Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 05.02.2021

ಧೈನಂದಿನ ಧ್ಯಾನ(Kannada) – 05.02.2021

ಒಳ್ಳೇದಕ್ಕಾಗಿಯೇ

“ಆದರೆ ನಾವು ಯಾವದೋ ಒಂದು ದ್ವೀಪದ ದಡವನ್ನು ತಾಕಬೇಕಾಗಿದೆ ಎಂದು ಹೇಳಿದನು” - ಅಪೊಸ್ತಲ 27:26

ಕರೀಬಿಯನ್ ಸಮುದ್ರದಲ್ಲಿ ಹೋಗುತ್ತಿದ್ದ ಒಂದು ಹಡಗು ಅಪಾಯಕರವಾದ ವಾತಾವರಣದಲ್ಲಿ ಇಕ್ಕಟ್ಟಿಗೆ ಗುರಿಯಾಯಿತು. ಆ ನಾವಿಕನು ಭಯಪಟ್ಟ ಹಾಗೆಯೇ ಹಡಗು ಮತ್ತೊಂದು ದಿಕ್ಕಿಗೆ ಹೋಗಲು ಪ್ರಾರಂಭಿಸಿತು. ಕೊನೆಗೆ ಒಂದು ಬಂಡೆಗೆ ಗುದ್ದಿಕೊಂಡು ಹಡಗು ಹೊಡೆದು ಹೋಯಿತು. ಅದರಲ್ಲಿ ಕೆಲವರು ಮರಣಹೊಂದಿದರು. ಮರಣ ಹೊಂದಿದವರಲ್ಲಿ ಒಬ್ಬ ಸೇವಕನ ಹೆಂಡತಿಯು ಇದ್ದರು. ಮಿಕ್ಕವರು ಅವರಿಗೆ ಸಿಕ್ಕಿದ ಮರದ ತುಂಡುಗಳನ್ನು ಎತ್ತಿಕೊಂಡು ಪಕ್ಕದಲ್ಲಿದ್ದ ದ್ವೀಪಕ್ಕೆ ಸೇರಿಕೊಂಡರು. ಅದನ್ನು ನೋಡಿದ ಸೇವಕರು ಜೀವನದ ತುಟ್ಟತುದಿಗೆ ಸೇರಿಕೊಂಡ ಹಾಗೆ ಆಗಿಬಿಟ್ಟರು. ಏನು ಮಾಡಬೇಕು ಎಂದು ತಿಳಿಯದೆ ಅಂಗಲಾಚುತ್ತಿದ್ದ ಆ ಸೇವಕನ ಬಳಿಗೆ ಆ ದ್ವೀಪದಲ್ಲಿದ್ದ ಒಬ್ಬರು ಬಂದು ಅಯ್ಯಾ ದೇವರಿಗೆ ಸ್ತೋತ್ರ ಎಂದರು. ಆತನು ತನ್ನ ಅಳುವನ್ನು ನಿಲ್ಲಿಸಿ ನಾನು ನಿಮಗೆ ಹೇಗೆ ಗೊತ್ತು ಎಂದು ಕೇಳಿದರು ಅದಕ್ಕೆ ಅವರು "ಅಯ್ಯಾ ನಾವು ಅನೇಕ ದಿನಗಳಿಂದ ಈ ದ್ವೀಪದಲ್ಲಿರುವ ಸಭೆಗೆ ಒಬ್ಬ ಸೇವಕನನ್ನು ಕಳುಹಿಸಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೆವು. ನಮ್ಮ ಪ್ರಾರ್ಥನೆಗೆ ಬಂದ ಉತ್ತರವೇ ನೀವು" ಎಂದು ಹೇಳಿದರಂತೆ. ಬಹಳ ವೇದನೆಯ ಶಿಖರದಲ್ಲಿದ್ದ ಸೇವಕನು ದೇವರ ನಡೆಸುವಿಕೆಯನ್ನು ನೋಡಿ ಆಶ್ಚರ್ಯಪಟ್ಟು ದೇವರನ್ನು ಮಹಿಮೆ ಪಡಿಸಿದರು. ಹೌದು ನಮ್ಮ ಜೀವನದಲ್ಲಿಯೂ ಕೂಡ ನಡೆಯುತ್ತಿರುವ ಪ್ರತಿಯೊಂದು ಬಿರುಗಾಳಿಯಂತಹ ಕಾರ್ಯಗಳ ಮಧ್ಯದಲ್ಲಿಯೂ  ದೇವರ ಅದ್ಭುತಗಳು,  ಒಳ್ಳೇ ಕಾರ್ಯಗಳು ಇರುವುದು ಖಂಡಿತ!

ಈ ದಿನ ಸತ್ಯವೇದ ಭಾಗದಲ್ಲಿ,  ಪೌಲನು ಪ್ರಯಾಣ ಮಾಡಿದ ಹಡಗು ವಾತಾವರಣದಲ್ಲಿನ ಬದಲಾವಣೆಗಳಿಂದ ಅನೇಕ ದಿನಗಳು ಸಮುದ್ರದಲ್ಲಿಯೇ ಪರಿತಪಿಸಿದ್ದನ್ನು ನಾವು ಸತ್ಯವೇದದಲ್ಲಿ ನೋಡುತ್ತೇವೆ. ಕೊನೆಗೆ ಹಡಗು ಒಂದು ದ್ವೀಪಕ್ಕೆ ಸೇರಿಕೊಂಡಿತು ಆದ್ದರಿಂದ ಪ್ರಾಣದೊಂದಿಗೆ ಹೊರಬಿದ್ದರು. ಹೊರಡಬೇಕೆಂದು ಹೊರಟ ಸ್ಥಳಕ್ಕೆ ಹೋಗದೆ ವಿಳಾಸ ಗೊತ್ತಿಲ್ಲದ ಒಂದು ಸ್ಥಳಕ್ಕೆ ಪೌಲನು ಕರೆದೊಯ್ಯಲ್ಪಟ್ಟನು. ಹಾಗೆ ಹೋದ ಆ ದ್ವೀಪದಲ್ಲಿ ಪೌಲನಿಗಾಗಿ ದೇವರು ಸೇವೆಯನ್ನು ಸಿದ್ಧ ಮಾಡಿದರು. ದೇವರ ಚಿತ್ತದ ಕೇಂದ್ರದಲ್ಲಿರುವವರಿಗೆ ಅವರ ಜೀವನದಲ್ಲಿ ಏನೇ ನಡೆದರೂ ಅದು ಒಳ್ಳೇದಕ್ಕಾಗಿಯೇ ನಡೆಯುತ್ತದೆ. ಈ ಸಂದೇಶವನ್ನು ಓದುತ್ತಿರುವ ನಿಮ್ಮ ಪ್ರತಿಯೊಬ್ಬರೊಂದಿಗೂ ದೇವರು ಮಾತನಾಡುತ್ತಿದ್ದಾರೆ. ನೀವು ದಾಟಿ ಹೋಗಬೇಕಾದ ಪರಿಸ್ಥಿತಿಗಳು ಭಿನ್ನವಾಗಿರುವಾಗ ಜೀವನದಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂದು ನೆನೆಸಬೇಡಿರಿ.  ಕೆಟ್ಟದ್ದನ್ನು ಒಳ್ಳೇದಾಗಿ ಮಾರ್ಪಡಿಸಬಲ್ಲ ಸರ್ವಶಕ್ತನಾದ ದೇವರು ನಿಮ್ಮೊಂದಿಗಿದ್ದಾರೆ. ಆತನು ಆಶ್ಚರ್ಯಕರವಾದ ಮಾರ್ಗಗಳನ್ನು ನಿಮಗಾಗಿ ತೆರೆಯುತ್ತಾರೆ.
-    P. ಜೇಕಬ್ ಶಂಕರ್

ಪ್ರಾರ್ಥನಾ ಅಂಶ:-
ನಮ್ಮ ಸಹಚರ ಸೇವಕರ ಮುಖಾಂತರ ಭೇಟಿ ಮಾಡುತ್ತಿರುವ ಆಲಯಗಳಿಲ್ಲದ ಗ್ರಾಮಗಳಲ್ಲಿ ಆಲಯಗಳು ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)