Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 31.01.2021 (Kids Special)

ಧೈನಂದಿನ ಧ್ಯಾನ(Kannada) – 31.01.2021 (Kids Special)

ಸಹಾಯ ಮಾಡುವುದರಿಂದ ಆಶೀರ್ವಾದ

"...ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ;" - ಮತ್ತಾಯ 5:44

ಹಾಯ್ ಪುಟಾಣಿಗಳೇ.. ಹೇಗಿದ್ದೀರಾ, ಸಂತೋಷವಾಗಿ ಇದ್ದೀರಾ? ಸರಿ ನಾವು ಈ ದಿನದ ಧ್ಯಾನದಲ್ಲಿ ಇಬ್ಬರು ಸ್ನೇಹಿತರ ಕಥೆಯನ್ನು ಕೇಳೋಣವಾ?

ರವಿ ಎಂಬ ಒಬ್ಬ ಚಿಕ್ಕ ಹುಡುಗ ಶಾಲೆಯಲ್ಲಿ ಓದುತ್ತಿದ್ದ. ಅವನ ತಂದೆ ಒಂದು ದೊಡ್ಡ ಬಿಜಿನೆಸ್ ಮ್ಯಾನ್. ರವಿಗೆ ಸ್ಟೀಫನ್ ಎಂಬ ಒಂದು ಒಳ್ಳೆಯ ಸ್ನೇಹಿತ ನಿದ್ದನು. ಸ್ಟೀಫನ್ ಒಳ್ಳೆಯ ದೈವ ಭಕ್ತಿಯುಳ್ಳವನು. ಆದರೆ ರವಿಗೆ ಇದರಲ್ಲಿ ನಂಬಿಕೆಯೇ ಇಲ್ಲ. ಸ್ಟೀಫನ್ ಬಲವಂತ ಮಾಡುತ್ತಿದ್ದದರಿಂದ Sunday class ಗೆ ಹೋಗುತ್ತಿದ್ದನು. ಆದರೆ ಅಲ್ಲಿ ಹೇಳುವ ಮಾತುಗಳನ್ನು ಕೇಳುವುದೇ ಇಲ್ಲ. ಈ ಇಬ್ಬರು friends ಕೂಡ ಒಂದಾಗಿ ಶಾಲೆಯಲ್ಲಿ ಓದುತ್ತಿದ್ದರು. ಆ ಕ್ಲಾಸಿನಲ್ಲಿ ಇವರೊಂದಿಗೆ ಇನ್ನೊಬ್ಬ ಸ್ನೇಹಿತನೂ ಇದ್ದನು. ಅವನ ಹೆಸರು ಯೋಸೇಫ್. ಇವನು ಚೆನ್ನಾಗಿ ಪ್ರಾರ್ಥಿಸುವವನು. ಯೋಸೇಫನು ಬಡವನೆಂದು ರವಿ ಅವನ ಬಳಿ ಮಾತಾಡುವುದೇ ಇಲ್ಲ. ಯಾವಾಗಲೂ ಸ್ಟೀಫನ್ ರವಿ ಬಳಿ ಯೇಸಪ್ಪನ ಪ್ರೀತಿಯ ಬಗ್ಗೆ ಹೇಳಿದರೆ ರವಿ ಅಂಗೀಕರಿಸುವುದೇ ಇಲ್ಲ. ಒಂದು ದಿನ ರವಿಯ ಅಪ್ಪ ಹುಷಾರಿಲ್ಲದೆ ಆಸ್ಪತ್ರೆಗೆ ಹೋದರು, ಅಲ್ಲಿ ರವಿಯ ಅಪ್ಪನಿಗೆ ಆಪರೇಷನ್ ಮಾಡಬೇಕೆಂದು ಡಾಕ್ಟರ್ ಹೇಳಿಬಿಟ್ಟರು. ಇದನ್ನು ಕೇಳಿದ ಯೋಸೆಫ್ ಏನಾದರೂ help ಮಾಡಬೇಕೆಂದು ನೆನೆಸಿದನು.

ಯೋಸೇಫನು ತುಂಬಾ ಚೆನ್ನಾಗಿ drawing ಮಾಡುತ್ತಾನೆ. ಮರುದಿನ ಅವರ ಶಾಲೆಯಲ್ಲಿ international drawing competition ಇತ್ತು. ಅದರಲ್ಲಿ ಯೋಸೇಫನಿಗೆ  First prize ಸಿಕ್ಕಿತು. ಮತ್ತು ಅವನಿಗೆ ದೊಡ್ಡ ಮೊತ್ತವನ್ನು gift ಆಗಿ ಕೊಟ್ಟರು. ಯೋಸೇಫನು ಆ ಹಣವನ್ನು ಏನು ಮಾಡಿರುತ್ತಾನೆ ಎಂದು ನೆನೆಸುತ್ತೀರ? ಅವನ ತಾಯಿಯ ಬಳಿ ಹೋಗಿ ರವಿಯ ಅಪ್ಪನ ಬಗ್ಗೆ ಹೇಳಿ, ಆ ಹಣವನ್ನು ರವಿಗೆ ಕೊಡಲಾ? ಎಂದು ಕೇಳಿದನು. ಅದಕ್ಕೆ ತಾಯಿ ಸರಿ ಎಂದು ಹೇಳಿದರು. ಯೋಸೇಫನು fast ಆಗಿ ಆಸ್ಪತ್ರೆಗೆ ಓಡಿ ಹೋದನು. ಅಲ್ಲಿ ಹೋಗಿ ಆ ಹಣವನ್ನು ರವಿಯ ಕೈಯಲ್ಲಿಟ್ಟು ಇದು ಇಂಟರ್ನ್ಯಾಷನಲ್ drawing ನಲ್ಲಿ ನನಗೆ ಸಿಕ್ಕಿದ prize. ಇದು ನೀನು ನಿಮ್ಮ ಅಪ್ಪನ ಆಪರೇಷನ್ ಗೆ ಇಟ್ಟುಕೊಳ್ಳಬಹುದು ಎಂದು ಹೇಳಿ ಮನೆಗೆ ಹೋಗಲು ಹಿಂತಿರುಗಿದನು. ಆಗ ರವಿ ಯೋಸೇಫನ ಬಳಿ ಕ್ಷಮಾಪಣೆ ಕೇಳಿದನು. ಅದಕ್ಕೆ ಯೋಸೇಫನು ಯೇಸಪ್ಪಾನೆ ನನಗೆ ಈ ಬಹುಮಾನವನ್ನು ಕೊಟ್ಟರು ಎಂದು ಹೇಳಿ ಹೊರಟುಹೋದನು. ರವಿಯ ಅಪ್ಪನ ಆಪರೇಷನ್ ಒಳ್ಳೆಯ ರೀತಿಯಲ್ಲಿ ನಡೆಯಿತು. ಯಾವುದೇ ಸಮಸ್ಯೆಯೂ ಇಲ್ಲ ಎಂದು ಡಾಕ್ಟರ್ ಹೇಳಿಬಿಟ್ಟರು. ಸಹಾಯ ಮಾಡಿದ್ದರಿಂದ ಯೋಸೇಫನಿಗೆ ಬಂದ ಆಶೀರ್ವಾದ ಏನು ಗೊತ್ತಾ? ಯೋಸೇಫನು ಬರೆದ ಡ್ರಾಯಿಂಗ್ ಎಲ್ಲಾ leaders ಗೆ ತುಂಬಾ ಹಿಡಿಸಿತು. ಆದ್ದರಿಂದ ಡ್ರಾಯಿಂಗ್ Notebook   ಗಳ front page ನಲ್ಲಿ ಹಾಕೋಣ ಎಂದು select ಮಾಡಿದರು. ಯೇಸಪ್ಪ ಯೋಸೇಫನನ್ನು ಆಶೀರ್ವದಿಸಿ ಅವನನ್ನು ಹೆಚ್ಚಿಸಿದರು.

ಏನು ಪುಟಾಣಿಗಳೇ! ಕಥೆ ಚೆನ್ನಾಗಿತ್ತಾ, ನೀವು ಯೋಸೇಫನ ಹಾಗೆ ಯಾರು ನಿಮ್ಮನ್ನು ತಳ್ಳಿದರೂ ನೀವು ಅವರಿಗಾಗಿ ಪ್ರಾರ್ಥಿಸಿ ಅವರಿಗೆ ಕೊರತೆ ಬಂದಾಗ ಅವರಿಗೆ ಸಹಾಯ ಮಾಡಿದರೆ ಯೇಸಪ್ಪ ನಿಮ್ಮನ್ನು ಆಶೀರ್ವದಿಸುತ್ತಾರೆ. ಇನ್ನುಮೇಲೆ ಸಹಾಯ ಮಾಡುತ್ತೀರಾ..
-    Baby. A. ದಿವ್ಯ ಫೀಬಾ

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)