Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 15.09.2024

ಧೈನಂದಿನ ಧ್ಯಾನ(Kannada) – 15.09.2024

 

ಸಂತೋಷವಾಗಿ ಕೊಡು

 

"…ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು." - 2 ಕೊರಿಂಥ 9:7

 

 ಹಲೋ ಮುದ್ದು ಪುಟಾಣಿಗಳೇ! How are you, ಸ್ಕೂಲ್ ನಲ್ಲಿ ನಿಮಗೆ ತುಂಬಾ ಸ್ನೇಹಿತರಿದ್ದಾರಾ? ಆದರೆ ಎಲ್ಲರೂ ಸಹಾಯ ಮಾಡುತ್ತಾರಾ? ಯಾರಿಗೆಲ್ಲಾ ಕೊಡುವ ಮನಸ್ಸಿದೆಯೋ, ಅವರ ಮೇಲೆ ಯೇಸಪ್ಪಾಗೆ ಪ್ರೀತಿಯುಂಟು. ಇಂದು ಪರಸ್ಪರ ಪೈಪೋಟಿ ನಡೆಸುವ ಸ್ನೇಹಿತರ ಕಥೆಯನ್ನು ಕೇಳೋಣ್ವಾ?

 

ಶಾಲೆಗೆ ಹೊಸದಾಗಿ ಸೇರಿದ ಅರುಳ್ ಮೂರು ತಿಂಗಳಿಂದ ಹೊಸ ಸಮವಸ್ತ್ರ ಹೊಲಿಸಿರಲಿಲ್ಲ. ಅಂಗಿ ಹರಿದು, ಪ್ಯಾಂಟಿನ ಬಣ್ಣ ಮಾಸಿತ್ತು. ಕೂಲಿ ಕೆಲಸ ಮುಗಿಸಿ ಬರುತ್ತಿದ್ದ ತಂದೆಯನ್ನು ದೂರದಲ್ಲಿ ಕಂಡು ವೇಗವಾಗಿ ಓಡಿದ. "ನನಗೆ ಮಾತ್ರ ಹೊಸ ಯೂನಿಫಾರಂ ಹೊಲಿಸಲಿಲ್ಲ ಅಪ್ಪಾ ಪ್ಲೀಸ್ ಹೊಲಿಸಿ ಕೊಡಿ ಎಂಬ ಮಗನ ಮಾತು ಕೇಳಿ ಅರ್ಥ ಮಾಡಿಕೊಂಡ ಅಪ್ಪ ಸರಿ... ಸರಿ... ಎಂದು ತಲೆಯಾಡಿಸುತ್ತಲೇ ಹೋದರು. ಏಕೆಂದರೆ ಅಪ್ಪನಿಗೆ ದಿನವೂ ಕೆಲಸ ಸಿಗುವುದಿಲ್ಲ. ತಂದೆಯನ್ನು ಕೇಳುವುದರಲ್ಲಿ ಪ್ರಯೋಜನವಿಲ್ಲ, ಯೇಸಪ್ಪನ ಬಳಿ ಕೇಳೋಣ ಎಂದು ಯೋಚಿಸಿ ಡೈಲಿ ಪ್ರಾರ್ಥಿಸಲು ಪ್ರಾರಂಭಿಸಿದನು. ಅಂದು ಶಾಲೆಯಲ್ಲಿ ಕ್ಲಾಸ್ ಟೀಚರ್ ನಡೆಸಿದ ಪಾಠದಿಂದ ಕೆಲವು ಪ್ರಶ್ನೆಗಳನ್ನು ಕೇಳಿದರು. ಅರುಳ್ ಡಾನ್.. ಡಾನ್.. ಎಂದು ಕರೆಕ್ಟಾಗಿ ಉತ್ತರಿಸಿದನು. ಎಲ್ಲರಿಗೂ ಆಶ್ಚರ್ಯವಾಯಿತು. ಹೊಸ ಹುಡುಗ ತುಂಬಾ ಚೆನ್ನಾಗಿ ಓದುತ್ತಿದ್ದಾನಲ್ಲಾ! ಹಲೋ, ಅರುಳ್ ನೀನು ಉತ್ತರಿಸುವ ರೀತಿ ನಮಗೆ ತುಂಬಾ ಇಷ್ಟವಾಯಿತು ಎಂದು ಬಾಬು ಮತ್ತು ಮಣಿ ಸ್ನೇಹಿತರಾದರು. ಅರುಳ್ ತೀರಾ ಬಡವನಾಗಿರುವ ಕಾರಣ ನಮ್ಮನ್ನು ಯಾರೂ ಇಷ್ಟಪಡುವುದಿಲ್ಲ ಎಂದುಕೊಂಡು ಯಾರೊಂದಿಗೂ ಮಾತನಾಡುತ್ತಿರಲಿಲ್ಲ.  

 

ಸಂಜೆ ಮಣಿ ಮತ್ತು ಬಾಬು ಅರುಳ್ ಅನ್ನು ನೋಡಲು ಮನೆಗೆ ಬಂದು ಸರ್ಪ್ರೈಸ್ ಕೊಟ್ಟರು. ಉಡುಗೊರೆಯಾಗಿ ನೀಡಿದ ಕವರ್ ಅನ್ನು ಬಿಚ್ಚಿ ನೋಡಿದರೆ ಎರಡು ಯೂನಿಫಾರ್ಮ್ ಡ್ರೆಸ್. ಅರುಳ್ ನ ಮುಖ ಹೊಳೆಯಿತು. ಅರುಳ್ ತಾನು ಮಣ್ಣಿನಿಂದ ಮಾಡಿದ್ದ ವಿವಿಧ ವಸ್ತುಗಳನ್ನು ಬಾಬು ಮತ್ತು ಮಣಿಗೆ ಕೊಟ್ಟನು. ಅವರು ಅದನ್ನು ಸಂತೋಷವಾಗಿ ತೆಗೆದುಕೊಂಡು, ತುಂಬಾ ಸುಂದರವಾಗಿದೆಯಲ್ಲಾ! ಇದನ್ನು ನೀನೇ ಮಾಡಿದ್ಯಾ? ಎಂದು ಕೇಳಿದ ಮಣಿಯ ಬಳಿ ಹೌದು, ಮುಂದಿನ ಬಾರಿ ಅದನ್ನು ಮಾಡಲು ನಾನು ನಿಮಗೂ ಕಲಿಸಿಕೊಡುತ್ತೇನೆ ಎಂದು ಹೇಳುತ್ತಲೇ, ಬರುವ ಭಾನುವಾರದಂದು ನಾವೆಲ್ಲರೂ ಸಂಡೇ ಸ್ಕೂಲ್ ಗೆ ಹೋಗೋಣ್ವಾ? ಎಂಬ ಹೊಸ ಆರಂಭದೊಂದಿಗೆ ಅವರ ಸ್ನೇಹ ಮುಂದುವರೆಯಿತು. ಪ್ರೀತಿಯ ತಮ್ಮ ತಂಗಿಯರೇ!ಇತರರಿಗೆ ಕೊಡುವುದು ನಿಮಗೆ ಎಷ್ಟೊಂದು ಸಂತೋಷವನ್ನು ನೀಡುತ್ತದೆ ಅಲ್ವಾ ನೀವು ಸಹ ಅವಶ್ಯಕತೆಗಳಲ್ಲಿ ಇರುವವರಿಗೆ ಕೊಟ್ಟು ಜೀಸಸ್ ಅನ್ನು ಸಂತೋಷಪಡಿಸಿ. ಮಾಡುತ್ತೀರಾ! Very good 

- Mrs. ಗ್ರೇಸ್ ಜೀವಮಣಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)