Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 08.02.2025

ಧೈನಂದಿನ ಧ್ಯಾನ(Kannada) – 08.02.2025

 

ಉಷ್ಟ್ರಪಕ್ಷಿ

 

"ದೇವರು ಅದಕ್ಕೆ ಜ್ಞಾನ ತಪ್ಪಿಸಿದ್ದಾನೆ. ಗ್ರಹಿಕೆಯನ್ನು ಅದಕ್ಕೆ ಕೊಡಲಿಲ್ಲ" - ಯೋಬ 39:17

 

ಆಫ್ರಿಕನ್ ಖಂಡ, ಅರೇಬಿಯನ್ ದೇಶಗಳು ಮತ್ತು ಸಿರಿಯಾದ ಆಗ್ನೇಯ ಮರುಭೂಮಿಗಳಲ್ಲಿ ಬೆಂಕಿ ಕೋಳಿಗಳು ಎಂದು ಕರೆಯಲ್ಪಡುವ ಈ ಉಷ್ಟ್ರಪಕ್ಷಿಗಳು ಹೆಚ್ಚಾಗಿ ಕಂಡುಬರುತ್ತವೆ. 2.5 ಮೀಟರ್ ಎತ್ತರಕ್ಕೆ ಬೆಳೆಯುವ ವಿಶ್ವದ ಅತಿ ಎತ್ತರದ ಹಕ್ಕಿ. ಅವುಗಳ ರೆಕ್ಕೆಗಳ ಅಗಲ ಆರು ಅಡಿ! ಅದರ ಕಾಲುಗಳು ತುಂಬಾ ಬಲಿಷ್ಠವಾಗಿವೆ. ಇದು ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಓಡಬಲ್ಲದು. ಅದರ ಕಾಲುಗಳು ಒಂದೇ ಒದೆತದಿಂದ ಮನುಷ್ಯನನ್ನು ಕೊಲ್ಲುವಷ್ಟು ಬಲವಾಗಿರುತ್ತವೆ. ಅವುಗಳ ಕಣ್ಣುರೆಪ್ಪೆಗಳು ತುಂಬಾ ದೃಢವಾಗಿರುತ್ತವೆ. ಹೇಗೆಂದರೆ ತನ್ನ ಶತ್ರುಗಳು ಇವುಗಳನ್ನು ನೋಡಿದಾಗ ತನ್ನ ತಲೆಯನ್ನು ಮಣ್ಣಿನೊಳಗೆ ಹೂತುಹಾಕಿಕೊಳ್ಳುವಷ್ಟು. ಇದರ ದೇಹವು ಹೊರಗೆ ಕಾಣಿಸುತ್ತದಂತೆ. ಬೇಟೆಗಾರರು ಇವುಗಳನ್ನು ಸುಲಭವಾಗಿ ಬೇಟೆಯಾಡಿಬಿಡುತ್ತಾರಂತೆ. ಏಕೆಂದರೆ ಅವುಗಳ ಮೆದುಳು ತುಂಬಾ ಚಿಕ್ಕದಾಗಿದೆ. ದೇವರು ಜ್ಞಾನವನ್ನು ತೆಗೆದುಹಾಕಿರುತ್ತಾನೆಂದು ಸತ್ಯವೇದವು ಸಹ ಹೇಳುತ್ತದೆ. ಅದು ಮರಳನ್ನು ಕಲಕಿ ಮೊಟ್ಟೆಗಳನ್ನು ಇಡುತ್ತದೆ. ಇವು ನೆಲದ ಮೇಲೆ ಮೊಟ್ಟೆಗಳನ್ನು ಇಡುವುದರಿಂದ, ಕಾಡು ಪ್ರಾಣಿಗಳಿಂದ ತುಳಿಯಲ್ಪಟ್ಟು ಒಡೆದುಹೋಗಿ ಹಾನಿಗೊಳಗಾಗುತ್ತವೆ. ಇದರ ಮರಿಗಳನ್ನು ಯಾರಾದರೂ ಕೊಂದರೂ ಅಥವಾ ಅದು ಸತ್ತು ಹೋದರೂ, ಅದು ಕಂಡುಕೊಳ್ಳುವುದೇ ಇಲ್ಲ. ಇಂತಹ ವಿಶಿಷ್ಟ ಲಕ್ಷಣವನ್ನು ಹೊಂದಿರುವ ಬೆಂಕಿ ಕೋಳಿಗಳ ಮೂಲಕ ದೇವರು ನಮಗೆ ಏನು ಹೇಳುತ್ತಿದ್ದಾರೆ?

 

ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು? ಹೆಚ್ಚಿನ ಸಮಯ ಜನರು ಹಣ ಸಂಪಾದಿಸಲು ಮತ್ತು ತಮ್ಮ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ತುಂಬಾ ಕಷ್ಟಪಡುತ್ತಿದ್ದಾರೆ. ಆದರೆ ದೇವರು ಕೊಟ್ಟಿರುವ ಕುಟುಂಬವನ್ನು ಗಮನಿಸುವುದಿಲ್ಲ, ಅವರಿಗೆ ಸಮಯ ಕೊಡುವುದಿಲ್ಲ, ದೇವರು ಕೊಟ್ಟಿರುವ ಸಂಬಂಧಗಳನ್ನು ವಿಚಾರಿಸುವುದಿಲ್ಲ ಇನ್ನೂ ಅನೇಕ ಕಾರ್ಯಗಳನ್ನು ಹೇಳುತ್ತಲೇ ಇರಬಹುದು. ಈ ಲೋಕವು ಹಣವಿದ್ದವರನ್ನು ಹೊಗಳುತ್ತದೆ. ಸಮಾಜದಲ್ಲಿ ಅಧಿಕಾರದ ಸ್ಥಾನದಲ್ಲಿರುವವರನ್ನು ಹುಡುಕಿ ಓಡುತ್ತಿದ್ದಾರೆ ಜನರು. ಆದರೆ ಯೇಸು ಕ್ರಿಸ್ತನು ಸಂತೋಷ ಮತ್ತು ಸಮಾಧಾನವನ್ನು ಉಚಿತವಾಗಿ ನೀಡಲು ಬಯಸುತ್ತಿದ್ದಾರೆ. ಜನರಿಗೆ ಅದನ್ನು ಸ್ವೀಕರಿಸಲು ಇಷ್ಟವಿಲ್ಲ. ಎಂಥಾ ಒಂದು ಮೂರ್ಖತನ! ಬೆಂಕಿಕೋಳಿ ದೊಡ್ಡದಾಗಿದ್ದರೂ ಅದು ಬುದ್ಧಿಯಿಲ್ಲದೆ ವರ್ತಿಸುತ್ತದೆ.

      

ಪ್ರಿಯರೇ! ನಮಗೂ ಸಹ ನಮ್ಮ ಸ್ವಂತ ಕುಟುಂಬದ ಬಗ್ಗೆ, ನಮ್ಮ ಮಕ್ಕಳ ಹಾದಿಯ ಬಗ್ಗೆ, ಅವರ ಆತ್ಮಗಳ ಬಗ್ಗೆ ಕಾಳಜಿ ಇಲ್ಲದೆ ಹೋದರೆ, ನಾವು ಸಹ ಈ ಉಷ್ಟ್ರಪಕ್ಷಿಯಂತೆಯೇ! ಲೋಕದ ದೃಷ್ಟಿಯಲ್ಲಿ ದೊಡ್ಡದಾಗಿ ಕಾಣುವ ಹಣ, ಹೆಸರು, ಖ್ಯಾತಿ ಮತ್ತು ಅಂತಸ್ತಿನ ಮೇಲೆ ಕೇಂದ್ರೀಕರಿಸದೆ, ದೇವರು ನಮಗೆ ನೀಡಿರುವ ಕುಟುಂಬವನ್ನು ಮುನ್ನಡೆಸಲು ಜ್ಞಾನವನ್ನು ಕೇಳೋಣ. ಆಮೆನ್.

- Bro. ಅನೀಸ್ ರಾಜಾ

 

ಪ್ರಾರ್ಥನಾ ಅಂಶ:

ಕಣ್ಮಣಿ ಮಕ್ಕಳು ಎಂಬ ಪ್ರಾರ್ಥನಾ ಯೋಜನೆಯಲ್ಲಿ ಭಾಗಿಯಾಗಿರುವ ಮಕ್ಕಳ ಜ್ಞಾನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)