು ನಾಯಕರನ್ನು ನಮ್ಮ ರೋಲ್ ಮಾಡೆಲ್‌ಗಳಾಗಿ ಅನುಸರಿಸಲು ಪ್ರಾರಂಭಿಸುತ್ತೇವೆ. ಎಲ್ಲರಿಗಿಂತಲೂ ಉತ್ತಮ ಉದಾಹರಣೆಯಾಗಿ ಬದುಕಿದವರು ಯೇಸು ಒಬ್ಬರೇ! ಕರ್ತನಾದ ಯೇಸುಕ್ರಿಸ್ತನು ಭೂಮಿಯ ಮೇಲೆ ಜೀವಿಸಿದ ದಿನಗಳಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಉದಾಹರಣೆಗಳಂತಹ ಅನೇಕ ಕಾರ್ಯಗಳನ್ನು ಮಾಡಿ, ಜೀವಿಸಿ ಹೋಗಿದ್ದಾರೆ. ಅಂತಹ ಕೆಲವು ಕಾರ್ಯಗಳನ್ನು ಯೋಚಿಸೋಣ.

 

ಪ್ರೀತಿ: ಪ್ರೀತಿ ತೋರಿಸುವುದರಲ್ಲಿ ಅವರು ಮೂಲಮಾದರಿಯಾಗಿದ್ದರು. ಅವರು ತಮ್ಮ ಶಿಷ್ಯರಿಗೆ ಅಪಾರ ಪ್ರೀತಿಯನ್ನು ತೋರಿಸಿದರು. ಯೇಸು ತನ್ನ ಶಿಷ್ಯರನ್ನು ಸ್ನೇಹಿತರೆಂದು ಕರೆದರು. ಮನುಕುಲಕ್ಕಾಗಿ ತನ್ನ ಪ್ರಾಣವನ್ನು ಕೊಡುವ ಮೂಲಕ ತನ್ನ ಪ್ರೀತಿಯನ್ನು ತೋರಿಸಿದರು.

 

ವಿಧೇಯತೆ: ಕರ್ತನಾದ ಯೇಸು ಕ್ರಿಸ್ತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. (ಫಿಲಿಪ್ಪಿ 2:6-8) ಯೇಸು ಇನ್ನೂ ತನ್ನ ವಿಧೇಯತೆಯನ್ನು ಹೊರಪಡಿಸುವ ಹಾಗೆ ತನ್ನ ಶಿಷ್ಯರ ಕಾಲುಗಳನ್ನು ತೊಳೆದರು. ಎಂಥಾ ಒಂದು ವಿಧೇಯತೆ! ಅವರ ವಿಧೇಯತೆ ಸಾಯುವವರೆಗೂ ಮುಂದುವರೆಯಿತು. ನಾವು ಕೂಡ ನಿಜವಾದ ಮನದಾಳದ ವಿಧೇಯತೆಯೊಂದಿಗೆ ಜೀವಿಸೋಣ. 

 

ಪರಿಶುದ್ಧ ಜೀವನ: ಕರ್ತನಾದ ಯೇಸು ಭೂಮಿಯ ಮೇಲೆ ಜೀವಿಸಿದ ದಿನಗಳಲ್ಲಿ ಪರಿಶುದ್ಧವಾಗಿ ಮತ್ತು ಪಾಪರಹಿತವಾಗಿ ಜೀವಿಸಿ ತೋರಿಸಿದರು. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿ ಜೀವಿಸಿರಿ ಎಂದು ಬದುಕಿ ತೋರಿಸಿದ್ದಾರೆ. ಯೇಸುವಿನ ಪರಿಶುದ್ಧ ಜೀವನವನ್ನು ಪ್ರತಿದಿನ ಬಯಸೋಣ. ಪರಿಶುದ್ಧತೆ ಇಲ್ಲದೆ ನಾವು ದೇವರನ್ನು ನೋಡಲು ಸಾಧ್ಯವಿಲ್ಲ!

 

ಕ್ಷಮೆ: ಇತರರನ್ನು ಕ್ಷಮಿಸುವುದು ಬಹಳ ಮುಖ್ಯ. ಯೇಸು ಕಲಿಸಿದ ಪ್ರಾರ್ಥನೆಯಲ್ಲಿ, ನಮಗೆ ತಪ್ಪು ಮಾಡಿದವರನ್ನು ನಾವು ಕ್ಷವಿುಸಿದಂತೆ ನಮ್ಮ ತಪ್ಪುಗಳನ್ನು ಕ್ಷವಿುಸು ಎಂದು ಪ್ರಾರ್ಥಿಸಲು ಕಲಿಸಿದರು. ಯೇಸು ನಮ್ಮನ್ನು ಕ್ಷಮಿಸಿ ಅಂಗೀಕರಿಸಿದಂತೆ ನಾವು ಸಹ ಇತರರನ್ನು ಕ್ಷಮಿಸೋಣ.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ, ನಮ್ಮ ಜೀವನದಲ್ಲಿ ಅತ್ಯುತ್ತಮ ಮಾರ್ಗದರ್ಶಿ ಯೇಸು ಎಂಬುದನ್ನು ಈ ಲೋಕದಲ್ಲಿ ಬದುಕಿ ತೋರಿಸೋಣ. ಅವರು ತೋರಿಸಿದ ದಾರಿಯಲ್ಲಿ ನಡೆದು ಅವರ ಹೆಜ್ಜೆ ಜಾಡನ್ನು ಹಿಂಬಾಲಿಸಿ ಆಶೀರ್ವಾದ ಪಡೆಯೋಣ. ಆಳ್ವಿಕೆಯನ್ನೂ ಮಾಡೋಣ. ಆಮೆನ್!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಫಿಲಿಪ್ ಗಾಸ್ಪೆಲ್ ತಂಡದ ಮೂಲಕ ಭೇಟಿಯಾಗುವ ಹಳ್ಳಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)