Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 12.09.2024

ಧೈನಂದಿನ ಧ್ಯಾನ(Kannada) – 12.09.2024

 

ಸ್ಥಿರವಾಗಿ ನಿಲ್ಲುವುದು ಹೇಗೆ?

 

"...ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ" - ಯೋಹಾನ 15:5

  

ವೂಲ್ವಿಚ್ (Woolwich ) ಎಂಬ ನಗರದ ರೈಲು ನಿಲ್ದಾಣದಲ್ಲಿ ರೈಲು ಹೊರಡಲು ಸಿದ್ಧವಾಗಿ ನಿಂತಿತ್ತು. ರಾಮ್‌ಸ್ಟೋಕ್ ಎಂಬ ದೇವರ ಸೇವಕರು ಸಭೆಯೊಂದರಲ್ಲಿ ಮಾತಾಡಿ ಮುಗಿಸಿದ ನಂತರ ಆ ರೈಲು ಹತ್ತಿದರು. ಒಬ್ಬ ಯುವ ಸೇನಾಧಿಕಾರಿ ಇದ್ದಕ್ಕಿದ್ದಂತೆ ಓಡಿಬಂದು ರಾಮ್‌ಸ್ಟೋಕ್‌ರವರನ್ನು ಕೇಳಿದರು, "ಅಯ್ಯಾ, ನಾನು ನಿಮ್ಮ ಪ್ರಸಂಗವನ್ನು ಕೇಳಿದೆ. ಆದರೆ ಒಬ್ಬ ಮನುಷ್ಯನು ದೇವರ ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲಲು ಹೇಗೆ ಸಾಧ್ಯ?" ಎಂದರು. ರಾಮ್‌ಸ್ಟೋಕ್ ತಕ್ಷಣ ತನ್ನ ಜೇಬಿನಿಂದ ಪೆನ್ಸಿಲ್ ತೆಗೆದುಕೊಂಡರು. ಅವರು ಅದನ್ನು ತನ್ನ ಅಂಗೈಯಲ್ಲಿ ನೇರವಾಗಿ ನಿಲ್ಲುವಂತೆ ಮಾಡಿದರು. ಆದರೆ ಮೇಲ್ಭಾಗದಲ್ಲಿ ಹಿಡಿತದ ಕೊರತೆಯಿಂದ ಬಿದ್ದುಹೋಯಿತು. ನಂತರ ಅವರು ಅದರ ಮಧ್ಯ ಭಾಗವನ್ನು ಹಿಡಿದರು. ಪೆನ್ಸಿಲ್ ನಿಂತಿತು. ಆಗ ಅವರು ಹೇಳಿದರು, "ನಮ್ಮ ಜೀವನ ಈ ಪೆನ್ಸಿಲ್‌ನಂತೆ, ದೇವರ ಕೈ ಹಿಡಿದರೆ ಮಾತ್ರವೇ ನಾವು ನಿಲ್ಲಬಹುದು. ಇಲ್ಲದಿದ್ದರೆ ನಾವು ಹಿಡಿತವಿಲ್ಲದೆ ಪೆನ್ಸಿಲ್‌ನಂತೆ ಬೀಳುತ್ತೇವೆ" ಅಂದರು. ಆ ಯೌವನಸ್ಥನು ನಮ್ಮ ಸ್ವಂತ ಶಕ್ತಿಯಿಂದಲ್ಲ ಬದಲಾಗಿ ದೇವರ ಶಕ್ತಿಯಿಂದ ನಿಲ್ಲಬಹುದು ಎಂಬುದನ್ನು ಅರಿತುಕೊಂಡನು.

  

ಸತ್ಯವೇದದಲ್ಲಿ, ಅಬ್ರಹಾಮನು ತನ್ನ ಜೀವನದ ಎಲ್ಲಾ ಕಷ್ಟದ ಸಮಯದಲ್ಲಿ ಆಕಾಶದತ್ತ ನೋಡಿ ದೇವರ ಸಹಾಯವನ್ನು ಕೋರಿದರು. ಅವರು ದೇವರನ್ನು ಸಂಪೂರ್ಣವಾಗಿ ಒರಗಿಕೊಂಡರು. ಅವರು ದೇವರನ್ನು ತನ್ನ ಸಹಾಯವಾಗಿ ಮಾಡಿಕೊಂಡರು. ಆದ್ದರಿಂದ ಅವರನ್ನು "ನಂಬಿಗಸ್ತರ ತಂದೆ" ಎಂದು ಕರೆಯಲಾಯಿತು. ದೇವರ ಕೈ ಹಿಡಿಯದಿದ್ದರೆ ಈ ಲೋಕದಲ್ಲಿ ನಾವು ಸ್ಥಿರವಾಗಿ ನಿಂತುಕೊಳ್ಳಲು ಸಾಧ್ಯವಾಗದೇ ಬಿದ್ದು ಹೋಗುತ್ತೇವೆ. ನಾವು ದೇವರನ್ನು ಅಂಟಿಕೊಂಡಾಗ, ಆತನು ನಮ್ಮ ಜೀವನದಲ್ಲಿ ಮಹತ್ತರವಾದ ಕಾರ್ಯಗಳನ್ನು ಮಾಡುತ್ತಾರೆ. ದೇವರ ದಯೆಯ ಹಸ್ತವು ನೆಹೆಮಿಯನೊಂದಿಗೆ ಇತ್ತು ಮತ್ತು ಅವರು ಪ್ರಾರಂಭಿಸಿದ್ದನ್ನು ಮುಗಿಸಲು ಸಾಧ್ಯವಾಯಿತು. ಅದೇ ರೀತಿಯಲ್ಲಿ, ದೇವರ ಹಸ್ತ ನಮ್ಮನ್ನು ಹಿಡಿದುಕೊಂಡು ನಮ್ಮೊಂದಿಗಿದ್ದರೆ ಲೋಕವನ್ನು, ಶರೀರವನ್ನು ಮತ್ತು ಸೈತಾನನನ್ನು ನಾವು ಜಯಿಸಬಹುದು.

 

ಪ್ರಿಯರೇ, ಲೋಕದಲ್ಲಿ ಸಂಕಟವುಂಟು ಎಂದು ಸತ್ಯವೇದವು ಹೇಳುತ್ತಿದೆ. ಆ ಸಂಕಟದಲ್ಲಿ ಗಟ್ಟಿಯಾಗಿ ನಿಂತು ಗೆಲ್ಲಲು ಲೋಕವನ್ನೇ ಗೆದ್ದ ಅವರ ಬೆಂಬಲವಿಲ್ಲದೆ ಸಾಧ್ಯವಿಲ್ಲ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು (ಯೋಹಾನ 16:33). ಧೈರ್ಯವಾಗಿರಿ ಎಂದು ಹೇಳಿ, ನಿಮ್ಮನ್ನು ಸ್ಥಿರವಾಗಿ ನಿಲ್ಲುವಂತೆ ಮಾಡಲು, ದೇವರು ಸಿದ್ಧರಾಗಿ ನಿಮ್ಮ ಬಳಿಗೆ ಬಂದಿದ್ದಾರೆ. ಎಲ್ಲಾ ಶೋಧನೆಗಳು, ಅಗತ್ಯಗಳು, ಸಂಕಟಗಳು, ಕಷ್ಟಗಳ ಮಧ್ಯೆಯೂ ದೇವರು ನಮ್ಮನ್ನು ಬಿಡುಗಡೆ ಮಾಡಲು ಶಕ್ತನಾಗಿದ್ದಾರೆ. ಯಾವುದೇ ಸಂದರ್ಭದಲ್ಲೂ ಆತನು ನಮ್ಮನ್ನು ಕೈಬಿಡುವುದಿಲ್ಲ. ಬಿಡದೆ ಅವರನ್ನು ಹಿಡಿದುಕೊಳ್ಳಿ. ನಾವು ದೇವರನ್ನು ಮಾತ್ರ ಅಂಟಿಕೊಳ್ಳೋಣ ಮತ್ತು ಈ ಲೋಕದಲ್ಲಿ ಅವರಿಗಾಗಿ ಸ್ಥಿರವಾಗಿ ನಿಂತು ಜಯವನ್ನು ಪಡೆಯೋಣ.

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ದೆಬೋರಾಳ್ ಇಲ್ಲದ ಪ್ರತಿ ತಾಲ್ಲೂಕಿನಲ್ಲಿ ಎರಡು ದೆಬೋರಾಳ್ ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)