Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 25.04.2022

ಧೈನಂದಿನ ಧ್ಯಾನ(Kannada) – 25.04.2022

 

ನಂಬಿಗಸ್ತಿಕೆ ಮತ್ತು ಉನ್ನತಿ

 

"ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು;..." - ಲೂಕ 16:10

 

1862 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಅಂತರ್ಯುದ್ಧ ನಡೆಯುತ್ತಿತ್ತು. ಆ ಸಮಯದಲ್ಲಿ, ರಾಬರ್ಟ್ ಎಲಿ ಯುನೈಟೆಡ್ ಸ್ಟೇಟ್ಸ್ನ ಉತ್ತರ ಭಾಗವನ್ನು ಆಕ್ರಮಿಸಲು ಹೋರಾಡಿದರು. ಅವರಿಗೆ ವಿರುದ್ಧವಾಗಿಯೂ ತನ್ನ ದೇಶವನ್ನು ರಕ್ಷಿಸುವುದಕ್ಕಾಗಿಯೂ ಕರ್ನಲ್ ಹೇಯ್ಸ್ ಪರಾಕಾಷ್ಠೆಯ ಯುದ್ಧದಲ್ಲಿ ತೊಡಗಿದಾಗ, ಸಮಯ ಮುಂದುವರೆಯುತ್ತಿದ್ದಂತೆ ಯೋಧರು ಹಸಿವಿನಿಂದ ಆಯಾಸಗೊಂಡರು. ಆ ಸಮಯದಲ್ಲಿ ಯುದ್ಧಭೂಮಿಯಲ್ಲಿ ತನ್ನ ಜೀವವನ್ನೂ ಲೆಕ್ಕಿಸದೆ, ಬಿಲ್ಲಿ ಎಂಬ 19 ವರ್ಷದ ಹುಡುಗ ತಿನ್ನಲು ಆಹಾರವನ್ನು ಮತ್ತು ಕುಡಿಯಲು ಪಾನೀಯವನ್ನು ಬಿಸಿ ಬಿಸಿಯಾಗಿ ತನ್ನ ವಾಹನದಲ್ಲಿ ತುಂಬಿಕೊಂಡು ಬಹು ಘೋರವಾಗಿ ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ತೆಗೆದುಕೊಂಡು ಹೊರಟನು. ದಣಿದಿದ್ದ ಯೋಧರು ಆತನ ಧೈರ್ಯಕ್ಕೆ ಬೆರಗಾದರು ಮತ್ತು ತಮಗೆ ದೊರೆತ ಆಹಾರವನ್ನು ಸೇವಿಸಿ, ಬಿಸಿಯಾದ ಪಾನೀಯವನ್ನು ಸೇವಿಸುವ ಮೂಲಕ ತ್ವರಿತವಾಗಿ ಪುನರುಜ್ಜೀವನಗೊಂಡರು. ಈ ಕರ್ನಲ್ ಹೇಯ್ಸ್ ರವರೇ ಹಿಂದಿನ ಯುನೈಟೆಡ್ ಸ್ಟೇಟ್ಸ್ನ 19 ನೇ ಅಧ್ಯಕ್ಷರಾಗಿದ್ದ "ರುದರ್ಫೋರ್ಡ್ ಹೇಯ್ಸ್" ಆಗಿದ್ದರು. ಅವರ ನಂತರ 20 ನೇ ಕಮಾಂಡರ್-ಇನ್-ಚೀಫ್ ಆಗಿ ಪದವಿಯನ್ನು ಪಡೆದವರು "ವಿಲಿಯಂ ಮಾಕ್ ಕಿನ್ಲಿ." ಇವರು ಬೇರೆ ಯಾರೂ ಅಲ್ಲ ಅಂದು ಯುದ್ಧದಲ್ಲಿದ್ದ ಯೋಧರಿಗೆ ಸರಿಯಾದ ಸಮಯಕ್ಕೆ ಆಹಾರವನ್ನು ತಂದುಕೊಟ್ಟ ಬಿಲ್ಲಿಯವರೇ ಅದು.

 

ಬಿಲ್ಲಿಯವರ ಬಗ್ಗೆ ಹೇಯ್ಸ್ “ಹದಿಹರೆಯದವನಾಗಿದ್ದಾಗ, ಹಗಲು ರಾತ್ರಿ ಎಂದು ಕೂಡಾ ನೋಡದೆ ಕೆಲಸ ಮಾಡುತ್ತಿದ್ದರು. ಚಳಿ, ಮಳೆ, ಚಂಡಮಾರುತ ಯಾವುದೂ ಸಹ ಅವರು ಕೆಲಸ ಮಾಡುವುದನ್ನು ತಡೆಯಲಾಗುತ್ತಿರಲಿಲ್ಲ. ಕರ್ತವ್ಯದಲ್ಲಿ ತಪ್ಪಿಹೋಗುತ್ತಿರಲಿಲ್ಲ ಮತ್ತು ಸಮಯಕ್ಕೆ ಕೆಲಸವನ್ನು ಪೂರ್ಣಗೊಳಿಸುವವರಾಗಿಯೂ ಇರುತ್ತಾರೆ" ಎಂದು ಉಲ್ಲೇಖಿಸಿದ್ದರು. ದಾವೀದನು ತನ್ನ ಕುರಿಗಳನ್ನು ನಿಷ್ಠೆಯಿಂದ ಮೇಯಿಸಿ ಕರಡಿ ಮತ್ತು ಸಿಂಹದ ಬಾಯಿಯಿಂದ ತಪ್ಪಿಸಿದ್ದನ್ನು ನೋಡಿದ ಕರ್ತನು ತನ್ನ ಜನರನ್ನು ಆಳಲು ಇಸ್ರಾಯೇಲ್ಯರಿಗೆ ರಾಜನನ್ನಾಗಿ ನೇಮಿಸಿದರು.

 

ಇಂದು ನಮಗೆ ಕೊಡಲ್ಪಟ್ಟಿರುವ ಕಾರ್ಯಗಳು ತುಂಬಾ ಚಿಕ್ಕದಾಗಿರಬಹುದು. ಕೆಲವೊಮ್ಮೆ ನಾವು ನಂಬಿಗಸ್ತಿಕೆಯಿಂದ ಮಾಡಿದ ಕೆಲಸಗಳನ್ನು ಲೋಕವು ಗುರುತಿಸಲ್ಪಡದೆ ಹೋಗಬಹುದು. ಜಾಗತಿಕವಾಗಿ, ಭಾರತೀಯರಿಗೆ "ಕಠಿಣ ಕೆಲಸಗಾರರು" ಎಂಬ ಹೆಸರಿದ್ದರೂ ಕೆಲಸದ ಸ್ಥಳಗಳಲ್ಲಿ ಅದಕ್ಕೆ ತಕ್ಕ ಉನ್ನತಿ ಸಿಗುವುದಿಲ್ಲ. ಆದರೂ ಅದೆಲ್ಲವನ್ನೂ ತಲೆಕೆಡಿಸಿಕೊಳ್ಳದೆ ಕರ್ತನು ನಮ್ಮನ್ನು ನೋಡುತ್ತಿದ್ದಾರೆ ಎಂಬ ಆಲೋಚನೆಯೊಂದಿಗೆ ನಾವು ಸತತವಾಗಿ ದುಡಿಯೋಣ. ಪೌಲನು ಹೇಳುವಂತೆ, ಮನುಷ್ಯರನ್ನು ಮೆಚ್ಚಿಸುವಂತೆ ಅವರ ಬಯಕೆಯಂತೆ ಕಣ್ಣಿಗೆ ಕಾಣುವಂತೆ ಸೇವೆ ಮಾಡದೇ ದೇವರಿಗೆ ಭಯಪಡುವವರಾಗಿ ಕ್ರಿಸ್ತನ ದಾಸರೆಂದು ತಿಳಿದು ಪೂರ್ಣ ಮನಸ್ಸಿನಿಂದ ಸೇವೆ ಮಾಡೋಣ. ಹಾಗೆ ಮಾಡುವಾಗ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತೇವೆ.

- Bro.ಹನೀಸ್ ಸಮುವೇಲ್

 

ಪ್ರಾರ್ಥನಾ ಅಂಶ:

ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬರನ್ನೂ ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)