ಧೈನಂದಿನ ಧ್ಯಾನ(Kannada) – 09.03.2025
ಧೈನಂದಿನ ಧ್ಯಾನ(Kannada) – 09.03.2025
ತಂದೆಯ ಪ್ರೀತಿಯನ್ನು ಅರ್ಥಮಾಡಿಕೊಂಡ ಮಗ
"...ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು" - ಯೆಶಾಯ 63:9
Hello ಪುಟಾಣಿಗಳೇ! ಮಳೆಗಾಲ ಮುಗಿದು ಬಿಸಿಲಿನ ಕಾಲ ಬಂದಿದೆ. ಈಗ ಸೂರ್ಯ ಉರಿಯುತ್ತಿದ್ದಾನೆ. ಹಾಗಾಗಿ, ನೀವು ಸಾಕಷ್ಟು ನೀರು ಕುಡಿಯಬೇಕು ಮತ್ತು ಬಿಸಿಲಿನಲ್ಲಿ ಸುತ್ತಬಾರದು o.k ನಾ. ಹೌದು, ಪುಟಾಣಿಗಳೇ! ನೀವು ಹೆಂಚಿನ ಮನೆ, ಅಪಾರ್ಟ್‌ಮೆಂಟ್ ಕಟ್ಟಡಗಳು ಮತ್ತು ಗುಡಿಸಲುಗಳನ್ನು ನೋಡಿರುತ್ತೀರ. ನೀವು ಎಂದಾದರೂ ಮಣ್ಣಿನ ಛಾವಣಿಯ ಮನೆಯನ್ನು ನೋಡಿದ್ದೀರಾ? ದಿನೇಶ್ ಎಂಬ ಪುಟ್ಟ ತಮ್ಮ ತನ್ನ ತಂದೆ, ತಾಯಿ, ಅಜ್ಜ ಮತ್ತು ಅಜ್ಜಿಯೊಂದಿಗೆ ಹುಲ್ಲಿನ ಮನೆಯಲ್ಲಿ ಸಂತೋಷದಿಂದ ವಾಸಿಸುತ್ತಿದ್ದರು. ಒಂದು ದಿನ, ದಿನೇಶನ ತಂದೆ ಮನೆಯ ಛಾವಣಿ ಮತ್ತು ಹೆಂಚುಗಳನ್ನು ಬದಲಾಯಿಸಲು ಕೆಲಸಕ್ಕೆ ಜನರನ್ನು ಕರೆತಂದು ಅವರೊಂದಿಗೆ ಹೆಂಚುಗಳನ್ನು ಜೋಡಿಸುತ್ತಿದ್ದರು. ಅವನ ಅಜ್ಜ ಇದನ್ನು ನೋಡುತ್ತಿದ್ದರು. ತನ್ನ ಮಗ ಕೆಲಸಗಾರರ ಜೊತೆ ಕೆಲಸ ಮಾಡುವುದನ್ನು ನೋಡುವುದು ಸಂತೋಷವಾಗಿದ್ದರೂ, ಸುಡುವ ಬಿಸಿಲಿನಲ್ಲಿ ನಿಲ್ಲುವುದು ಅವರಿಗೆ ಕಷ್ಟಕರವಾಗಿತ್ತು. ನಂತರ ಮಗನನ್ನು ಕರೆದು "ಮಗನೇ ಸ್ವಲ್ಪ ಮಜ್ಜಿಗೆ ಕುಡಿದುಕೊಂಡು ಹೋಗಿ ಕೆಲಸ ಮಾಡಬಹುದಲ್ಲಾ" ಎಂದರು. ಮಗ ಕೇಳಲಿಲ್ಲ. ಸುಡುವ ಬಿಸಿಲಿನಲ್ಲಿ ಇನ್ನೂ ನಿಂತಿರುವುದನ್ನು ಕಂಡು ಸಹಿಸಲು ಸಾಧ್ಯವಾಗದ ತಂದೆ, ತನ್ನ ಮಗನಿಗೆ ಪುನಃ, ಕೆಳಗೆ ಬಂದು ವಿಶ್ರಾಂತಿ ಪಡೆದು ನಂತರ ಕೆಲಸ ಮಾಡಲು ಹೇಳಿದರು. ಆದರೆ ಮಗ ಇಂದೇ ಕೆಲಸವನ್ನು ಮುಗಿಸಿಬಿಡಬೇಕೆಂಬ ಯೋಚನೆಯಲ್ಲಿ ತೀವ್ರವಾಗಿ ಕೆಲಸ ಮಾಡುತ್ತಿದ್ದರು. ಆದರೆ ತಂದೆ ಮಗನನ್ನು ಕೆಳಗಿಳಿಸಲು ಒಂದು ಕಾರ್ಯವನ್ನು ಮಾಡಿದರು. ನೆರಳಿನಲ್ಲಿ ನಿಂತಿದ್ದ ತನ್ನ ಮೊಮ್ಮಗನನ್ನು ಕರೆದುಕೊಂಡು ಹೋಗಿ ಬಿಸಿಲಿನಲ್ಲಿ ನಿಲ್ಲಿಸಿದರು. ಆ ಹುಡುಗನಿಗೆ ಬಿಸಿಲಿನ ತಾಪ ತಾಳಲಾರದೆ ಅಳಲು ಶುರುಮಾಡಿದನು. ಇದನ್ನು ನೋಡಿದ ಮಗ ಬೇಗನೆ ಕೆಳಗಿಳಿದು, ಮಗನನ್ನು ಎತ್ತಿಕೊಂಡು ಮನೆಯೊಳಗೆ ಹೋದನು. ಕೋಪದಿಂದ ತನ್ನ ತಂದೆಗೆ ಹೀಗೆ ಏಕೆ ಮಾಡಿದಿರಿ. ನಿಮಗೆ ಕರುಣೆಯೇ ಇಲ್ಲವೇ ಎಂದು ಬೈದನು. ತಕ್ಷಣ ತಂದೆ, "ನೀನು ನಿನ್ನ ಮಗನ ನೋವನ್ನು ಸಹಿಸಲಾರದೆ ಹೀಗೆ ಕಷ್ಟಪಡುತ್ತಿದ್ದೀಯಲ್ಲಾ. ನೀನು ಬಿಸಿಲಿನಲ್ಲಿ ಬಳಲುತ್ತಿರುವುದನ್ನು ನೋಡಿದಾಗ ನನಗೂ ಹಾಗೆಯೇ ಅನಿಸುತ್ತದೆ" ಎಂದರು. ಒಬ್ಬ ತಂದೆಯ ಮನಸ್ಥಿತಿಯನ್ನು ತಿಳಿಸುವುದಕ್ಕಾಗಿಯೇ ನಾನು ಇದನ್ನು ಮಾಡಿದೆ. ಇಲ್ಲದಿದ್ದರೆ, ಯಾವ ಅಜ್ಜನಾದರೂ ತನ್ನ ಮೊಮ್ಮಗ ಕಷ್ಟಪಡಬೇಕೆಂದು ಬಯಸುತ್ತಾರೆಯೇ ಎಂದರು. ಮಗನೂ ಸಹ ತಂದೆಯ ಪ್ರೀತಿಯನ್ನು ಅರ್ಥಮಾಡಿಕೊಂಡನು.
ತಮ್ಮ ತಂಗಿ! ಇದೇ ರೀತಿ, ಈ ಲೋಕದಲ್ಲಿ ನಾವು ಎದುರಿಸುತ್ತಿರುವ ಯಾತನೆ ಮತ್ತು ಕಷ್ಟಗಳನ್ನು ತೆಗೆದುಹಾಕಿ ನಮಗೆ ವಿಶ್ರಾಂತಿ ನೀಡಲು ಯೇಸು ಬಯಸುತ್ತಿದ್ದಾರೆ. ಆತನು ನಮ್ಮ ಎಲ್ಲಾ ತೊಂದರೆಗಳು, ಚಿಂತೆಗಳು ಮತ್ತು ಹೊರೆಗಳನ್ನು ಹೊತ್ತಿದ್ದಾರೆ. ಅವರಿಗೆ ನಮ್ಮ ಮೇಲೆ ತುಂಬಾ ಪ್ರೀತಿ ಇದೆ. ಆ ಪ್ರೀತಿಯ ಯೇಸಪ್ಪನಿಗೆ ನೀವು ಏನು ಮಾಡಲಿದ್ದೀರಿ?
- Mrs. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482