Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 03.02.2021

ಧೈನಂದಿನ ಧ್ಯಾನ(Kannada) – 03.02.2021

ಶಿಷ್ಯನಿಗೆ ಯಾವುದು ಅಗತ್ಯ?

"...ಆಕೆಯು ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು" - ಅಪೊಸ್ತಲ 9:36

ಮೂವರು ಕ್ರೈಸ್ತ ಯೌವ್ವನಸ್ಥರು ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಮೂವರೊಳಗೂ ಒಂದು ಚರ್ಚೆ ಪ್ರಾರಂಭವಾಯಿತು. ನಾವು ದೇವರಿಗೆ ಭಯಪಟ್ಟು ನಡೆದರೆ ಮಾತ್ರವೇ ಸಾಕು, ಅದನ್ನು ಬಿಟ್ಟರೆ ಮತ್ತೊಬ್ಬರಿಗೆ ಸಹಾಯ ಮಾಡುವುದೆಲ್ಲ ಬೇಡ. ನಾವು ದೈವಭಕ್ತಿಯೊಂದಿಗೆ ಜೀವಿಸಿದರೆ ಸಾಕು ಎಂದು ಒಬ್ಬನು ಹೇಳಿದನು. ಮೂರು ಜನರು ಒಬ್ಬರ ನಂತರ ಒಬ್ಬರು ಹೀಗೆ ಚರ್ಚೆ ಮಾಡುತ್ತಿದ್ದರು. ಇದನ್ನು ಕೇಳಿಸಿಕೊಳ್ಳುತ್ತಿದ್ದ ನಾವಿಕನು ತನ್ನ ಕೈಯಲ್ಲಿದ್ದ ಒಂದು ಕೋಲನ್ನು ಹಡಗಿನೊಳಗೆ ಇಟ್ಟು ಬಿಟ್ಟು ಒಂದೇ ಕೋಲಿನಿಂದ ಹಡಗನ್ನು ನಡೆಸಿದನು, ಆದರೆ ಹಡಗು ಮುಂದೆ ಹೋಗಲೇ ಇಲ್ಲ. ಇದನ್ನು ಗಮನಿಸಿದ ಒಬ್ಬನು, ಅಯ್ಯಾ ನಾವಿಕನೇ ಎರಡು ಕೋಲುಗಳನ್ನು ಇಟ್ಟುಕೊಂಡು ಹಡಗನ್ನು ನಡೆಸಿರಿ. ಆಗಲೇ ಹಡಗು ಸರಿಯಾಗಿ ಹೋಗುತ್ತದೆ ಎಂದನು. ಕೂಡಲೇ ಆ ನಾವಿಕನು ತಮ್ಮಂದಿರೇ ಇದರಂತೆಯೇ ಕ್ರೈಸ್ತನಾಗಿ, ಶಿಷ್ಯನಾಗಿ ಬಾಳಬೇಕಾದರೆ ದೈವಭಕ್ತಿಯು ಬೇಕು, ಸತ್ಕಾರ್ಯಗಳು ಬೇಕು ಎಂದು ಹೇಳಿದರು.

ಸತ್ಯವೇದದಲ್ಲಿಯು ದೊರ್ಕಳೆಂಬ ದೈವಭಕ್ತಿಯುಳ್ಳ ಶಿಷ್ಯೆಯನ್ನು ಕುರಿತು ನೋಡುತ್ತೇವೆ. ಅವಳ ಬಗ್ಗೆ ಎಲ್ಲರೂ ಹೇಳಿದ ಸಾಕ್ಷಿ ಏನು ಗೊತ್ತಾ? ಅವಳು ಬಹಳ ಸತ್ಕಾರ್ಯಗಳನ್ನು, ದಾನಧರ್ಮಗಳನ್ನು, ಮಾಡುತ್ತಿದ್ದಳು ಎಂಬುದೇ! ಅವಳು ಅನೇಕ ಸತ್ಕಾರ್ಯಗಳೊಂದಿಗೆ, ದೇವರ ಬಗ್ಗೆ ತಿಳಿಸುತ್ತಿದ್ದಳು. ದೊರ್ಕಳು ಸತ್ತ ನಂತರ ಅವಳ ಮೂಲಕ ಸತ್ಕಾರ್ಯಗಳನ್ನು ಹೊಂದಿಕೊಂಡ ಅನೇಕರು ಬಂದು ಪೇತ್ರನನ್ನು ಕರೆಸಿದರು. ಪೇತ್ರನು ಬಂದು ಪ್ರಾರ್ಥಿಸಿ ತಬಿಥಳೇ, ಎದ್ದೇಳು ಎಂದ ಕೂಡಲೇ ದೊರ್ಕಳು ಜೀವದಿಂದೆದ್ದಳು. ಅನೇಕರು ಇದರಿಂದ ಕರ್ತನಲ್ಲಿ ನಂಬಿಕೆಯಿಟ್ಟರು.

ಪ್ರಿಯರೇ, ಶಿಷ್ಯನಾಗಿ ಜೀವಿಸುವ ನಮ್ಮ ಜೀವನದಲ್ಲಿ ದೈವಭಕ್ತಿ ಎಷ್ಟೊಂದು ಪ್ರಾಮುಖ್ಯವಾದದ್ದು ಅದರಂತೆಯೇ ಮತ್ತೊಬ್ಬರಿಗೆ ಸಹಾಯ ಮಾಡುವುದು ಬಹಳ ಅಗತ್ಯ. ಒಂದೊಂದು ಕ್ರೈಸ್ತನಿಗೂ ದೈವಭಕ್ತಿಯು, ಸತ್ಕ್ರಿಯೆಯು ನಾಣ್ಯದ ಎರಡು ಭಾಗಗಳ ಹಾಗೆ. ಸತ್ಕ್ರಿಯೆಗಳ ಮೂಲಕವೇ ನಾವು ದೇವರ ಪ್ರೀತಿಯನ್ನು ಹೊರಪಡಿಸಲು ಸಾಧ್ಯ. ದೊರ್ಕಳು ಈ ರೀತಿಯಾಗಿದ್ದು ಜೀವವನ್ನು ಪಡೆದುಕೊಂಡ ಹಾಗೆ, ನಮ್ಮ ಜೀವನದಲ್ಲಿಯೂ ಸತ್ತುಹೋಗಿರುವ ಭಾಗಗಳು ಜೀವ ಪಡೆದುಕೊಳ್ಳಲು, ನಮ್ಮ ಜೀವನದ ಮೂಲಕ ಅನೇಕರು ನಂಬಿಕೆಯೊಳಗೆ ಬರಲು ಈ ಕಾರ್ಯಗಳು ಪ್ರಯೋಜನಕಾರಿಯಾಗಿರುತ್ತವೆ. ನಾವು ಏಸುವನ್ನು ಹಿಂಬಾಲಿಸುವ ನಿಜ ಶಿಷ್ಯನಾಗಿದ್ದರೆ ಯೇಸುವನ್ನು ಹಿಂಬಾಲಿಸೋಣ! ಸತ್ಕ್ರಿಯೆಗಳನ್ನು ಮಾಡಿ ಯೇಸುಕ್ರಿಸ್ತನನ್ನು ಲೋಕಕ್ಕೆ ತೋರಿಸೋಣ.
-    Mrs. ಜಾಸ್ಮಿನ್ ಸಮುವೇಲ್

ಪ್ರಾರ್ಥನಾ ಅಂಶ:-
7000 ಮಿಷನರಿಗಳ ಮೂಲಕ 100000 ಗ್ರಾಮಗಳನ್ನು ಭೇಟಿಮಾಡಲು ಸಮರ್ಪಿಸಿಕೊಂಡ ಮಿಷನರಿಗಳನ್ನು ಕರ್ತನು ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)