Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 13.09.2024

ಧೈನಂದಿನ ಧ್ಯಾನ(Kannada) – 13.09.2024

 

ಬೆಟ್ಟದ ಮೇಲೆ ಸಮಾಧಿ

 

"ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳಕೊಳ್ಳುವನು; ನನ್ನ ನಿವಿುತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು" - ಮತ್ತಾಯ 10:39

 

ಈಗ ಪ್ರವಾಸಿ ತಾಣಗಳಲ್ಲಿ ಸಮಾಧಿಯೂ ಒಂದಾಗಿದೆ. ಭಾರತದಲ್ಲಿ ಸುತ್ತಿ ನೋಡಲು ತಾಜ್ ಮಹಲ್ ನಂತಹ ಸ್ಥಳಗಳಿವೆ. ಫ್ರಾನ್ಸ್ನಲ್ಲಿ, ಪ್ಯಾರಿಸ್ನಲ್ಲಿ ಸಮಾಧಿಯೇ ಪ್ರವಾಸಿ ತಾಣವಾಗಿದೆ. ಅಲ್ಲಿ ಪ್ರಸಿದ್ಧ ವಿಜ್ಞಾನಿಗಳು ಮತ್ತು ದಾರ್ಶನಿಕರು ಅವರ ಸಮಾಧಿಗಳನ್ನು ಹೆಚ್ಚಿನ ವೆಚ್ಚದಲ್ಲಿ ಅಲಂಕರಿಸಿದ್ದಾರೆ. ಫ್ರಾನ್ಸ್‌ಗೆ ಹೋಗುವವರು ಪ್ಯಾರಿಸ್‌ಗೆ ಭೇಟಿ ನೀಡಿದಾಗ ಇವುಗಳನ್ನು ನೋಡದೆ ಹಿಂತಿರುಗುವುದೇ ಇಲ್ಲ. ಅವರು ಸತ್ತರೂ ಸಹ, ಈ ಸಮಾಧಿ ಅವರ ಮೌಲ್ಯ, ಖ್ಯಾತಿ ಮತ್ತು ಪ್ರಭಾವವನ್ನು ಪ್ರತಿನಿಧಿಸುತ್ತದೆ. ಸತ್ಯವೇದದಲ್ಲಿ ಒಬ್ಬ ಮನುಷ್ಯನು ತನ್ನ ಸಮಾಧಿಯನ್ನು ಬಂಡೆಯ ಮೇಲೆ ನಿರ್ಮಿಸಿದನು. ಶೆಪ್ನಾ ಅರಾಮ್‌ನ ವಿಚಾರಣೆಗಾರ ಮತ್ತು ಖಜಾಂಚಿಯಾಗಿದ್ದರು. ಅಂದರೆ ಅರಮನೆಯ ಪ್ರಮುಖ ಹುದ್ದೆಯಲ್ಲಿ ಉತ್ತಮ ಆದಾಯದಲ್ಲಿ ಇದ್ದರು. ಅವರ ಆಸೆ ಎತ್ತರದ ಸ್ಥಳದಲ್ಲಿ ತನಗಾಗಿ ಒಂದು ಗೋರಿಯನ್ನು ಸಿದ್ಧಮಾಡಿ ಇಡಬೇಕೆಂಬುದು! ಹೀಗಾಗಿ, ಜನರು ಯಾವಾಗಲೂ ನನ್ನನ್ನು ನೆನೆಸಿಕೊಳ್ಳುತ್ತಲೇ ಇರುವ ಹಾಗೆ ಬೆಟ್ಟದ ತುದಿಯಲ್ಲಿ, ಒಳ್ಳೆಯ ಹೆಸರಾಂತ ಸ್ಥಳದಲ್ಲಿ ನನಗಾಗಿ ಸಮಾಧಿಯನ್ನು ಸಿದ್ಧಮಾಡಿ ಇಡುತ್ತೇನೆ ಎಂಬ ಆಲೋಚನೆಯನ್ನು ಹೊಂದಿದ್ದರು. ಅಂದರೆ, ತನ್ನ ಅಗತ್ಯಕ್ಕಿಂತಲೂ ಹೆಚ್ಚಾಗಿರುವ ಹಣದಲ್ಲಿ ನಮಗೆ ಹೆಮ್ಮೆಯಿಂದ ಏನು ಮಾಡೋದು? ಎಂದು ಯೋಚಿಸಿ ಸಮಾಧಿಯನ್ನು ಕಟ್ಟಿದರು.

  

ಸಮಸ್ಯೆಗಳಿಲ್ಲದೆ ಆಶೀರ್ವಾದ ಬಂದಾಗ ಮನಸ್ಸು ದೇವರನ್ನು ಹುಡುಕುವುದು ಕಡಿಮೆಯಾಗಿಬಿಡುತ್ತದೆ. ಇದರ ಆಧಾರದ ಮೇಲೆ ಜೀವನದ ಹೆಮ್ಮೆ ಬರುತ್ತದೆ. ಜೀವನದ ಉದ್ದೇಶವೇ ಸಂಪತ್ತು ಮತ್ತು ಆಶೀರ್ವಾದವನ್ನು ಸಂರಕ್ಷಿಸಿಕೊಳ್ಳುವುದಾಗಿಯೇ ಮಾರ್ಪಡಬಾರದು. ಧರ್ಮೋಪದೇಶಕಾಂಡ 6:10-12 ರಲ್ಲಿರುವ ವಾಕ್ಯಗಳಲ್ಲಿ ನೀವು ತಿಂದು ತೃಪ್ತರಾಗಿರುವಾಗ ಕರ್ತನನ್ನು ಮರೆಯದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಲ್ಪಟ್ಟಿದೆ. ಏಕೆಂದರೆ ಸೌಕರ್ಯಗಳು ಮತ್ತು ಆಶೀರ್ವಾದಗಳು ಹೆಚ್ಚಾದಾಗ, ನಮ್ಮ ಮನಸ್ಸು ನೇರವಾಗಿ ಅವುಗಳತ್ತ ಹಿಂತಿರುಗದಂತೆ ಎಚ್ಚರವಹಿಸು ಎಂದು ಹೇಳುತ್ತಾರೆ. ಆಶೀರ್ವಾದಗಳು ಹೇರಳವಾದಾಗ, ಮನುಷ್ಯನಿಗೆ ಸರಳವಾಗಿ ಬರುವುದು ಹೆಮ್ಮೆ. ಅದರ ಬಗ್ಗೆ ಎಚ್ಚರವಾಗಿರಬೇಕು.

 

ಪ್ರಿಯರೇ! ನಮ್ಮ ಕ್ರಿಯೆಗಳ ಉದ್ದೇಶವೇನು? ಆ ದಿನ ಅವರು ಬಾಬೆಲ್ ಗೋಪುರವನ್ನು ನಿರ್ಮಿಸಿ ಹೆಸರು ಗಳಿಸಿದರು. (ಆದಿಕಾಂಡ 11:4) ದೇವರು ಅದನ್ನು ಬಯಸಲಿಲ್ಲ. ಅವರು ಜನರನ್ನು ಚದುರಿಸಿದರು. ಹೌದು, ನಮ್ಮ ಕಾರ್ಯಗಳ ಉದ್ದೇಶ ಹೆಸರು, ಕೀರ್ತಿ, ಪ್ರಖ್ಯಾತಿ, ಗೌರವ, ಸ್ಥಾನಮಾನಗಳಾಗಿದ್ದರೆ, ಆಗ ದೇವರು ಅದರಲ್ಲಿ ಸಂತೋಷಪಡುವುದಿಲ್ಲ. ಇಂತಹ ಯೋಚನೆ ನಮ್ಮ ಮುಂದೆ ಇದೆಯೇ ಎಂದು ಸ್ವಲ್ಪ ಆಳವಾಗಿ ನೋಡಿ, ನಮ್ಮನ್ನು ಸರಿಮಾಡಿಕೊಳ್ಳೋಣ.

- Bro. ಸಂತೋಷ್

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಯಲ್ಲಿರುವ ಸೇವಕರಿಗೆ ದೇವರು ವಿಶೇಷವಾದ ಜ್ಞಾನವನ್ನು ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)