Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 27.04.2022

ಧೈನಂದಿನ ಧ್ಯಾನ(Kannada) – 27.04.2022

 

ಸಹಾಯ

 

 "...ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು" - ಮತ್ತಾಯ 7:2

 

ಒಮ್ಮೆ ಸಾಧುಸುಂದರ್ ಸಿಂಗ್ ಟಿಬೆಟ್‌ಗೆ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಅವರು ಪರ್ವತದ ಚಳಿ ತಾಳಲಾರದೆ ನಡೆಯುತ್ತಿದ್ದರು. ಅವರ ದೇಹದಲ್ಲಿ ಸ್ವಲ್ಪವೂ ಶಾಖವಿಲ್ಲದೇ ನಡುಗುತ್ತಾ ಬಲಹೀನ ಸ್ಥಿತಿಯಲ್ಲಿದ್ದರು. ಆಗ ಅವರು ಹೋಗುತ್ತಿದ್ದ ದಾರಿಯಲ್ಲಿದ್ದ ಕಣಿವೆಯಲ್ಲಿ ಒಬ್ಬ ವ್ಯಕ್ತಿ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು ಕಂಡರು. ಆಗ ಸಾಧು ಅವರು ಆತನಿಗೆ ಸಹಾಯ ಮಾಡಲು ಜೊತೆಗಿದ್ದ ವ್ಯಕ್ತಿಯನ್ನು ಕರೆದರು. ಆದರೆ ಅವರು ನಾವೇ ಬಲವಿಲ್ಲದಿರುವ ಸ್ಥಿತಿಯಲ್ಲಿದ್ದೇವೆ ಹೀಗಿರುವಾಗ ನಾವು ಹೇಗೆ ಅವರಿಗೆ ಸಹಾಯ ಮಾಡಲು ಸಾಧ್ಯ ಎಂದು ಹೇಳಿ ಹೊರಟು ಹೋದರು. ಆದರೆ ಸಾಧು ಅವರು ಕೆಳಗಿಳಿದು ಆತನನ್ನು ತನ್ನ ಬೆನ್ನಿನ ಮೇಲೆ ಎತ್ತಿಕೊಂಡು ನಿಧಾನವಾಗಿ ಚಲಿಸಿದರು. ಅವರ ದೇಹ ಬಿಸಿಯಾಗತೊಡಗಿತು. ಆದ್ದರಿಂದ ಅವರ ದೇಹವು ಬಲಗೊಂಡಿತು. ಅವರು ನಡೆದುಕೊಂಡು ಹೋಗುತ್ತಿರುವಾಗ ಸ್ವಲ್ಪ ದೂರದಲ್ಲಿ ಯಾರೋ ಸತ್ತು ಬಿದ್ದಿರುವುದು ಕಂಡಿತು. ಅವರು ಯಾರೆಂದರೆ, ಸಾಧು ಅವರು ಸಹಾಯ ಮಾಡಲು ಕರೆದಾಗ ನಿರಾಕರಿಸಿದ ವ್ಯಕ್ತಿ. ದೇಹದ ಉಷ್ಣತೆಯ ಕೊರತೆಯಿಂದಾಗಿ ಅವರು ಶೀತದಿಂದ ಸಾವನ್ನಪ್ಪಿದರು.

 

ನಾವು ಸತ್ಯವೇದದಲ್ಲಿ ನೋಡುತ್ತೇವೆ, "ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು" ಎಂದು. ಹಾಗಾದರೆ ನಾವು ಮತ್ತೊಬ್ಬರಿಗೆ ಏನು ಮಾಡುತ್ತೇವೋ ಅದನ್ನೇ ದೇವರು ನಮಗೂ ಹಿಂದಿರುಗಿಸಿ ಕೊಡುತ್ತಾರೆ. ನಾವು ಮತ್ತೊಬ್ಬರಿಗೆ ಸಹಾಯ ಮಾಡದಿದ್ದರೆ ಆಪತ್ಕಾಲದಲ್ಲಿ ನಾವು ಕರೆದಾಗ ದೇವರೂ ಸಹ ನಮಗೆ ಕಿವಿಗೊಡುವುದಿಲ್ಲ. 

 

ಇದಕ್ಕೆ ಸತ್ಯವೇದದಲ್ಲಿ ಒಂದು ಉತ್ತಮ ಉದಾಹರಣೆಯೆಂದರೆ ಯೇಸು ಹೇಳಿದ ಸಾಮ್ಯದಲ್ಲಿ ಬರುವ ಒಳ್ಳೆಯ ಸಮಾರ್ಯನು. ಒಬ್ಬ ವ್ಯಕ್ತಿ ಕಳ್ಳರಿಂದ ಗಾಯಗೊಂಡು ಸಾಯುತ್ತಿರುವ ಸ್ಥಿತಿಯಲ್ಲಿ ಇರುವುದನ್ನು ನೋಡಿದ ಸಮಾರ್ಯನು ಆತನಿಗೆ ಸಹಾಯ ಮಾಡಲು ಮುಂದೆ ಬರುತ್ತಾನೆ. ಅನೇಕ ಲೇವಿಯರೂ, ಯಾಜಕರೂ ಅವನ ಮುಂದೆ ಹೋದರು. ಆದರೆ ಆ ಸಮಾರ್ಯನು ಮಾತ್ರ ಅವನನ್ನು ಕನಿಕರದಿಂದ ನೋಡುತ್ತಾನೆ. ಅದಕ್ಕಾಗಿಯೇ ಅವನು "ಒಳ್ಳೆಯ ಸಮಾರ್ಯನು" ಎಂದು ದೇವರಿಂದ ಸಾಕ್ಷಿ ಪಡೆದುಕೊಂಡನು.

 

ಈ ದಿನ ನಾವು ನಮ್ಮ ಜೀವನವನ್ನು ಪರೀಕ್ಷಿಸಿ ನೋಡೋಣ. ಸಹಾಯಕ್ಕಾಗಿ ನಿಜವಾಗಿಯೂ ನಮ್ಮನ್ನು ಅವಲಂಬಿಸಿರುವವರಿಗೆ ನಾವು ನೀಡುವ ಉತ್ತರವೇನು? ನ್ಯಾಯ ತೀರ್ಪಿನ ದಿನದಂದು ನಾವು ಯಾವ ಕಡೆ ನಿಲ್ಲಲಿದ್ದೇವೆ? ಬಡವರಿಗೆ, ಕಿರಿಯರಿಗೆ ಸಹಾಯ ಮಾಡಿದವರಾಗಿಯಾ? ಅಥವಾ ದೇವರು ಗೊತ್ತಿಲ್ಲ ಎಂದು ಹೇಳುವ ಗುಂಪಿನೊಂದಿಗಾ?

- Mrs. ಸ್ಟೆಫಿ ರಾಕ್ಸನ್

 

ಪ್ರಾರ್ಥನಾ ಅಂಶ:

ಮಿಷನರಿಗಳಿಗೆ ಸಹಾಯ ಮಾಡುವ ಪಾಲುದಾರರನ್ನು ದೇವರು ಹೊಸದಾಗಿ ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)