Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 06.02.2021

ಧೈನಂದಿನ ಧ್ಯಾನ(Kannada) – 06.02.2021

ತಿಳಿದುಕೊಳ್ಳಲ್ಪಟ್ಟ ಪಾತ್ರೆ

“ನನ್ನ ಹೆಸರನ್ನು ಹೊರುವದಕ್ಕಾಗಿ ನಾನು ಆರಿಸಿಕೊಂಡ ಪಾತ್ರೆಯಾಗಿದ್ದಾನೆ” - ಅಪೊಸ್ತಲ 9:15

ಕತ್ತಲೆಯ ಖಂಡ ಎಂದು ಕರೆಯಲ್ಪಡುವ ಆಫ್ರಿಕಾ ದೇಶದಲ್ಲಿ ಸುವಾರ್ತೆ ಎಂಬ ದೀಪವನ್ನು ಹೊತ್ತಿಸಿದವರು ಡೇವಿಡ್ ಲಿವಿಂಗ್ ಸ್ಟನ್ . ಸ್ಕಾಟ್ ಲ್ಯಾಂಡ್ ನಲ್ಲಿ, ಒಂದು ಸಾಧಾರಣ ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಲಿವಿಂಗ್ ಸ್ಟನ್ ಕುಟುಂಬದ ಬಡತನದ ನಿಮಿತ್ತವಾಗಿ ಬಹಳ ಕಠಿಣವಾದ ಶ್ರಮೆಯೊಂದಿಗೆ ವೈದ್ಯಕೀಯವನ್ನು ಅತ್ಯುತ್ತಮವಾಗಿ ಓದಿ ಮುಗಿಸಿದರು. ಅವರ 20ನೇ ವಯಸ್ಸಿನಲ್ಲಿ ರಾಬರ್ಟ್ ಮೊಹಂಬರ್ಟ್ ಎಂಬ ವ್ಯಕ್ತಿ ಆಫ್ರಿಕಾದ ಬಗ್ಗೆಯೂ, ಅಲ್ಲಿ ವಾಸಿಸುವ ಜನರ ಬಗ್ಗೆಯು ಹೇಳುವಾಗ ಲಿವಿಂಗ್ ಸ್ಟನ್ ಅಲ್ಲಿಗೆ ಮಿಷಿನರಿ ಯಾಗಿ ಹೋಗಲು ತನ್ನನ್ನು ಸಮರ್ಪಿಸಿಕೊಂಡರು. 700 ಮೈಲು ದೂರ ಪ್ರಯಾಣ ಮಾಡಿ, ದಟ್ಟವಾದ ಕಾಡುಗಳ ಮಧ್ಯದಲ್ಲಿ ಮಾರ್ಗವನ್ನು ಕಂಡುಹಿಡಿದು, ಅನೇಕ ಗ್ರಾಮಗಳಿಗೆ ಹೋಗಿ ಜನರನ್ನು ಭೇಟಿ ಮಾಡಿ ಸೇವೆ ಮಾಡಿದರು. ಒಂದು ಬಾರಿ ಒಂದು ಆಫ್ರಿಕಾದವನು ಅವರ ಬಳಿ ಬಂದು ನೀವು ಏಕೆ ಮುಂಚೆಯೇ ಯೇಸುವಿನ ಬಗ್ಗೆ ತಿಳಿಸಲಿಲ್ಲ. ನನ್ನ ಪೂರ್ವಿಕರು ದೇವರನ್ನು ತಿಳಿಯದೆಯೇ ಸತ್ತು ಹೋದರೆ ಎಂದನು. ಇದನ್ನು ಕೇಳಿದ ಲಿವಿಂಗ್ ಸ್ಟನ್ ನ ಹೃದಯವು ಹೊಡೆದು ಹೋಯಿತು ಇನ್ನೂ ಅಧಿಕವಾಗಿ ಬಲಹೀನತೆಗಳ ಮಧ್ಯದಲ್ಲಿಯೂ ಸೇವೆ ಮಾಡಿದರು. ಹೌದು, ಕತ್ತಲೆಯ ಖಂಡವಾದ ಆಫ್ರಿಕಾಗೆ ಬೆಳಕನ್ನು ತೆಗೆದುಕೊಂಡು ಬರಲು ದೇವರು ಆರಿಸಿಕೊಂಡ ಪಾತ್ರೆಯೆ  ಡೇವಿಡ್ ಲಿವಿಂಗ್ ಸ್ಟನ್, ಇವರು ಜೀವವುಳ್ಳ ಕಲ್ಲುಗಳಾಗಿ (Living Stones) ಇನ್ನು ದೇವರ ಸನ್ನಿಧಿಯಲ್ಲಿ ಪ್ರಕಾಶಿಸುತ್ತಲೇ ಇದ್ದಾರೆ.

ಸತ್ಯವೇದದಲ್ಲಿ, ಸೌಲನನ್ನು ದೇವರು ತನ್ನ ಕೆಲಸಕ್ಕಾಗಿ ಆರಿಸಿಕೊಂಡರು. ಅವರನ್ನು ಪೌಲನಾಗಿ ಮಾರ್ಪಡಿಸಿ ಅನ್ಯಜನರಿಗೆ ಸುವಾರ್ತೆಯನ್ನು ಪ್ರಕಟಿಸುವ ದೊಡ್ಡ ಜವಾಬ್ದಾರಿಯನ್ನು ಅವರ ಕೈಗೆ ಕೊಟ್ಟರು. ಪೌಲನು ಕ್ರಿಸ್ತನಿಗಾಗಿ ಅನೇಕ ಪಾಡುಗಳನ್ನು ಸಹಿಸಿಕೊಂಡು, ಹಲವು ಏಟುಗಳ ಮಧ್ಯದಲ್ಲಿಯು ಸೇವೆ ಮಾಡಿದರು, ಸೆರೆಯಲ್ಲಿರುವಾಗಲೂ ಅನೇಕರನ್ನು ಕ್ರಿಸ್ತನ ಮಾರ್ಗದಲ್ಲಿ ನಡೆಸಿದರು. ಸೇವೆಯ ಹಾದಿಯಲ್ಲಿ ಅನೇಕ ಸೇವಕರನ್ನು ರೂಪಿಸಿ, ಹಲವು ಸಭೆಗಳನ್ನು ಸ್ಥಾಪಿಸಿದರು. 1 ಕೊರಿಂಥ.11: 1 ರ ಪ್ರಕಾರ, ಕ್ರಿಸ್ತನ ಹಾಗೆ ಜೀವಿಸಿ ತೋರಿಸಿದವರು ಪೌಲನು.

ಪ್ರಿಯರೇ, ನಮ್ಮ ಪೂರ್ವಿಕರು ನಮಗೆ ತಿಳಿದ ಎಷ್ಟೋ ಜನರು ಯೇಸುವನ್ನು ತಿಳಿಯದೇನೆ ಸತ್ತು ಹೋದರು. ಇನ್ನು ಮತ್ತೊಂದು ಸಂತತಿ ಹಾಗೆ ಯೇಸುವನ್ನು ತಿಳಿಯದೇನೆ ನರಕಕ್ಕೆ ಹೋಗಬಾರದು. ಲಿವಿಂಗ್ ಸ್ಟನ್ ನ ಹಾಗೆ ನಿಮ್ಮನ್ನು ದೇವರಿಗಾಗಿ ಸಮರ್ಪಿಸಿಕೊಂಡು, ಕತ್ತಲೆಯಲ್ಲಿರುವ ಜನರಿಗೆ ಯೇಸು ಎಂಬ ಬೆಳಕನ್ನು ತೆಗೆದುಕೊಂಡು ಹೋಗುತ್ತೀರಾ? ಪೌಲನ ಹಾಗೆ ಕ್ರಿಸ್ತನಿಗಾಗಿ ಸೇವೆ ಮಾಡಿ ಅನೇಕರನ್ನು ಸೇವಕರಾಗಿ ರೂಪಿಸುತ್ತೀರಾ? ದೇವರು ನಿಮ್ಮೊಬ್ಬೊಬ್ಬರನ್ನು ತನ್ನ ಸೇವೆಗೆಂದು ಆರಿಸಿಕೊಂಡಿದ್ದಾರೆ. ದೇವರು ಎದುರು ನೋಡುತ್ತಿರುವ ವ್ಯಕ್ತಿ ನೀವೇನೆ, ನಿನ್ನನ್ನು ಕರ್ತನಿಗೆಂದು ಮಿಷಿನರಿಯಾಗಿ ಒಪ್ಪಿಸಿ ಕೊಡುತ್ತೀಯಾ?  "ಒಂದೊಂದು ಕ್ರೈಸ್ತನು ಒಂದು ಆತ್ಮ ಆದಾಯ ಮಾಡುವ ವೀರನು" ಎಂಬುದನ್ನು ಮರೆತು ಹೋಗಬೇಡಿರಿ.
-    Mrs.ಎಸ್ತೇರ್ ಗಾಂಧಿ ರಾಜನ್

ಪ್ರಾರ್ಥನಾ ಅಂಶ:-
ಆತ್ಮ ಭಾರವುಳ್ಳ ಮಿಷನರಿಗಳು ಸಹಚರ ಸೇವಕರುಗಳಾಗಿ ನಮ್ಮೊಂದಿಗೆ ಸೇರಿ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)