By Village Missionary Movement
Thursday, 29-Feb-2024ಧೈನಂದಿನ ಧ್ಯಾನ(Kannada) – 29.02.2024
ಶಿಲುಬೆಯು ತಂದ ನಂಬಿಕೆ
"…ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ…" - ಗಲಾತ್ಯ 6:14
ಅಲೆಕ್ಸಾಂಡರ್ ಒಬ್ಬ ಕ್ರೈಸ್ತನಾಗಿದ್ದು, ರಷ್ಯಾದಲ್ಲಿ ಸೆರೆಯಾಳಾಗಿ ಚಿತ್ರಹಿಂಸೆ ಅನುಭವಿಸಿದ. ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಿದರು. ಅಲ್ಪ ಆಹಾರ, ತೀವ್ರ ಅನಾರೋಗ್ಯ, ಭಯಂಕರ ದೌರ್ಬಲ್ಯಗಳ ನಡುವೆಯೇ ಅಗೆಯುವ ಕೆಲಸವನ್ನು ಮಾಡಬೇಕಾಯಿತು. ಸುಸ್ತಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ನಿಂತರು. ಹಾಗೆ ನಿಂತಿರುವ ಕೈದಿಗಳಿಗೆ ಕಾವಲುಗಾರರು ತೀವ್ರವಾಗಿ ಥಳಿಸುತ್ತಾರೆ. ಕರ್ತನನ್ನು ನಂಬಿದ್ದ ಕೈದಿಗಳಲ್ಲಿ ಒಬ್ಬನು ಅವರ ಬಳಿಗೆ ಬಂದು ಮರಳಿನಲ್ಲಿ ಶಿಲುಬೆಯ ಚಿಹ್ನೆಯನ್ನು ಬಿಡಿಸಿ ಅದನ್ನು ಯಾರಿಗೂ ಕಾಣದಂತೆ ಅಳಿಸಿ ಹೋದನು. ಶಿಲುಬೆಯನ್ನು ಸ್ಮರಿಸಿದ ಕೂಡಲೇ ಅಲೆಕ್ಸಾಂಡರ್ನ ಹೃದಯವು ಬಲಗೊಂಡಿತು. ಅವರು ಬಿಡುಗಡೆಯಾಗುವವರೆಗೂ ಶಿಲುಬೆಯನ್ನು ಸ್ಮರಿಸುತ್ತಲೇ ನೋವುಗಳನ್ನು ಸಹಿಸಿಕೊಂಡರು.
ಅಪೊ.ಪೌಲನು ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿ, ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ ಎಂದು ಹೇಳಿದರು. ಅಪೊ. ಪೌಲನು ಅನೇಕ ಪತ್ರಿಕೆಗಳನ್ನು ಬರೆದಿದ್ದಾರೆ, ಅನೇಕ ಸಭೆಗಳನ್ನು ಸ್ಥಾಪಿಸಿದ್ದಾರೆ. ಮತ್ತು ಅನೇಕ ಜನರನ್ನು ವಾಕ್ಯದ ಕಡೆಗೆ ನಡೆಸಿದ್ದಾರೆ. ಹೀಗೆ ಹೆಚ್ಚಳಪಡಲು ಎಷ್ಟೋ ಕಾರ್ಯಗಳಿದ್ದರೂ ಶಿಲುಬೆಯ ವಿಷಯದಲ್ಲಿ ಮಾತ್ರವೇ ಹೆಚ್ಚಳಪಡುತ್ತೇನೆ ಹೊರತು ಬೇರೆ ಯಾವುದನ್ನು ಕುರಿತೂ ಹೆಚ್ಚಳಪಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಪ್ರಿಯರೇ! ನಮ್ಮ ಮೂಲಕ ಆತನು ಮಹಿಮೆಹೊಂದಬೇಕಾದರೆ, ನಮಗೆ ಬರುವ ಎಲ್ಲಾ ಕಷ್ಟಕರ ಸಂದರ್ಭಗಳನ್ನು ಮತ್ತು ಸಮಸ್ಯೆಗಳನ್ನು ನಾವು ಸ್ವೀಕರಿಸಲು ಶಕ್ತರಾಗಿರಬೇಕು. ಶಾಪಗ್ರಸ್ತ ಭೂಮಿಯಲ್ಲಿ ಬದುಕುತ್ತಿರುವ ನಮಗೆ ಅನೇಕ ಪಾಡುಗಳು ಬರುತ್ತವೆ. ಅಂತಹ ಸಮಯಗಳಲ್ಲಿ ಈ ಕೆಳಗಿನ ಆಲೋಚನೆಯು ನಮ್ಮನ್ನು ತುಂಬಲಿ: "ಯೇಸುಕ್ರಿಸ್ತನು ಶಿಲುಬೆಯಲ್ಲಿ ಅನುಭವಿಸಿದ ಪಾಡುಗಳಿಗಿಂತಾನ ಹೆಚ್ಚಾಗಿ ನಾವು ಪಾಡು ಅನುಭವಿಸುತ್ತಿದ್ದೇವೆ" ಇಲ್ಲವೇ ಇಲ್ಲ. ಖಂಡಿತವಾಗಿಯೂ ನಾವು ಪಾಡುಗಳ ಮುಖಾಂತರ ಮಾತ್ರವೇ ಪರಲೋಕಕ್ಕೆ ಹೋಗಲು ಸಾಧ್ಯ. ಆದ್ದರಿಂದ ಪಾಡುಗಳನ್ನು, ಉಪದ್ರವಗಳನ್ನು ಸಂತೋಷವಾಗಿ ದಾಟಿ ಹೋಗೋಣ !! ಬಾಡಿಹೋಗದ ಕಿರೀಟವನ್ನು ಪಡೆಯೋಣ.
- Mrs. ಬೇಬಿ ಕಾಮರಾಜ್
ಪ್ರಾರ್ಥನಾ ಅಂಶ:
24-ಗಂಟೆಗಳ ಸರಪಳಿ ಪ್ರಾರ್ಥನೆಯು ನಮ್ಮ ಸೇವಾಕ್ಷೇತ್ರಗಳಲ್ಲಿ ನಿರಂತರವಾಗಿ ನಡೆಯುವಂತೆ
ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482