Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 17.10.2024

ಧೈನಂದಿನ ಧ್ಯಾನ(Kannada) – 17.10.2024

 

ನಮ್ಮ ಅರ್ಹತೆ ಎಂಥದ್ದು?

 

"ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾವನಾದರೂ ನನ್ನ ವಾಕ್ಯವನ್ನು ಕೈಕೊಂಡು ನಡೆದರೆ ಅವನು ಎಂದಿಗೂ ಸಾವನ್ನು ಕಾಣುವದಿಲ್ಲ ಅಂದನು" - ಯೋಹಾನ 8:51

  

ಪರಲೋಕಕ್ಕೆ ಶಾರ್ಟ್‌ಕಟ್ ಇದೆಯೇ? ಎಂದು ಒಬ್ಬ ಮುದುಕ ರಾಬರ್ಟ್‌ನನ್ನು ಕೇಳುತ್ತಾ ನಡೆದನು. ಕಾರಣ, ಆ ಮುದುಕ ಶಾರ್ಟ್ ಕಟ್ ದಾರಿಯಲ್ಲಿ ಹೋಗಿಯೇ ಅಭ್ಯಾಸವಾಗಿತ್ತು. ಪ್ರಯಾಣದ ಸಮಯದಲ್ಲಿ ಟಿಕೆಟ್ ತೆಗೆದುಕೊಳ್ಳದಿರುವುದು, ಕೆಲಸಗಳನ್ನು ಮಾಡಲು ಕಚೇರಿಗಳಲ್ಲಿ ಅಧಿಕಾರಿಗಳಿಗೆ ಲಂಚ ನೀಡುವುದು, ಪಡಿತರ ಅಂಗಡಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದಿಲ್ಲ. . . ಈ ರೀತಿ ನೇರವಾಗಿ ಹೋಗಲು ಎಂದೂ ಪ್ರಯತ್ನಿಸುತ್ತಿರಲಿಲ್ಲ. ರಾಬರ್ಟ್ ಮುದುಕನಿಗೆ ನೀವು ಪರಲೋಕಕ್ಕೆ ಹೋಗಲು ಸಾಧ್ಯವಿಲ್ಲ ಏಕೆಂದರೆ ನೀವು ಅಡ್ಡದಾರಿಯಲ್ಲಿ ಎಲ್ಲವನ್ನೂ ಗಳಿಸಿದ್ದೀರ ಎಂದನು. ಮುದುಕ, ನಾನು ಮಾಡಿದ ಪಾಪ ಕ್ಷಮಿಸಲ್ಪಡಲು ಯಾವುದಾದರೂ ಮಾರ್ಗವಿದೆಯೇ? ಎಂದು ಕೇಳಿದರು. ಧಾನ, ಧರ್ಮ ಮಾಡಿಬಿಟ್ಟರೆ, ಕಾಣಿಕೆ ಕೊಟ್ಟುಬಿಟ್ಟರೆ ಸಾಕೇ? ಎಂದು ಕೇಳಿದರು. ನಾವು ಯೇಸುಕ್ರಿಸ್ತನ ರಕ್ತದಲ್ಲಿ ತೊಳೆಯಲ್ಪಡುವುದೊಂದೇ ಮಾರ್ಗ ಎಂದು ರಾಬರ್ಟ್ ಅವರಿಗೆ ಹೇಳಿದನು. ಯೋಹಾನ 14:6 ರಲ್ಲಿ ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ ಎಂದರು ಯೇಸು.

  

ಅದೊಂದೇ ನಮ್ಮ ಅರ್ಹತೆ. ನಾವು ಅನೇಕ ಪುಣ್ಯ ಕಾರ್ಯಗಳನ್ನು ಮಾಡಿರಬಹುದು. ಕ್ರಿಯೆಗಳು ಮಾತ್ರವೇ ನಮ್ಮನ್ನು ಪರಲೋಕಕ್ಕೆ ಕೊಂಡೊಯ್ಯುವುದಿಲ್ಲ. ದೇವರು ನಮ್ಮ ಮೇಲೆ ಕೃಪೆ ಮಾಡಿ ತನ್ನ ಪರಿಶುದ್ಧ ರಕ್ತದಿಂದ ತೊಳೆದರೆ ಸಾಕು. ಕೃಪೆಯಿಂದ ನಾವು ಪರಲೋಕವನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನಾವು ನಮ್ಮ ಜೀವನದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳನ್ನು ಕುರಿತೇ ಹೊಗಳಿಕೊಳ್ಳುತ್ತಿದ್ದರೆ ಮಾನಸಾಂತರ ಹೊಂದೋಣ. ಕೃಪೆಗಾಗಿ ಬೇಡಿಕೊಳ್ಳೋಣ.

     

ಪ್ರಿಯರೇ, ನಾವು ನಮ್ಮನ್ನು ತಗ್ಗಿಸಿಕೊಂಡು, "ಕರ್ತನೇ, ನಾನು ಪಾಪಿ, ನಾನು ಪರಲೋಕಕ್ಕೆ ವಿರುದ್ಧವಾಗಿಯೂ ನಿಮಗೆ ವಿರುದ್ಧವಾಗಿಯೂ ಪಾಪ ಮಾಡಿದ್ದೇನೆ. ಕಲ್ವಾರಿ ಶಿಲುಬೆಯಲ್ಲಿ ನೀವು ನನಗಾಗಿ ನಿಮ್ಮ ಪ್ರಾಣವನ್ನೇ ಕೊಟ್ಟಿರೆಂದು ನಾನು ನಂಬುತ್ತೇನೆ. ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಿ" ಎಂದು ಕೇಳಬೇಕು. ಖಂಡಿತವಾಗಿಯೂ, ಯೇಸು ಕ್ರಿಸ್ತನ ರಕ್ತವು ಎಲ್ಲಾ ಪಾಪಗಳನ್ನು ನೀಗಿಸಿ ನಮ್ಮನ್ನು ಶುದ್ಧೀಕರಿಸುತ್ತದೆ. ಕ್ರಿಸ್ತನ ರಕ್ತವನ್ನು ಹೊರತುಪಡಿಸಿ ನಮಗೆ ಬೇರೆ ಯಾವುದೇ ಪರಿಹಾರವಿಲ್ಲ ಎಂದು ಹೇಳಿದರು.

 

ದೇವರ ಮಗುವೇ! ನಾವು ಬೆಳ್ಳಿ ಅಥವಾ ಚಿನ್ನದಿಂದ ವಿಮೋಚನೆಗೊಂಡಿಲ್ಲ, ಆದರೆ ನಿಷ್ಕಳಂಕ ಕುರಿಮರಿಯ ಕ್ರಿಸ್ತನ ಅಮೂಲ್ಯ ರಕ್ತದಿಂದ ಬಿಡಿಸಲ್ಪಟ್ಟಿದ್ದೇವೆ. ಹೌದು, ನಾವು ರಕ್ಷಣೆ ಹೊಂದುವುದಕ್ಕೋ, ಪರಲೋಕಕ್ಕೆ ಹೋಗುವುದಕ್ಕೋ ಶಾರ್ಟ್‌ಕಟ್ ಇಲ್ಲವೇ ಇಲ್ಲ. ಯೇಸುಕ್ರಿಸ್ತನ ರಕ್ತದಿಂದ ನಾವು ತೊಳೆಯಲ್ಪಡುವುದು ಮಾತ್ರವೇ ಏಕೈಕ ಮಾರ್ಗವಾಗಿದೆ! ಪ್ರತಿದಿನ ನಮ್ಮ ಹೃದಯವನ್ನು ಶುದ್ಧವಾಗಿ ಕಾಯ್ದುಕೊಳ್ಳಲು ಕಲಿಯೋಣ. ಪರಲೋಕ ಜೀವನವನ್ನು ಪಡೆದು ಆನಂದಿಸೋಣ !!

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

25.000 ಹಳ್ಳಿಗಳಲ್ಲಿ ಸುವಾರ್ತೆಯನ್ನು ಸಾರುವ ಯೋಜನೆಯಲ್ಲಿ ನಮ್ಮೊಂದಿಗೆ ಹೆಗಲು ಕೊಡುವ ಅನೇಕ ಜನರನ್ನು ದೇವರು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)