Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 11.09.2024

ಧೈನಂದಿನ ಧ್ಯಾನ(Kannada) – 11.09.2024

 

ಅಕ್ಸಾಳ್

 

 ". . . ಸನ್ಮಾನಕ್ಕೆ ಮುಂಚೆ ವಿನಯವಾಗಿದೆ" - ಜ್ಞಾನೋಕ್ತಿ 18:12

  

ಯುದ್ಧದಲ್ಲಿ ಗೆದ್ದವನಿಗೆ ತನ್ನ ಒಬ್ಬಳೇ ಮಗಳನ್ನು ಕೊಡುವುದಾಗಿ ತಂದೆಯೊಬ್ಬರು ಹೇಳಿದರು. ಆಗ ಯುವಕನೊಬ್ಬ ಯುದ್ಧದಲ್ಲಿ ಭಾಗವಹಿಸಿ ಗೆದ್ದನು. ಆ ತಂದೆ ಹೇಳಿದಂತೆ ಮಗಳನ್ನು ಕೊಟ್ಟು ಮದುವೆ ಮಾಡಿದನು. ಅದೂ ಅಲ್ಲದೆ ಕೆಲವು ಸ್ಥಳಗಳನ್ನೂ ಕೊಟ್ಟರು. ಅದನ್ನು ತೆಗೆದುಕೊಂಡು ತನ್ನ ಗಂಡನೊಂದಿಗೆ ಕತ್ತೆಯ ಮೇಲೆ ಪ್ರಯಾಣ ಮಾಡಿದ ನಂತರ ಮಗಳಿಗೆ ಒಂದು ಆಲೋಚನೆ ಬರುತ್ತದೆ, ನನ್ನ ತಂದೆ ನನಗೆ ನೀಡಿದ ಜಮೀನುಗಳು ಒಣಗಿವೆ. ಆದುದರಿಂದ ಒಂದು ನೀರಾವರಿ ಸ್ಥಳವಿದ್ದರೆ ಚೆನ್ನಾಗಿರುತ್ತದೆ ಎಂದು, ಕೂಡಲೇ ಗಂಡನ ಬಳಿ ಅನುಮತಿ ಪಡೆದು ತಂದೆಯ ಬಳಿ ನೀರಾವರಿ ಸ್ಥಳವನ್ನು ಕೇಳುತ್ತಾಳೆ. ಅವರು ತುಂಬಾ ಸಂತೋಷದಿಂದ ಮೇಲಣ ಮತ್ತು ಕೆಳಗಣ ನೀರಾವರಿ ಸ್ಥಳವನ್ನು ಕೊಡುತ್ತಾರೆ. ಅದು ಬೇರೆ ಯಾರೂ ಅಲ್ಲ ಕಾಲೇಬ್‌ನ ಮಗಳು ಅಕ್ಸಳು.   

   

ನಮ್ಮ ಪರಮ ತಂದೆಯೂ ನಮ್ಮನ್ನು ಆಶೀರ್ವದಿಸಲು ಉತ್ಸುಕರಾಗಿದ್ದಾರೆ. ಆದರೆ ನಾವು ಕೋಪ, ಮೊಂಡುತನ, ಗೌರವ ಮತ್ತು ಹೆಮ್ಮೆಯ ಕತ್ತೆಯಿಂದ ಇಳಿಯುತ್ತಿಲ್ಲ. ಇವುಗಳಿಂದ ಇಳಿದರೆ ಸಾಕು. ನಿಮಗೆ ಬೇಕಾದ ಆಶೀರ್ವಾದಗಳನ್ನು ನೀವು ಪಡೆದುಕೊಳ್ಳಬಹುದು. ಕತ್ತೆಯಿಂದ ಇಳಿಯುವುದು ನಮ್ರತೆಯನ್ನು ತೋರಿಸುತ್ತದೆ. ಹೌದು, ದೇವರು ವಿನಮ್ರರಿಗೆ ಅನುಗ್ರಹವನ್ನು ನೀಡುತ್ತಾರೆ. ಅವರ ಕೃಪೆ ಸಾಕು. ನಾವು ನಮ್ಮನ್ನು ವಿನಮ್ರಗೊಳಿಸಿದಾಗ, ನಮ್ಮ ಸರ್ವಶಕ್ತನಾದ ತಂದೆ ನಮ್ಮ ಆಸೆಗಳನ್ನು ಪೂರೈಸುತ್ತಾರೆ. ನಮ್ಮ ಬರವು ಸಮೃದ್ಧಿಯಾಗಿ ಬದಲಾಗುತ್ತದೆ. ಲೌಕಿಕ ತಂದೆಯು ತನ್ನ ಮಗಳ ಆಸೆಗೆ ಹೆಚ್ಚು ಹೇರಳವಾಗಿ ನೀಡುತ್ತಿರುವಾಗ, ನಮ್ಮ ಸ್ವರ್ಗೀಯ ತಂದೆಯು ನಾವು ಯೋಚಿಸುವುದಕ್ಕಿಂತ ಮತ್ತು ಪ್ರಾರ್ಥಿಸುವುದಕ್ಕಿಂತ ಹೆಚ್ಚಾಗಿ ಕೊಡಲು ಉದಾರವಾದವರು. ನಮ್ಮ ಪರಮ ತಂದೆಯ ಬಳಿ ಇಲ್ಲದಿರುವುದು ಎಂದು ಯಾವುದೂ ಇಲ್ಲ. ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು. ಆದ್ದರಿಂದ ಅವರು ಏನು ಬೇಕಾದರೂ ಕೊಡಲು ಶಕ್ತರಾಗಿದ್ದಾರೆ. ನೀವು ನಿಮ್ಮ ಸ್ಥಾನದಿಂದ ಕೆಳಗೆ ಇಳಿದು ಬಂದು ಕೇಳುವುದೇ ಮುಖ್ಯ.

  

ಇದನ್ನು ಓದುತ್ತಿರುವ ಸಹೋದರ ಸಹೋದರಿಯರೇ! ದೇವರ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಲು ಸಾಧ್ಯವಾಗದ ವಿಷಯ ಯಾವುದು ಎಂದು ಯೋಚಿಸೋಣ. ಅಕ್ಸಳು ಕತ್ತೆಯಿಂದ ಕೆಳಗಿಳಿದಳು ಮತ್ತು ಜೆಕರ್ಯನು ಒಂದು ಆಲದ ಮರವನ್ನು ಬಿಟ್ಟು ಇಳಿದನು.. ಇಬ್ಬರೂ ಆಶೀರ್ವಾದವನ್ನು ಪಡೆದರು. ನೀವು ದೇವರನ್ನು ಬಿಟ್ಟು ದೂರಹೋಗಿದ್ದರೂ, ಇಂದು ಪರಮ ತಂದೆಯ ಬಳಿಗೆ ಓಡಿಬನ್ನಿ. ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಅವರು ನಿಮ್ಮನ್ನು ಅಪ್ಪಿಕೊಂಡು ನಿಮ್ಮ ಬರವನ್ನು ಆಶೀರ್ವಾದವಾಗಿ ಪರಿವರ್ತಿಸುತ್ತಾರೆ. ನಾವು ನಮ್ಮನ್ನು ತಗ್ಗಿಸಿಕೊಳ್ಳಲು ಸಿದ್ಧರಾಗಿದ್ದರೆ, ನಾವು ಎಂದೆಂದಿಗೂ ಆಶೀರ್ವಾದವಾಗಿ ಬದುಕಬಹುದು. ನಿಮ್ಮ ಸ್ಥಾನದಿಂದ ಕೆಳಗಿಳಿದು ಪರಮ ತಂದೆಯ ಬಳಿಗೆ ಬನ್ನಿ. ಆತನು ತನ್ನ ಬಳಿಗೆ ಬರುವ ಎಲ್ಲರನ್ನೂ ಸ್ವೀಕರಿಸಲು ಸಿದ್ಧವಾಗಿದ್ದಾರೆ.

- Mrs. ಹೆಪ್ಸಿಬಾ ರವಿಚಂದ್ರನ್

 

ಪ್ರಾರ್ಥನಾ ಅಂಶ:

ನಮ್ಮ ಆಮೆನ್ ವಿಲೇಜ್ ಟಿವಿ ನೋಡುವ ಪ್ರತಿಯೊಬ್ಬರೂ ದೇವರಿಗಾಗಿ ಕಾರ್ಯ ಮಾಡುವವರಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)