Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 02.03.2024

ಧೈನಂದಿನ ಧ್ಯಾನ(Kannada) – 02.03.2024

 

ಕ್ರಿಸ್ತನನ್ನು ಪ್ರಕಟಿಸಿರಿ

 

"ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು; ನಮ್ಮ ದೇವರನ್ನು ಮಹಾಮಹಿಮೆಯುಳ್ಳವನೆಂದು ಕೊಂಡಾಡಿರಿ." - ಧರ್ಮೋಪದೇಶಕಾಂಡ 32:3

 

ನನ್ನ ಹೃದ್ರೋಗವನ್ನು ಗುಣಪಡಿಸಿ, ನನ್ನ ಕಣ್ಣೀರನ್ನು ಒರೆಸಿದಾತನು, ಕಣ್ಣೀರು ಸುರಿಸುವುದನ್ನು ದರ್ಶನದಲ್ಲಿ ನೋಡಿದ ನಾನು, ಅವರ ಕಣ್ಣೀರನ್ನು ಒರೆಸಲು ಉದ್ದೇಶಿಸಿದೆ. ಜನರು ಅವರನ್ನು ಅರಿಯಲಿಲ್ಲ ಎಂಬುದಕ್ಕಾಗಿ ತಾನೆ ಅಳುತ್ತಿದ್ದಾರೆ. ಅವರ ಬಗ್ಗೆ ಜನರಿಗೆ ಹೇಳೋಣ ಅಂದುಕೊಂಡು ಪಕ್ಕದ ಹಳ್ಳಿಗೆ ಹೋಗಿ ಮನೆಮನೆಯ ಬಾಗಿಲು ತಟ್ಟಿ ಯೇಸುವೇ ನಿಜವಾದ ದೇವರು ಅವರನ್ನು ಸ್ವೀಕರಿಸಿ ಎಂದು ಹೇಳಿದೆ. ಅವರು ನನಗೆ ಸ್ವಸ್ಥತೆ ನೀಡಿದರು. ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ಹೇಳುತ್ತಾ ಬಂದೆ. ಅಲ್ಲಿ ಒಂದು ಮನೆಯಲ್ಲಿ ಒಂದು ವಯಸ್ಸಾದ ತಾಯಿ ಮರಣದ ಹಾಸಿಗೆಯ ಮೇಲೆ ಮಲಗಿದ್ದರು. ಸುತ್ತಲೂ ಅವರ ಸಂಬಂಧಿಕರೇ ಇದ್ದರು. ನಾನು ಎಲ್ಲಾ ಮನೆಗಳಲ್ಲಿ ಹೇಳಿದಂತೆಯೇ ಅಲ್ಲಿಯೂ ಹೇಳಿದೆ. ಯೇಸುವಿನ ಅನುಯಾಯಿಗಳು ಪ್ರಾರ್ಥಿಸಿದರೆ ಒಳ್ಳೆಯದು ಸಂಭವಿಸುತ್ತದೆ ಎಂದು ಹೇಳುತ್ತಾರೆ, ಆದ್ದರಿಂದ ಪ್ರಾರ್ಥಿಸು ಎಂದರು. ನಾನು ಭಯಪಟ್ಟು ನನಗೆ ಪ್ರಾರ್ಥಿಸಲು ಗೊತ್ತಿಲ್ಲ ಎಂದು ಹೇಳಿದೆ. ಅವರು ಆ ತಾಯಿಯನ್ನು ಮಂಚದೊಂದಿಗೆ ಮನೆಯಿಂದ ಹೊರಗೆ ಕರೆತಂದರು. ಅವರು ನನ್ನ ಅಂಗಿ ಹಿಡಿದು ಪ್ರಾರ್ಥಿಸು ಎಂದರು. ನನ್ನನ್ನು ಹೊಡೆದುಬಿಡುತ್ತಾರೇನೋ ಎಂದು ಹೆದರಿ ಯೇಸಪ್ಪಾ ಈ ತಾಯಿಯ ಮೈಗೆ ಏನೋ ಆಗಿದೆ, ಏನಾದರೂ ಮಾಡಿ ಸರಿಮಾಡಿ ಎಂದು ಹೇಳಿದೆ. ತಕ್ಷಣವೇ ಅವರ ಕೈ ಕಾಲುಗಳು ಎಳೆದವು. ಅವರು ಹಾಸಿಗೆಯಿಂದ ಕೆಳಗೆ ಬಿದ್ದರು. ಉಸಿರು ಇಲ್ಲ ಎಂದು ಒಬ್ಬರು ಹೇಳಿದರು. ಇನ್ನೊಬ್ಬರು ಪಾತ್ರೆಯಲ್ಲಿ ನೀರು ತಂದು ಚಿಮುಕಿಸಿದಾಗ ಎದ್ದು ಕುಳಿತು ಮಾತನಾಡಿದರು. ಹುಷಾರಾಗಿ ಬಿಟ್ಟರು. ಎಲ್ಲರಿಗೂ ಸಂತೋಷವಾಯಿತು.

 

ನನಗೆ ಪ್ರಿಯರಾದವರೇ! ಪೇತ್ರನು ದೇವಾಲಯಕ್ಕೆ ಹೋಗುತ್ತಿರಲು ಹುಟ್ಟುಕುಂಟನಾಗಿದ್ದ ಒಬ್ಬ ಮನುಷ್ಯನ ಬಳಿ, "ಬೆಳ್ಳಿಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವದನ್ನು ನಿನಗೆ ಕೊಡುತ್ತೇನೆ. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲೇ ಎದ್ದು ನಡೆದಾಡು" ಎಂದರು. ತಕ್ಷಣ ಎದ್ದು ನಡೆದನು. ಇದನ್ನು ಓದುತ್ತಿರುವ ಪ್ರಿಯರೇ! ನೀವು ರಕ್ಷಣೆ ಹೊಂದಿದವರಾದರೆ, ನೀವು ಎಷ್ಟು ಜನರಿಗೆ ಆತನ ಬಗ್ಗೆ ಹೇಳಿದ್ದೀರಿ. ನಾನು ಸೇವೆಯನ್ನು ಪ್ರಾರಂಭಿಸಿದಾಗ ನನ್ನ ಬಳಿ ಬೈಬಲ್ ಇರಲಿಲ್ಲ, ನನಗೆ ಹೇಗೆ ಪ್ರಾರ್ಥನೆ ಮಾಡಬೇಕೆಂದು ತಿಳಿದಿರಲಿಲ್ಲ, ನಾನು ಎಂದಿಗೂ ಚರ್ಚ್‌ಗೆ ಹೋಗಿರಲಿಲ್ಲ. ಯೇಸು ಅಳುತ್ತಿರುವುದನ್ನು ನಾನು ದರ್ಶಿಸಿದೆ. ನಾನು ತಕ್ಷಣ ಅವರ ಕಣ್ಣೀರನ್ನು ಒರೆಸಲು ನನ್ನ ಕೈಲಾದಷ್ಟು ಮಾಡಿದೆ. ನೀವು ಕ್ರಿಸ್ತನನ್ನು ಸ್ವೀಕರಿಸಿ ಎಷ್ಟು ದಿನಗಳಾಗಿವೆ? ನೀವು ಯೇಸುವಿನ ಬಗ್ಗೆ ಎಷ್ಟು ಜನರಿಗೆ ಹೇಳಿದ್ದೀರಿ?

 

ಇಂದು ಅನೇಕ ಜನರು ಸೇವೆಯನ್ನು ಮಾಡಲು ಅಭಿಷೇಕ, ವರಗಳು, ಬಲವನ್ನು ಹೊಂದಿರಬೇಕು ಆಗಲೇ ಸೇವೆಯನ್ನು ಮಾಡಲು ಸಾಧ್ಯ ಎಂದು ಭಾವಿಸುತ್ತಾರೆ. ಆದರೆ ನಾನು ಹೇಳುತ್ತೇನೆ, ನೀವು ಯೇಸುವನ್ನು ಸ್ವೀಕರಿಸಿದ್ದರೆ ಮತ್ತು ನಿಮ್ಮ ಜೀವನದಲ್ಲಿ ಅವರು ಮಾಡಿದ ಒಳ್ಳೆಯ ಕಾರ್ಯಗಳನ್ನು ಅನುಭವಿಸಿದ್ದರೆ, ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಆಗ ವರಗಳು ಮತ್ತು ಬಲಗಳು ಕಾರ್ಯನಿರ್ವಹಿಸುವುದನ್ನು ನೋಡುತ್ತೀರಿ. ದೇವರು ನಿಮ್ಮ ಮೂಲಕ ಮಹತ್ಕಾರ್ಯಗಳನ್ನು ಮಾಡುತ್ತಾರೆ. ಹಲ್ಲೇಲೂಯಾ!

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಲೆಂಟ್ ದಿನಗಳ ಕೂಟಗಳಲ್ಲಿ ದೇವರ ವಾಕ್ಯಗಳನ್ನು ಬೋಧಿಸುವ ನಮ್ಮ ಸೇವಕರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)