Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 11.03.2025

ಧೈನಂದಿನ ಧ್ಯಾನ(Kannada) – 11.03.2025

 

ಕರುಣೆ

 

"ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು" - ಮತ್ತಾಯ 5:7

 

ಒಬ್ಬ ವಿದ್ಯಾವಂತ ಯುವಕನು ಪೂರ್ಣ ಸಮಯ ಕರ್ತನ ಸೇವೆ ಮಾಡಲು ತನ್ನ ಕೆಲಸಕ್ಕೆ ರಾಜೀನಾಮೆ ಮಾಡಿ ಬಂದರು. ಆರಂಭದಲ್ಲಿ ತುಂಬಾ ಕಷ್ಟಪಟ್ಟರು. ಒಂದು ದಿನ, ತನ್ನಲ್ಲಿದ್ದ ರೂಪಾಯಿಗಳನ್ನು ಎಣಿಸಿ, ಬಸ್ಸಿಗೆ ಹಾಕಿ, ಉಳಿದ ರೂಪಾಯಿಯಿಂದ ಒಂದು ಬನ್ ತೆಗೆದುಕೊಂಡು, ಸೇವೆಗೆ ಹೋದರು. ಬಸ್ಸಿನಿಂದ ಇಳಿದು ಒಂದು ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆ, ಒಬ್ಬ ವೃದ್ಧನು ತನ್ನ ಮನೆಯ ಹೊರಗೆ ಕುಳಿತಿರುವುದನ್ನು ನೋಡಿ ಅವರಿಗೆ ಹಸ್ತಪ್ರತಿಯನ್ನು ಕೊಟ್ಟುಬಿಟ್ಟು, ತುಂಬಾ ದಣಿದಿದ್ದೀರಿ, ನಿಮಗೆ ಹುಷಾರಿಲ್ಲವೇ? ಎಂದು ಕೇಳಿದರು. ಆ ವೃದ್ಧನು ಊಟಮಾಡಿ ಎರಡು ದಿನ ಆಯಿತು ಊಟ ಮಾಡಲು ಏನಾದರೂ ಬೇಕು ಎಂದು ಕೇಳಿದರು. ಆ ಯುವಕ ತಕ್ಷಣ ತನ್ನ ಚೀಲದಿಂದ ಬನ್ ತೆಗೆದು, ಅದನ್ನು ವೃದ್ಧನಿಗೆ ಕೊಟ್ಟುಬಿಟ್ಟು ತಿನ್ನಲು ಹೇಳಿ ಬಸ್ ಪ್ರಯಾಣಕ್ಕಾಗಿ ಇಟ್ಟುಕೊಂಡಿದ್ದ ಹಣದಿಂದ ಬಾಳೆಹಣ್ಣನ್ನೂ ತೆಗೆದುಕೊಟ್ಟು, ನಂತರ ಪ್ರಾರ್ಥಿಸಿ ಹೊರಟುಹೋದರು. ಮುಂದಿನ ಹಳ್ಳಿಗೆ ಸೇವೆಗೆ ಹೋದಾಗ, ಒಂದು ಮನೆಯಲ್ಲಿ ಇವರಿಗೆ ಆಹಾರವನ್ನು ಕೊಟ್ಟು, ಕಾಣಿಕೆಯನ್ನೂ ಕೊಟ್ಟರು.

 

ದಾವೀದನೊಂದಿಗಿನ ಯೋನಾತಾನನ ಸ್ನೇಹವು ಅತ್ಯುತ್ತಮವಾಗಿತ್ತು! ಅವನ ತಂದೆ ಅವನನ್ನು ದ್ವೇಷಿಸುತ್ತಿದ್ದರೂ, ತಿರಸ್ಕರಿಸಿದರೂ, ಕೊಲ್ಲಲು ಪ್ರಯತ್ನಿಸುತ್ತಿದ್ದರೂ ಸಹ, ಅವನು ದಾವೀದನ ಜೊತೆ ಸ್ನೇಹ ಬೆಳೆಸಿಕೊಳ್ಳುತ್ತಾರೆ. ತನ್ನ ತಂದೆಯ ನಂತರ ಸಿಂಹಾಸನಕ್ಕೆ ಏರುವ ಯಾವುದೇ ಅವಕಾಶವಿಲ್ಲ ಎಂದು, ದಾವೀದನು ರಾಜನಾಗಿ ಅಭಿಷೇಕಿಸಲ್ಪಟ್ಟಿದ್ದಾರೆಂದು ತಿಳಿದಿದ್ದರೂ ಸ್ನೇಹಪರನಾಗಿರುತ್ತಾನೆ. ಸೌಲ ಮತ್ತು ಯೋನಾತಾನರು ಯುದ್ಧದಲ್ಲಿ ಸತ್ತರು. ದಾವೀದನು ರಾಜನಾಗಿ ಸಿಂಹಾಸನವನ್ನು ಏರುತ್ತಾರೆ. ಸಿಂಹಾಸನದಲ್ಲಿ ಏರಿದ ಕೂಡಲೇ, ಸೌಲನ ಕುಟುಂಬದಲ್ಲಿ ಯಾರಾದರೂ ಇದ್ದಾರಾ ಎಂದು ಕೇಳುತ್ತಾರೆ. ಯೋನಾತಾನನ ಮಗ ಮೆಫೀಬೋಶೆತನು ಸಿಕ್ಕಿದಾಗ, ದಾವೀದನು ಅವನನ್ನು ಕರೆಸಿ ರಾಜಪುತ್ರನಂತೆ ತನ್ನೊಂದಿಗೆ ವಾಸಿಸುವಂತೆ ಮಾಡುತ್ತಾರೆ. ದೇವರು ಹೇಳುತ್ತಾರೆ, "ಈ ಚಿಕ್ಕವರಲ್ಲಿ ಒಬ್ಬನಿಗೆ ನೀವು ಏನು ಮಾಡಿದಿರೋ, ಅದನ್ನೆಲ್ಲ ನನಗೂ ಮಾಡಿದಿರಿ" ಎಂದು.   

 

ಹೌದು, ಬಾಲ್ಯದಲ್ಲಿ ತಿರಸ್ಕರಿಸಲ್ಪಟ್ಟ ಮತ್ತು ಪ್ರತ್ಯೇಕಿಸಲ್ಪಟ್ಟ ದಾವೀದನನ್ನು ಪ್ರೀತಿಸಿ ಒಗ್ಗಿಕೊಂಡ ಕಾರಣ ಯೋನಾತಾನನ ಮಗನಿಗೆ ಕರುಣೆ ದೊರೆಯಿತು. ಅವನನ್ನು ಅರಮನೆಯಲ್ಲಿ ರಾಜಕುಮಾರನಂತೆ ರಕ್ಷಿಸಿ ಬೆಳೆಸಲಾಗುತ್ತದೆ. ಅವನನ್ನು ಬೆಳೆಸುವ ಸೇವಕನಿಗೂ ದಯೆ ಮತ್ತು ಕರುಣೆ ತೋರಿಸಲಾಗುತ್ತದೆ.         

 

ಪ್ರಿಯರೇ! ಇತರರಿಗೆ ಕರುಣೆ ತೋರದಂತೆ ನಮ್ಮನ್ನು ತಡೆಯುವುದು ನಮ್ಮ ಅಹಂಕಾರ ಮತ್ತು ಅಸೂಯೆ. ಅವುಗಳನ್ನು ದೂರ ತಳ್ಳೋಣ. ಆಗ ನೀವು ಕರುಣೆಯಿಂದ ವರ್ತಿಸಬಹುದು. ದೇವರು ಹೇಳುತ್ತಾರೆ, "ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು" ಎಂದು. ನಾವು ಕರುಣೆಯುಳ್ಳವರಾಗಿದ್ದರೆ, ಧನ್ಯರಾಗಿ ಮಾರ್ಪಡುತ್ತೇವೆ. ಅಷ್ಟೇ ಅಲ್ಲ, ನಮಗೆ ಕರುಣೆಯೂ ಸಿಗುತ್ತದೆ. ದೇವರು ನಾವು ಇತರರ ಕಡೆಗೆ ತೋರಿಸುವ ಕರುಣೆಯನ್ನು ಗಣನೆಗೆ ತೆಗೆದುಕೊಂಡು ಸರಿಯಾದ ಸಮಯದಲ್ಲಿ ನಮಗೆ ಕರುಣೆಯನ್ನು ದಯಪಾಲಿಸುತ್ತಾರೆ. ಆದ್ದರಿಂದ, ನಾವು ಇತರರಿಗೆ ಕರುಣೆ ತೋರಿಸೋಣ ಮತ್ತು ದೇವರಿಂದ ಕರುಣೆಯನ್ನು ಪಡೆಯೋಣ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ನಮ್ಮ ಶಾಲಾ ಸೇವೆಗಳ ಮೂಲಕ ಭೇಟಿಯಾಗುವ ಮಕ್ಕಳ ರಕ್ಷಣೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)