Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 07.03.2025

ಧೈನಂದಿನ ಧ್ಯಾನ(Kannada) – 07.03.2025

 

ಇದೇ ಅವಕಾಶ.

 

"ಕರ್ತನ ನಾಮದಲ್ಲಿ ಬೇಡಿಕೊಳ್ಳುವ ಯಾರಿಗಾದರೂ ರಕ್ಷಣೆ ಯಾಗುವದು" - ರೋಮಾ 10:13

 

ಅಮೆರಿಕದ ಸೇಂಟ್ ಲೂಯಿಸ್ ಎಂಬ ನಗರದ ಒಬ್ಬ ಕ್ರೈಸ್ತನು, ಒಬ್ಬ ವಕೀಲರಿಗೆ ಹಿಂಜರಿಕೆಯಿಂದ ಒಂದು ಪ್ರಶ್ನೆಯನ್ನು ಕೇಳಿದರು. ನಾನು ನಿಮ್ಮ ಬಳಿ ಹಲವು ಬಾರಿ ಕೇಳಬೇಕೆಂದು ಬಯಸಿದ್ದನ್ನು ಈಗ ಕೇಳುತ್ತೇನೆ, "ಅಯ್ಯಾ, ನೀವು ಯಾಕೆ ಕ್ರೈಸ್ತರಾಗಲಿಲ್ಲ?" (ಅಂದರೆ ಯಾಕೆ ರಕ್ಷಣೆ ಹೊಂದಲಿಲ್ಲ?) ಎಂದು ಕೇಳಿಬಿಟ್ಟರು. ಇದನ್ನು ಕೇಳಿದ ವಕೀಲರು, “ಕುಡುಕರು ಪರಲೋಕ ರಾಜ್ಯಕ್ಕೆ ಯೋಗ್ಯರಲ್ಲ ಎಂದು ಸತ್ಯವೇದದಲ್ಲಿ ಬರೆದಿದೆಯಲ್ಲವೇ?” ನನ್ನ ಬಲಹೀನತೆ ನಿಮಗೇ ಗೊತ್ತಲ್ಲಾ" ಎಂದರು. ಇದನ್ನು ಕೇಳಿದ ಕ್ರೈಸ್ತನು, "ಅದು ನನ್ನ ಪ್ರಶ್ನೆಯಲ್ಲ, ನೀವು ಯಾಕೆ ಕ್ರೈಸ್ತನಾಗಿಲ್ಲ ಎಂಬುದು ಅಷ್ಟೇ" ಎಂದನು.

 

"ಈ ಪ್ರಶ್ನೆಯನ್ನು ಇದುವರೆಗೆ ಯಾರೂ ನನ್ನನ್ನು ಕೇಳಿಲ್ಲ" ಎಂದು ವಕೀಲರು ಉತ್ತರಿಸಿದರು. "ಒಬ್ಬರು ಕ್ರೈಸ್ತರಾಗುವುದು ಹೇಗೆ ಎಂದು ಯಾರೂ ನನಗೆ ಹೇಳಿಲ್ಲ" ಎಂದು ಅವರು ಹೇಳಿದರು. ತಕ್ಷಣವೇ, ಆ ಕ್ರೈಸ್ತನು ಬೈಬಲ್ ತೆರೆದು, ಅವರಿಗೆ ಹಲವಾರು ವಚನಗಳನ್ನು ಓದಿ, "ಪ್ರಾರ್ಥನೆ ಮಾಡೋಣ" ಎಂದು ಹೇಳಿದನು. ಇಬ್ಬರೂ ಮಂಡಿಯೂರಿದರು, ಮತ್ತು ವಕೀಲರು ಮೊದಲು, “ಕರ್ತನೇ, ನನ್ನ ಬಲಹೀನತೆ ನಿಮಗೆ ತಿಳಿದಿದೆ; "ಅದನ್ನು ನನ್ನ ಜೀವನದಿಂದ ತೆಗೆದುಹಾಕಿ" ಎಂದು ಪ್ರಾರ್ಥಿಸಿದರು. ಅವರು ಪ್ರಾರ್ಥನೆ ಮುಗಿಸಿ ಎದ್ದಾಗ, ಒಬ್ಬ ರಕ್ಷಿಸಲ್ಪಟ್ಟ ಕ್ರೈಸ್ತನಾಗಿ ಪಾಪ ಕ್ಷಮಾಪಣೆಯ ಶಿಶ್ಚತೆಯನ್ನು ಪಡೆದು ತುಂಬಾ ಸಂತೋಷಪಟ್ಟರು. ಆ ದಿನದಿಂದ ಕುಡಿತವನ್ನು ತೊರೆದು ಪವಿತ್ರ ಜೀವನವನ್ನು ನಡೆಸಲು ಪ್ರಾರಂಭಿಸಿದರು. ಈ ವಕೀಲರು ಯಾರು ಎಂದು ನಿಮಗೆ ಗೊತ್ತಾ? ಇವರೇ ಪ್ರಸಿದ್ಧ ಸ್ಕೋಫೀಲ್ಡ್ ರೆಫರೆನ್ಸ್ ಬೈಬಲ್ ಅನ್ನು ರಚಿಸಿದ ವಿದ್ವಾಂಸ ಸಿ. ಐ. ಸ್ಕೋಫೀಲ್ಡ್.

 

ಪ್ರೀತಿಯ ದೇವರ ಮಕ್ಕಳೇ! ಈಗಲೇ ಅನುಗ್ರಹ ಕಾಲ, ಈಗಲೇ ರಕ್ಷಣೆಯ ದಿನ." 2 ಕೊರಿಂಥ 6:2 ನೇ ವಚನವನ್ನು ನಮ್ಮ ಹೃದಯದಲ್ಲಿ ಯಾವಾಗಲೂ ಇಟ್ಟುಕೊಳ್ಳೋಣ. ನಾವು ತಡಮಾಡದೆ ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸೋಣ. ಒಬ್ಬ ವ್ಯಕ್ತಿಯು ಯಾವುದೇ ಪಾಪಗಳನ್ನು ಮಾಡಿದ್ದರೂ, ಅವರು "ಯೇಸು" ಎಂಬ ಹೆಸರನ್ನು ಕರೆಯುವಾಗ ದೇವರು ಅವರನ್ನು ರಕ್ಷಿಸುತ್ತಾರೆ. ಪಂಡಿತ್ ಸ್ಕೋಫೀಲ್ಡ್ ಸತ್ಯವನ್ನು ಕೇಳಿದ ಕ್ಷಣ, ಇದೇ ಸರಿಯಾದ ಕ್ಷಣ ಎಂದು ಅರಿತುಕೊಂಡರು ಮತ್ತು ತಕ್ಷಣವೇ ದೇವರನ್ನು ಸ್ವೀಕರಿಸಿದರು. ನಾವು ಸಹ ಅವಕಾಶ ಸಿಕ್ಕಾಗಲೆಲ್ಲಾ ಸುವಾರ್ತೆಯನ್ನು ಹಂಚಿಕೊಂಡರೆ, ಅದು ನಾವು ಎದ್ದು ದೇವರಿಗಾಗಿ ಮಹತ್ಕಾರ್ಯಗಳನ್ನು ಮಾಡಲು ಸಹಾಯ ಮಾಡುತ್ತದೆ. "ಯೇಸುವಿನ ಕುರಿತು ಕೇಳಲ್ಪಡದವರು ಹೇಗೆ ನಂಬುತ್ತಾರೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? (ರೋಮಾ 10:14)

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಡೇ ಕೇರ್ ಸೆಂಟರ್‌ನಲ್ಲಿರುವ ಮಕ್ಕಳನ್ನು ಬೆಂಬಲಿಸುವ ಕುಟುಂಬಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)