Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 10.02.2025

ಧೈನಂದಿನ ಧ್ಯಾನ(Kannada) – 10.02.2025

 

ಲೆವಿಯಾತಾನ್

 

"...ಕರ್ತನು, ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನು ವಕ್ರತೆಯ ಸರ್ಪವಾದ ಲೆವಿಯಾ ತಾನವನ್ನೂ... ಕೊಂದುಹಾಕುವನು." - ಯೆಶಾಯ 27:1 

  

ಪ್ರಿಯರೇ, ಇಂದು ನಾವು 'ಲೆವಿಯಾತಾನ್' ಎಂಬ ವಕ್ರ ಸರ್ಪವನ್ನು ನೋಡೋಣ. ಸತ್ಯವೇದವು ಇದೊಂದು ಘಟಸರ್ಪ ಎಂದು ಹೇಳುತ್ತದೆ. ಇದರ ಬಗ್ಗೆ ಯೋಬ 41 ನೇ ಅಧ್ಯಾಯ ಪೂರ್ತಿಯಾಗಿ ಓದಬಹುದು. ಓದುತ್ತಾ ಓದುತ್ತಾ, "ಹೆಮ್ಮೆ" ಯ ಸಂಪೂರ್ಣ ರೂಪವಾಗಿರುವ ಒಂದು ಬಲಿಷ್ಠನನ್ನು ನೋಡುತ್ತೇವೆ. ಈ ಲೆವಿಯಾತಾನ್‌ನಲ್ಲಿ ಯಾವ ದುಷ್ಟ ಗುಣಗಳು ಅಡಗಿವೆ ಎಂದು ನಿಮಗೆ ಗೊತ್ತಾ? 1.ಹೆಮ್ಮೆ 2.ಗರ್ವ 3.ಅಹಂಕಾರ 4.ದುರಹಂಕಾರ 5.ಆತ್ಮವಿಶ್ವಾಸ 6. ಆತ್ಮಗೌರವ 7.ನಂಬಿದವರನ್ನು ವಂಚಿಸುವುದು ಮತ್ತು ದಾರಿ ತಪ್ಪಿಸುವುದು 8. ಕೆಳಗೆ ತಳ್ಳುವುದು 9. ಇತರರನ್ನು ಸುಡುವ ಬೆಂಕಿಯಾಗಿರುವ ನಾಲಿಗೆ. 10. ಬಾಗದ ಕುತ್ತಿಗೆ 11. ಬಲಿಷ್ಠ ಜನರನ್ನು ಸಹ ಭಯದಿಂದ ನಡುಗುವಂತೆ ಮಾಡುವುದು 12. ತಿರಸ್ಕಾರ ಹೀನವಾಗಿ ಯೋಚಿಸುವುದು... ಇನ್ನೂ ಅನೇಕ.....

     

ಬಾಬಿಲೋನ್ ಸಾಮ್ರಾಜ್ಯದ ಲೋಕಪ್ರಸಿದ್ಧ ಅರಸನಾದ "ನೆಬೂಕದ್ನೆಚ್ಚರ್" ಕೂಡ ತುಂಬಾ ಹೆಮ್ಮೆಪಡುತ್ತಿದ್ದರು. ಕನಸಿನಲ್ಲಿ ದೇವರು ತನ್ನನ್ನು ಎಚ್ಚರಿಸಿದ ನಂತರವೂ, ಅವರು ತನ್ನನ್ನು ತಗ್ಗಿಸಿಕೊಳ್ಳಲಿಲ್ಲ ಮತ್ತು ದುರಹಂಕಾರದಿಂದ ಮಾತನಾಡಿದ್ದರಿಂದ, ಮನುಷ್ಯರೊಂದಿಗೆ ವಾಸಿಸಲು ಸಾಧ್ಯವಾಗದ ಹಾಗೆ ಪ್ರಾಣಿಗಳಂತೆ ಬದುಕುವ ಹಾಗೆ ಅವರ ರೂಪವನ್ನೇ ಬದಲಾಯಿಸಲಾಯಿತು. ಅವರ ಕೂದಲು ಹದ್ದಿನ ಗರಿಗಳಂತೆಯೂ ಅವರ ಉಗುರುಗಳು ಪಕ್ಷಿಗಳ ಉಗುರುಗಳಂತೆಯೂ ಆಯಿತು. ಅವರು ಎತ್ತಿನಂತೆ ಹುಲ್ಲು ಮೇಯುತ್ತಿದ್ದರು. ಅವರ ಇಡೀ ದೇಹವು ಇಬ್ಬನಿಯಿಂದ ಒದ್ದೆಯಾಗುವಂತೆ ನೆಲದ ಮೇಲೆ ಬಿದ್ದಿದ್ದರು. ಈ ಘಟನೆಯನ್ನು ದಾನಿಯೇಲ 4ನೇ ಅಧ್ಯಾಯದಲ್ಲಿ ಓದಬಹುದು. ಇದೇ ರೀತಿ, 'ತೂರ್' ದೇಶವನ್ನು ಆಳಿದ ರಾಜನಲ್ಲಿ ಬಹು ದೊಡ್ಡ 'ಗರ್ವ' ಕಂಡುಬಂತು. ನಾವು ಇವರ ಬಗ್ಗೆ ಯೆಹೆಜ್ಕೇಲ 28: 1-19 ರವರೆಗೂ ಓದಬಹುದು.

 

ಪ್ರಿಯರೇ! "ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ" ಹೆಮ್ಮೆಪಡುವ ಪ್ರತಿಯೊಬ್ಬನೂ ದೇವರಿಗೆ ಅಸಹ್ಯನು, "ನಾಶಕ್ಕೆ ಮೊದಲು ಮನುಷ್ಯನ ಹೃದಯವು ಅಹಂಕಾರಿಯಾಗಿರುತ್ತದೆ" ಅಹಂಕಾರಿಗಳನ್ನು ವಿರೋಧಿಸುವ ದೇವರು ತಾಳ್ಮೆಯುಳ್ಳವರನ್ನು ಕಂಡರೆ, ಅವರ ಮೇಲೆ ಕೃಪೆಯನ್ನು ಸುರಿಸುತ್ತಾರೆ. "ಉನ್ನತಿಗೆ ಬರುವ ಮೊದಲು ತಾಳ್ಮೆ" ಎಂದೂ "ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ಆತನು ನಿಮ್ಮನ್ನು ಹೆಚ್ಚಿಸುತ್ತಾರೆ" ಎಂದೂ ಸತ್ಯವೇದವು ಹೇಳುವ ಕಾರ್ಯಗಳನ್ನು ಗಮನಿಸಿ ನಮ್ಮ ಜೀವನದಿಂದ ಅಹಂಕಾರವನ್ನು ತೆಗೆದುಹಾಕೋಣ!

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಸ್ವಸ್ಥತೆಯ ಆರಾಧನೆಯಲ್ಲಿ ಭಾಗವಹಿಸುವವರು ಸಂಪೂರ್ಣ ಗುಣಮುಖರಾಗಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)