Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 10.03.2025

ಧೈನಂದಿನ ಧ್ಯಾನ(Kannada) – 10.03.2025

 

ಏನು ಹೊತ್ತುಕೊಂಡು ಹೋಗುತ್ತೇವೆ?

 

"ಆದರೆ ಪರಲೋಕದಲ್ಲಿ ಗಂಟು ಮಾಡಿ ಇಟ್ಟುಕೊಳ್ಳಿರಿ;…" - ಮತ್ತಾಯ 6:20

 

ಒಬ್ಬ ಕೋಟ್ಯಾಧಿಪತಿ ಇದ್ದರು. ತನ್ನ ಬಳಿ ಎಷ್ಟು ಕೋಟಿ ರೂಪಾಯಿಗಳಿವೆ ಎಂದು ತೋರಿಸಲು ತನ್ನ ಮನೆಯ ಮೇಲೆ ಅಷ್ಟು ಕೋಟಿಗಳನ್ನೂ ಕಟ್ಟಿಹಾಕಿದರು. ಇನ್ನೂ ಇನ್ನೂ ಹೆಚ್ಚು ಹಣ ಸಂಪಾದಿಸಬೇಕೆಂಬ ಆಸೆ ಅವರನ್ನು ಬಿಡಲಿಲ್ಲ. ಆಸ್ತಿ, ಹಣ ಮತ್ತು ಚಿನ್ನವನ್ನು ಸೇರಿಸುತ್ತಲೇ ಇದ್ದರು. ಒಂದು ದಿನ, ಸೇವಕರೊಬ್ಬರು ಅವರನ್ನು ಭೇಟಿಯಾಗಲು ಹೋದರು. ಬಂದ ಸೇವಕರು ಆ ಶ್ರೀಮಂತನಿಗೆ ಒಂದು ಗುಂಡುಪಿನ್ನನ್ನು ಕೊಟ್ಟು, "ಅಯ್ಯಾ, ಇದನ್ನು ಭದ್ರವಾಗಿ ಇಟ್ಟುಕೊಳ್ಳಿರಿ" "ಪರಲೋಕವು ಬರುವಾಗ, ನಾನು ಅಲ್ಲಿಗೆ ಬಂದು ನಿಮ್ಮಿಂದ ಅದನ್ನು ತೆಗೆದುಕೊಳ್ಳುತ್ತೇನೆ" ಎಂದು ಹೇಳಿ ಹೊರಟುಹೋದರು. ಶ್ರೀಮಂತನು ಇದರ ಅರ್ಥವು ಗೊತ್ತಾಗದೆ ಯೋಚಿಸುತ್ತಿರುವಾಗ, ಅವರ ಹೆಂಡತಿ ಇದರ ಅರ್ಥವನ್ನು ಹೇಳಿದರಂತೆ, "ನೀವು ಎಷ್ಟೇ ಕೋಟಿ ಕೋಟಿ ಸಂಪಾದಿಸಿದರೂ ಮಹಡಿ ಮೇಲೆ ಮಹಡಿಗಳನ್ನು ನಿರ್ಮಿಸಿದರೂ, ಭೂಮಿಯಿಂದ ಹೋಗುವಾಗ, ಎಲ್ಲವನ್ನೂ ಬಿಟ್ಟು ಬಿಟ್ಟೇ ಹೋಗಬೇಕು. ನೀವು ಒಂದು ಗುಂಡುಪಿನ್ನನ್ನು ಸಹ ಪರಲೋಕಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿಯೇ ಈ ಸೇವಕರು ಹೀಗೆ ಮಾಡಿದ್ದಾರೆ" ಎಂದರು. ಎಷ್ಟು ಅರ್ಥಪೂರ್ಣವಾದ ಮಾತುಗಳು. ಹಾಗಾದರೆ ಸಂಪಾದಿಸುವುದು ಮತ್ತು ಉಳಿಸುವುದು ತಪ್ಪೇ? ಎಂಬ ಪ್ರಶ್ನೆ ಉದ್ಭವಿಸಬಹುದು. ತಪ್ಪಲ್ಲ! ಆದರೆ ಯಾವುದು ಮುಖ್ಯ? ಸಂಪಾದಿಸುವುದರಲ್ಲಿ, ಉಳಿಸುವುದರಲ್ಲೇ ಸಮಯವನ್ನು ಕಳೆದು ಬಿಟ್ಟು, ನಿತ್ಯತ್ವವನ್ನು ಕುರಿತು ಮರೆತುಬಿಡುವುದರಲ್ಲಿ ಅರ್ಥವೇ ಇಲ್ಲವಲ್ಲಾ. 

  

ಯೇಸು ಕ್ರಿಸ್ತನು ಹೇಳಿದ ಸಾಮ್ಯದಲ್ಲಿ, ಈ ಕೆಳಗಿನ ಘಟನೆ ಸ್ಥಾನ ಪಡೆದಿದೆ. ಒಬ್ಬ ಶ್ರೀಮಂತನ ಜಮೀನು ಚೆನ್ನಾಗಿ ಬೆಳೆಯಿತು. ಹಾಗಾದರೆ ನಾನು ಏನು ಮಾಡಲಿ? ಅದನ್ನು ಸಂಗ್ರಹಿಸಲು ಸ್ಥಳವಿಲ್ಲ. ನಾನು ಒಂದು ವಿಷಯ ಮಾಡುತ್ತೇನೆ: ನನ್ನ ಕಣಜಗಳನ್ನು ಕೆಡವಿ ದೊಡ್ಡವುಗಳನ್ನು ಕಟ್ಟುತ್ತೇನೆ; ಅಲ್ಲಿ ನನ್ನ ಧಾನ್ಯವನ್ನೂ ನನ್ನ ಸರಕುಗಳನ್ನೂ ಸಂಗ್ರಹಿಸುತ್ತೇನೆ; ಆಗ ನನ್ನ ಪ್ರಾಣವೇ, ಅನೇಕ ವರ್ಷಗಳವರೆಗೆ ನಿನಗಾಗಿ ಹೇರಳವಾದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ನೀನು ನಿಶ್ಚಿಂತವಾಗಿರು, ಊಟಮಾಡು, ಕುಡಿ, ಮತ್ತು ಆನಂದಿಸು ಎಂದು ನನ್ನ ಆತ್ಮದೊಂದಿಗೆ ಹೇಳುತ್ತೇನೆ ಎಂದು ಯೋಚಿಸಿದನು. ಆದರೆ ದೇವರು ಅವನಿಗೆ, "ಮೂರ್ಖನೇ, ಈ ರಾತ್ರಿ ನಿನ್ನ ಪ್ರಾಣವನ್ನು ನಿನ್ನಿಂದ ತೆಗೆಯಲ್ಪಡುವುದು. ಆಗ ನೀವು ಸಂಗ್ರಹಿಸಿದವುಗಳು ಯಾರದಾಗುವುದು ಎಂದರು.

 

ಪ್ರಿಯರೇ! ನಾವು ಭೂಮಿಯ ಮೇಲೆ ನಮಗಾಗಿ ಸಂಪತ್ತನ್ನು ಸಂಗ್ರಹಿಸಿಕೊಳ್ಳುವುದು ಬೇಡ. ಇಲ್ಲಿ ಅನೇಕ ಕೀಟಗಳು, ತುಕ್ಕು ಮತ್ತು ಕಳ್ಳರು ಹೆಚ್ಚು. ಆದರೆ ನಾವು ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡುವಾಗ, ದೇವರು ಸ್ವತಃ ನಮ್ಮನ್ನು ಪರಲೋಕದ ನಿಧಿಯಿಂದ ತುಂಬಿಸಿ ಬಿಡುತ್ತಾರೆ.

- Mrs. ಸುಧಾ ದೇವಭಾಸ್ಕರ್

 

ಪ್ರಾರ್ಥನಾ ಅಂಶ:

ಪ್ರತಿಯೊಂದು ಜಿಲ್ಲೆಯಲ್ಲಿ 300 ಗಿದ್ಯೋನ್ ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)