Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 08.03.2025

ಧೈನಂದಿನ ಧ್ಯಾನ(Kannada) – 08.03.2025

 

ನನ್ನ ಪ್ರಿಯಳೇ! ನೀನು ಎಷ್ಟು ಚೆಲುವೆ 

 

“ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ನಿನ್ನ ನೇತ್ರಗಳು ಪಾರಿವಾಳಗಳಂತಿವೆ." - ಪರಮ ಗೀತೆ 1:15

 

ಕ್ರಿಸ್ತನಲ್ಲಿ ಪ್ರಿಯರಾದ ಸಹೋದರಿಯರೇ! ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ನಿಮ್ಮ ಜೀವನದಲ್ಲಿ ದೇವರು ಎಲ್ಲಾ ಆಶೀರ್ವಾದಗಳು ಮತ್ತು ಸಮೃದ್ಧಿಯನ್ನು ನಿಮಗೆ ನೀಡಲಿ. ಪರಮ ಗೀತೆ 2:14 “ಬಂಡೆಯ ಬಿರುಕುಗಳಲ್ಲಿಯೂ ಜರಿಯ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ! ನಿನ್ನ ರೂಪು ನನಗೆ ಕಾಣಿಸು, ನಿನ್ನ ದನಿ ಕೇಳಿಸು; ನಿನ್ನ ದನಿ ಎಷ್ಟೋ ಇಂಪು, ನಿನ್ನ ರೂಪು ಎಷ್ಟೋ ಅಂದ" ಎಂದರು.

 

ಪ್ರಿಯ ದೇವರ ಮಗುವೇ, ಇಂದು ಕರ್ತನು ನಿನ್ನ ಬಗ್ಗೆ ಹೀಗೆ ಹೇಳುತ್ತಾರೆ. ಆತನು ನಮ್ಮನ್ನು ಪಾರಿವಾಳಗಳಂತೆ ನೋಡುತ್ತಾರೆ. ಪಾರಿವಾಳಗಳು ಎತ್ತರದ ಸ್ಥಳಗಳಲ್ಲಿ ಮತ್ತು ನೀರಿನ ಮೂಲಗಳಿರುವ ಸ್ಥಳಗಳಲ್ಲಿ ವಿಹರಿಸುತ್ತವೆ. ನಮ್ಮ ವಾಸಸ್ಥಾನವು ಪರಲೋಕದಲ್ಲಿದೆ ಎಂದು ನಾವು ಅರಿತುಕೊಳ್ಳಬೇಕೆಂದು ಮತ್ತು ಯಾವಾಗಲೂ ಜೀವಜಲವಾದ ಯೇಸುವಿನ ಸಾನ್ನಿಧ್ಯದಲ್ಲಿ ಇರಬೇಕೆಂದು ಕರ್ತನು ನಿರೀಕ್ಷಿಸುತ್ತಾರೆ. ಲೋಕದ ದೃಷ್ಟಿಯಲ್ಲಿಯೂ ಸಹ, ದೇವರು ನಮ್ಮನ್ನು ಉನ್ನತ ಸ್ಥಾನದಲ್ಲಿರಿಸುತ್ತಾರೆ. ಆತನು ನಮ್ಮನ್ನು ಹೇಗಾದರೂ ಪ್ರೀತಿಗೆ ಅರ್ಹರೆಂದು ನೋಡುತ್ತಾರೆ. “ನನ್ನ ಪ್ರಿಯಳೇ! ನೀನು ಸೌಂದರ್ಯದಲ್ಲಿ ಪರಿಪೂರ್ಣಳು; "ನಿನ್ನಲ್ಲಿ ಯಾವುದೂ ಕಡಿಮೆಯಿಲ್ಲ." ಎಂದು ಹೇಳುತ್ತಾರೆ. ಲೋಕದಲ್ಲಿ ನಮ್ಮನ್ನು ಟೀಕಿಸುವವರು ಅನೇಕರಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಟೀಕಿಸುತ್ತಾರೆ. ಮಕ್ಕಳು ತಮ್ಮ ಹೆತ್ತವರನ್ನು ದೂಷಿಸುತ್ತಾರೆ. ಒಡಹುಟ್ಟಿದವರು ಮತ್ತು ಸ್ನೇಹಿತರಲ್ಲಿಯೂ ಸಹ, ಜನರು ಪರಸ್ಪರರ ನ್ಯೂನತೆಗಳನ್ನು ಪರಿಗಣಿಸಿ ಕರ್ತವ್ಯದಿಂದ ವಿಷಾದದಿಂದ ಮಾತನಾಡುವ ಪರಿಸ್ಥಿತಿ ಇದೆ. ತಪ್ಪು ದೃಷ್ಟಿಕೋನದಿಂದ ನಮ್ಮನ್ನು ಟೀಕಿಸುವ ಸಂಬಂಧಿಕರೂ ಇದ್ದಾರೆ. ಆದರೆ ಕರ್ತನು ನಮ್ಮನ್ನು ನಿರ್ದೋಷಿಗಳಾಗಿ ನೋಡುತ್ತಾರೆ. ಏಕೆಂದರೆ ಆತನು ತನ್ನ ಮದಲಗಿತ್ತಿಯಾದ ನಮಗಾಗಿ ತನ್ನನ್ನು ತಾನೇ ನಿರ್ಮಲ ಯಜ್ಞವಾಗಿ ಅರ್ಪಿಸಿಕೊಂಡನು. ಲೋಕವು ನಮ್ಮನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ನೀವು ನಿಮ್ಮನ್ನು ಕೀಳಾಗಿ ಭಾವಿಸುತ್ತಿದ್ದೀರಾ? ಬೇಡ, ಸಹೋದರಿ. ನೀವು ಕರ್ತನ ದೃಷ್ಟಿಯಲ್ಲಿ ಅಮೂಲ್ಯರೂ, ಸುಂದರರೂ, ಏನೂ ಕಡಿಮೆಯಿಲ್ಲದವರೂ ಆಗಿದ್ದೀರಿ. ನೀವು ಯಾವಾಗ ಬೇಕಾದರೂ ಕರ್ತನ ಸೇವೆಯನ್ನು ಮಾಡಬಹುದು ಮತ್ತು ಯಾವುದೇ ವಯಸ್ಸಿನಲ್ಲಿಯೂ ಪ್ರಕಾಶಿಸಬಹುದು. ನಾಮಾನನ ಪುಟ್ಟ ಸೇವಕಿಯಿಂದ ಹಿಡಿದು ಯೌವನಸ್ದ ಹುಡುಗಿಯಾದ ಮರಿಯಳವರೆಗೆ, ವಯಸ್ಸಿನಲ್ಲಿ ದೊಡ್ಡವರಾದ ಮೋಶೆಯ ಸಹೋದರಿಯಾದ ಮಿರಿಯಾಮಳ ವರೆಗೆ ಅನೇಕ ಜನರು ಎದ್ದು ಕರ್ತನಿಗಾಗಿ ಪ್ರಕಾಶಿಸಿದ್ದಾರೆ. ದೇವರಿಗೆ ವಯಸ್ಸು ಅಡ್ಡಿಯಲ್ಲ. ಜೀವನದ ಸಂದರ್ಭಗಳು ದೇವರ ಸೇವೆ ಮಾಡಲು ಅಡ್ಡಿಯಲ್ಲ. ಹೊಸ ಉತ್ಸಾಹದಿಂದ ತನ್ನ ಸೇವೆಯನ್ನು ಮಾಡಲು ದೇವರು ನಿಮ್ಮನ್ನು ಕರೆಯುತ್ತಿದ್ದಾರೆ. ಅವರು ನಿಮಗಾಗಿ ಕಾಯುತ್ತಿದ್ದಾರೆ.  

- Rev. ಎಲಿಜಬೆತ್

 

ಪ್ರಾರ್ಥನಾ ಅಂಶ:

1000 ಮಿಷನರಿಗಳನ್ನು ಬೆಂಬಲಿಸುವ 1000 ಮನೆ ಪ್ರಾರ್ಥನಾ ಗುಂಪುಗಳು ಎದ್ದೇಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)