Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 01.02.2021

ಧೈನಂದಿನ ಧ್ಯಾನ(Kannada) – 01.02.2021

ಹಂಚೋಣ

"ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾವಾಕ್ಯವನ್ನು ಸಾರುತ್ತಿದ್ದರು" - ಅಪೊಸ್ತಲ 8:4

ದೇವರಿಂದ ಬಲವಾಗಿ ಉಪಯೋಗಿಸಲ್ಪಟ್ಟ ವಿಗಿಲ್ಸ್ ವರ್ತ್ ಎಂಬ ದೇವ ಸೇವಕರ ಕೂಟಗಳು ಸಿಡ್ನಿಯಲ್ಲಿ ನಡೆದವು. ಒಂದು ದಿನ ಶ್ರೀಮಂತರು ಉನ್ನತ ವ್ಯಕ್ತಿಗಳು ಮಾತ್ರವೇ ಹೋಗುವ ಒಂದು ದೊಡ್ಡ ಹೋಟೆಲ್ ಗೆ ಊಟಕ್ಕೆ ಅವರನ್ನು ಕರೆದುಕೊಂಡು ಹೋದರು. ಅಲ್ಲಿ ಒಳಗೆ ಹೋದಾಗ ಹದ್ದಿನ ನೋಟದೊಂದಿಗೆ ಸುತ್ತಲೂ ಇದ್ದವರನ್ನು ನೋಡುತ್ತಿದ್ದರು. ಕೂಡಲೇ ಅಲ್ಲಿದ್ದ  ಬೆಳ್ಳಿ ಫೋರ್ಕ್ ತೆಗೆದುಕೊಂಡು, ಗಾಜಿನ ಲೋಟಕ್ಕೆ ತಟ್ಟಿದಾಗ ಟಿಂಗ್ ಟಿಂಗ್ ಎಂಬ ಒಂದು ಗಂಟೆ ಶಬ್ಧವನ್ನು ಕೇಳಿದ ಕೂಡಲೇ ಎಲ್ಲರೂ ಹಾಗೆ ಸ್ತಬ್ದರಾದರು. ಊಟ ಮಾಡುತ್ತಿದ್ದವರು ತಿನ್ನುವುದನ್ನು ಹಾಗೆ ನಿಲ್ಲಿಸಿಬಿಟ್ಟು ನಿಶ್ಯಬ್ಧರಾದರು. ಅವರು ತಮ್ಮ ಕೈಗಳನ್ನು ಮೇಲೆತ್ತಿ  "ಶ್ರೀಮಂತರೇ, ನಾನು ಬಂದಾಗಿನಿಂದ ನೋಡುತ್ತಿದ್ದೇನೆ ಯಾರೂ ಕೂಡ ತಿನ್ನುವುದಕ್ಕಿಂತ ಮುಂಚೆ ಪ್ರಾರ್ಥಿಸಲೇ ಇಲ್ಲ, ನಿಮ್ಮನ್ನು ನೋಡಿದರೆ ಹಂದಿಗಳ ಗುಂಪನ್ನು ನೋಡಿದ ಹಾಗಿದೆ. ಈ ಆಹಾರವನ್ನು ಕೊಟ್ಟ ದೇವರಿಗೆ ಕೃತಜ್ಞತೆಯನ್ನು ಕೂಡ ಸಲ್ಲಿಸದೇ ಹೀಗೆ ನುಂಗಿ ಬಿಡುತ್ತಿದ್ದೀರೆ ತಲೆಗಳನ್ನು ಬೊಗ್ಗಿಸಿರಿ. ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿ ಪ್ರಾರ್ಥಿಸಿದರು. ಆತನು ಆಹಾರವನ್ನು ತಿಂದು ಹೋಗುವುದಕ್ಕಿಂತ ಮುಂಚೆ ಅಲ್ಲಿ ಊಟಕ್ಕೆ ಬಂದಿದ್ದ ಇಬ್ಬರು ಆತನ ಬಳಿಗೆ ಬಂದು ಆತನ ಕುಟುಂಬದೊಂದಿಗೆ ರಕ್ಷಣೆ ಹೊಂದಿ ಪ್ರಾರ್ಥನೆ ಮಾಡಿಸಿ ಕೊಂಡು ಹೋದರು. ಹೀಗೆ ಆತನು ರಕ್ಷಣೆ ಕುರಿತು ಪ್ರಕಟಿಸುವುದಕ್ಕೆ ಸ್ಥಳ, ಪರಿಸ್ಥಿತಿ ಎಂದು ಯಾವುದನ್ನು ನೋಡದೆ  ಅದನ್ನು ಉಪಯೋಗಿಸಿಕೊಳ್ಳುತ್ತಿದ್ದರು.

ಅಪೊಸ್ತಲರ ಕೃತ್ಯಗಳಲ್ಲಿ ಸುವಾರ್ತೆ ಎಲ್ಲಾ ಪ್ರಾಂತ್ಯದಲ್ಲಿರುವ ಜನರಿಗೂ ಹೋಯಿತು ಎಂದು ಓದುತ್ತೇವೆ. ಪಕ್ಷಪಾತ, ಭಯ ಇವೆಲ್ಲವನ್ನು ದಾಟಿ ಸುವಾರ್ತೆಯನ್ನು ಪ್ರಕಟಿಸಿದರು.

1. ಪೇತ್ರನು:-  ಈತನು ದೊಡ್ಡ ವಿದ್ಯಾವಂತನಲ್ಲದೇ ಹೋದರೂ ಈತನ ಸಂದೇಶದಿಂದ 3000 ಜನರು, 5000 ಜನರು ಎಂದು ದೊಡ್ಡಮಟ್ಟದಲ್ಲಿ ಅನೇಕರು ಸುವಾರ್ತೆಯನ್ನು ಅಂಗೀಕರಿಸಿದರು. ಬೈಬಲ್ ನಲ್ಲಿ ಫರಿಸಾಯರು, ಯಾಜಕರ ಬಳಿಯಲ್ಲಿಯೂ ಭಯಪಡದೆ ಮಾತನಾಡಿದರು. ದೊಡ್ಡ ಗುಂಪಿಗೆ ಮಾತ್ರವಲ್ಲದೆ ಇಟಲಿ ಪಟ್ಟಣದಲ್ಲಿ ಕೊರ್ನೇಲ್ಯನ ಮನೆಯಲ್ಲಿ ಚಿಕ್ಕ ಪ್ರಾರ್ಥನಾ ಗುಂಪಿನಲ್ಲಿ ಕೂಡ ದೇವರು ಈತನನ್ನು ಉಪಯೋಗಿಸಿದರು.

2. ಫಿಲಿಪ್ಪಿ:- ಇವರು ಆದಿ ಸಭೆಯಲ್ಲಿ ವಿಚಾರ ಕರ್ತನಾಗಿದ್ದರೂ ಈತನು ಹೇಳಿದ ಸುವಾರ್ತೆಯಿಂದ ಒಂದು ಪಟ್ಟಣವೇ ಸಂತೋಷಿಸುವಂತೆ ದೇವರು ಮಾಡಿದರು. ಐತಿಯೋಪ್ಯ ಮಂತ್ರಿ ಅರಣ್ಯದಲ್ಲಿ ಹೋಗುತ್ತಿರುವಾಗ ದೇವರು ಆತನ ರಕ್ಷಣೆಗಾಗಿ ಈತನನ್ನು ಉಪಯೋಗಿಸಿಕೊಂಡರು.

3. ಪೌಲನು:- ದೊಡ್ಡ ವಿದ್ಯಾವಂತನಾಗಿದ್ದ ಈತನು ಕೂಡ ಲೂದಿಯಾಳ ಹೃದಯವು ತೆರೆಯುವಂತೆ ಮಾಡಿ ಆಕೆಯ ಕುಟುಂಬವನ್ನು ರಕ್ಷಣೆಯಲ್ಲಿ ನಡೆಸಿದರು. ಸೆರೆಯಲ್ಲಿ ಇರುವಾಗ ಕಾವಲುಗಾರರು ಮತ್ತು ಅವರ ಕುಟುಂಬವೆಲ್ಲಾ ಯೇಸುವನ್ನು ರುಚಿ ನೋಡಿದರು. ಹೀಗೆ ಅನೇಕ ಪಟ್ಟಣಗಳಲ್ಲಿ, ಅರಮನೆಯಲ್ಲಿ, ಅಧಿಕಾರಿಗಳ ಮುಂದೆಯೂ, ದ್ವೀಪಗಳಲ್ಲಿಯು ಅನೇಕ ವಿಧವಾದ ಜನರ ಮಧ್ಯದಲ್ಲಿಯೂ ಕೂಡ ಪೌಲನು ಪ್ರಸಂಗ ಮಾಡಿದರು.

ಪ್ರಿಯರೇ! ಸುವಾರ್ತೆ ಎಂಬುದು ಮನುಷ್ಯರಾಗಿ ಹುಟ್ಟಿದ ಎಲ್ಲರಿಗೂ ಹಂಚ ಬೇಕಾದ ಒಂದು ಸ್ವತ್ತು. ಅದು ಬಡವರು, ಧನವಂತರು, ದಾಸರು, ಯಜಮಾನರು, ಕೆಲಸಗಾರರು ಎಂದು ಎಲ್ಲರಿಗೂ ಸೇರಿದ್ದು, ಎಲ್ಲಾ ವಯಸ್ಸಿನವರಿಗೂ ಸೇರಿದ್ದು, ಎಲ್ಲಾ ದೇಶಗಳವರಿಗೂ, ಎಲ್ಲಾ ಬಣ್ಣದವರಿಗೂ ಸೇರಿದ್ದು. ಆದರೆ ಇದನ್ನು ಹೊಂದಿಕೊಂಡ ನಾವು ಮತ್ತೊಬ್ಬರಿಗೆ ಕೊಡದೇ ಇದ್ದೇವಾ? ಆಲೋಚಿಸೋಣ. ಇದನ್ನು ಹೊಂದಿಕೊಂಡ ನಾವು ಎಲ್ಲರಿಗೂ ಹಂಚ ಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಗ್ರಹಿಸಿ ಮತ್ತೊಬ್ಬರಿಗೆ ಹಂಚೋಣ.
-    ಬ್ರದರ್. ಮನೋಜ್ ಕುಮಾರ್

ಪ್ರಾರ್ಥನಾ ಅಂಶ:-
ಈ ತಿಂಗಳೆಲ್ಲಾ ನಡೆಯುವ ಎಲ್ಲಾ ಸೇವೆಗಳಲ್ಲಿ ದೇವರ ಹಸ್ತವು ಜೊತೆಇದ್ದು ನಡೆಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)