Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.09.2024

ಧೈನಂದಿನ ಧ್ಯಾನ(Kannada) – 14.09.2024

 

ತಂತ್ರ 

 

"ಇಗೋ, ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ, ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ" - ಪ್ರಸಂಗಿ 7:29

 

ಒಂದು ಕಾಡಿನಲ್ಲಿ ಸಿಂಹ, ಹುಲಿ, ಕರಡಿ, ಚಿರತೆ, ಮಂಗ ಮುಂತಾದ ಅನೇಕ ಪ್ರಾಣಿಗಳು, ಪಕ್ಷಿಗಳು ಮತ್ತು ಕಾಡು ಪ್ರಾಣಿಗಳು ಇದ್ದವು. ಸಿಂಹವು ಕಾಡಿನ ರಾಜನಾಗಿದ್ದನು. ಎಲ್ಲಾ ಪ್ರಾಣಿಗಳು ಮತ್ತು ಪಕ್ಷಿಗಳು ಸಂತೋಷವಾಗಿದ್ದವು. ನರಿಯು ರಾಜನಾಗಲು ಬಯಸಿ ಪಟ್ಟಣಕ್ಕೆ ಹೋಗಿ ತನ್ನ ದೇಹವನ್ನು ಬಿಳಿ ಮತ್ತು ತನ್ನ ಎರಡು ಕಣ್ಣುಗಳು ಮತ್ತು ನಾಲ್ಕು ಕಾಲುಗಳಿಗೆ ಕೆಂಪು ಬಣ್ಣ ಬಳಿದುಕೊಂಡು "ನಾನು ಈ ಕಾಡಿನ ರಾಜ" ಎಂದು ಹೇಳಿತು. ಎಲ್ಲಾ ಪ್ರಾಣಿಗಳು ಮತ್ತು ಪಕ್ಷಿಗಳು ಹೊಸದಾಗಿದೆಯಲ್ಲಾ ಎಂದು ಹೆದರುತ್ತಿದ್ದವು. ಕೆಲವು ದಿನಗಳ ನಂತರ ಇತರ ನರಿಗಳು ಇದ್ದಕ್ಕಿದ್ದಂತೆ ಕೂಗಲು ಪ್ರಾರಂಭಿಸಿದವು. ಕೂಡಲೇ ಈ ರಾಜ ನರಿಯೂ ತನ್ನನ್ನು ಮರೆತು ಗೋಳಾಡಲು ಪ್ರಾರಂಭಿಸಿತು. ನರಿಯ ತಂತ್ರವು ಬಯಲಾಯಿತು. ಇದನ್ನು ಕಂಡ ಸಿಂಹ ಮತ್ತು ಚಿರತೆ ಅದರ ಮೇಲೆ ಹಾರಿ ಕೊಂದು ಹಾಕಿದವು.

  

ಸರ್ಪವು ಎಲ್ಲಾ ಕಾಡು ಜೀವಿಗಳಿಗಿಂತ ಹೆಚ್ಚು ತಂತ್ರವಾಗಿತ್ತು. ಆದ್ದರಿಂದ ಸೈತಾನನು ಹಾವಿನ ಮೂಲಕ ಹವ್ವಳೊಂದಿಗೆ ಮಾತನಾಡಿ ದೇವರು ನಿಷೇಧಿಸಿದ ಹಣ್ಣನ್ನು ತಿನ್ನುವಂತೆ ಮಾಡಿತು. ಈ ಕಾರಣದಿಂದಾಗಿ, ಆದಾಮ ಮತ್ತು ಹವ್ವಳು ದೇವರ ಮಹಿಮೆಯನ್ನು ಕಳೆದುಕೊಂಡರು. ಅವರು ಏದೆನ್ ಉದ್ಯಾನವನ್ನು ತೊರೆದರು. ಶಾಪವನ್ನು ಪಡೆದರು. ನಂತರ ಆದಿಕಾಂಡ 27 ರಲ್ಲಿ, ಇಸಾಕನು ಏಶಾವನಿಗೆ ನಿನ್ನ ಸಹೋದರನು ತಂತ್ರವಾಗಿ ನಿನ್ನ ಆಶೀರ್ವಾದವನ್ನು ಪಡೆದನು ಎಂದು ಹೇಳುತ್ತಾನೆ. ಇದು ಸಹೋದರರ ನಡುವೆ ದ್ವೇಷವನ್ನು ಉಂಟುಮಾಡುತ್ತದೆ. ಯಾಕೋಬನು ತನ್ನ ಮಾವನ ಮನೆಗೆ ಹೋಗುತ್ತಾನೆ. ನಂತರ ಅವನು ತನ್ನ ಹೆಂಡತಿ, ಮಕ್ಕಳು ಮತ್ತು ತಾನು ಸಂಪಾದಿಸಿದ ಎಲ್ಲಾ ಕುರಿ ದನಗಳೊಂದಿಗೆ ತನ್ನ ದೇಶಕ್ಕೆ ಹಿಂದಿರುಗುತ್ತಾನೆ. ಇದನ್ನು ಅರಿತುಕೊಂಡ ಏಶಾವನು ಅವನನ್ನು ಎದುರುಗೊಳ್ಳಲು ಬರುತ್ತಾರೆ. ಈಗ ಯಾಕೋಬನು ಹೆದರಿ ಏಶಾವನನ್ನು ಏಳು ಬಾರಿ ಬೊಗ್ಗೆ ನಮಸ್ಕರಿಸಿದನು. ಆದರೆ ಇವರು ಜನಿಸಿದಾಗ, ಹಿರಿಯವನು ಕಿರಿಯವನಿಗೆ ಸೇವೆ ಸಲ್ಲಿಸುತ್ತಾನೆ ಎಂದು ಹೇಳಲಾಗಿತ್ತು. ಯಾಕೋಬನು ತನ್ನ ಜೀವನದಲ್ಲಿ ತಂತ್ರವನ್ನು ಹೊಂದಿದ್ದರಿಂದ ಅವನ ಸಹೋದರನನ್ನು ಎದುರಿಸಲು ಭಯವು ಅವನನ್ನು ಸುತ್ತುವರೆಯಿತು. ಸುತ್ತಲೂ ಕತ್ತಲೆಯಂತಹ ಪರಿಸ್ಥಿತಿ ಕಂಡಿತು. ಆ ಕ್ಷಣದಲ್ಲಿ ದೇವರನ್ನು ಹಿಡಿದುಕೊಂಡದ್ದರಿಂದ

ಕತ್ತಲು ಮಾಯವಾಯಿತು ಮತ್ತು ಭಯವು ಬದಲಾಯಿತು. ಆದರೂ, ತನ್ನ ಅಣ್ಣನಿಗೆ ಏಳು ಬಾರಿ ನಮಸ್ಕರಿಸಬೇಕಾದ ಪರಿಸ್ಥಿತಿ ಬರುತ್ತದೆ.

 

ಪ್ರೀತಿಯ ದೇವರ ಮಕ್ಕಳೇ! ಕೆಲವರು ಬುದ್ಧಿವಂತಿಕೆಯಿಂದ ವರ್ತಿಸುತ್ತಿದ್ದೇನೆ ಎಂದು ಭಾವಿಸಿ ತಂತ್ರವಾಗಿ ವರ್ತಿಸುವುದುಂಟು. ಬುದ್ಧಿವಂತಿಕೆ ಬೇರೆ, ತಂತ್ರ ಬೇರೆ. ನೀವು ಬುದ್ಧಿವಂತಿಕೆಯಿಂದ ವರ್ತಿಸಿದಾಗ, ಶಾಂತಿ ಮತ್ತು ಸಂತೋಷ ಇರುತ್ತದೆ. ತಂತ್ರವನ್ನು ತೊಲಗಿಸಿ, ಬುದ್ಧಿವಂತಿಕೆಯಿಂದ ನಡೆದುಕೊಂಡರೆ, ದೇವರ ವಾಗ್ದಾನಗಳ ನೆರವೇರಿಕೆ, ನಮ್ಮ ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ನಾವು ಕಾಣಬಹುದು. ಜನರನ್ನು ತಂತ್ರದಿಂದ ಮೋಸಗೊಳಿಸಬಹುದು. ಆದರೆ ಹೃದಯವನ್ನು ನೋಡುವ ದೇವರಿಗೆ ಮೋಸಮಾಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡೋಣ.

- R. ಸಲೋಮಿ

 

ಪ್ರಾರ್ಥನಾ ಅಂಶ:

ನಮ್ಮ ಆಮೆನ್ ವಿಲೇಜ್ ಟಿವಿ ಸ್ಯಾಟಲೈಟ್ ಟಿವಿ ಆಗಿ ಬದಲಾಗಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)