Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 13.10.2024 (Kids Special)

ಧೈನಂದಿನ ಧ್ಯಾನ(Kannada) – 13.10.2024 (Kids Special)

 

ಒಳ್ಳೆಯದನ್ನು ಮಾಡು

 

"ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು..." - ಎಫೆಸದವರಿಗೆ 2:10

 

ಮುದ್ದು ಪುಟಾಣಿಗಳೇ, ಎಲ್ಲರೂ ಚೆನ್ನಾಗಿದ್ದೀರಾ? Very good. ಏನೂ.. ಕಥೆ ಹೇಳಬೇಕಾ? ಅಷ್ಟೊಂದು ಆಸೇನಾ? ರೆಡಿಯಾಗಿ ಇದ್ದೀರಲ್ಲಾ! ಸರಿ, ಸರಿ, ಇಂದು ಒಂದು ನಿಜವಾದ ಕಥೆಯನ್ನು ಕೇಳೋಣ್ವಾ? 

 

ನೀವು Beach ಗೆ ಹೋಗಿ ಕಡಲತೀರದಲ್ಲಿ ಆಟವಾಡಿ ಸಮುದ್ರದಲ್ಲಿ ಮುಳುಗಿ ಅಲೆಗಳು ಬರುವಾಗ jump ಮಾಡಿ, ಕುಣಿದು ಜಾಲಿಯಾಗಿ enjoy ಮಾಡುವುದು ತುಂಬಾ ಇಷ್ಟ ಅಲ್ವಾ ! ಪೆಸಿಫಿಕ್ ಮಹಾಸಾಗರದ ದಕ್ಷಿಣ ಭಾಗದಲ್ಲೇ ಅನಿವಾ ಎಂಬ ದ್ವೀಪವಿತ್ತು. ಸುತ್ತಲೂ ನೀರು ಮಧ್ಯದಲ್ಲಿ ಜನರು ಇರುವುದೇ "ದ್ವೀಪ" ಪಾಠದಲ್ಲಿ ಇದನ್ನು ಓದಿರುತ್ತೀರ. ಹೌದು ತಾನೇ! ಇಲ್ಲಿ ಶಾಲೆಯೋ, ಆಸ್ಪತ್ರೆಯೋ ಇಲ್ಲ. ಸರಿಯಾದ ಬಟ್ಟೆ ಧರಿಸಲು ಕೂಡ ಅಲ್ಲಿರುವವರಿಗೆ ಗೊತ್ತಿಲ್ಲ. ಜಾನ್ ಪ್ಯಾಟನ್ ಇಂಥವರನ್ನು ಹುಡುಕಿ ಹೋದರು. ಅವರಿಗೆ ಮೊದಲು ಬಟ್ಟೆ ಧರಿಸಲು ಕಲಿಸಿದರು. ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿ ಒಳ್ಳೆಯದನ್ನು ಮಾಡುತ್ತಿದ್ದರು. ಶಿಕ್ಷಣದ ಮಹತ್ವವನ್ನು ಸಾರುತ್ತಾ ಶಾಲೆಯೊಂದನ್ನು ಆರಂಭಿಸಿದರು.   

 

ತಂದೆಯಿಲ್ಲದ ಮಕ್ಕಳಿಗಾಗಿ Home ಒಂದನ್ನು ಆರಂಭಿಸಿದರು. ಏಕಾಏಕಿ ನೀರಿನ ಕೊರತೆ ಉಂಟಾಯಿತು. ಏನೂ, ದ್ವೀಪದಲ್ಲಿ ನೀರಿನ ಕೊರತೆ ಇದೆಯೇ ಎಂದು ಆಶ್ಚರ್ಯಪಡುತ್ತಿದ್ದೀರಾ? ಕುಡಿಯುವ ನೀರಿಗೆ ಕ್ಷಾಮ, ಸಮುದ್ರದ ನೀರು ಉಪ್ಪಾಗಿ ಇರುತ್ತದಲ್ಲವೇ? ಹಾಗಾಗಿ ಬಾವಿ ನೀರನ್ನೇ ನೋಡಿರದ ಜನರಿಗೆ ಬಾವಿ ತೋಡಲು ಕಲಿಸಿದರು. ಭೂಮಿಯ ಕೆಳಗಿನಿಂದ ನೀರು ಬರುತ್ತಿರುವುದನ್ನು ನೋಡಿದ ದ್ವೀಪದ ಜನರಿಗೆ ತಮ್ಮ ಸಂತೋಷವನ್ನು ತಡೆಯಲು ಸಾಧ್ಯವಾಗಲಿಲ್ಲ. ಅವರು ಭೂಮಿಯ ಕೆಳಗಿನಿಂದ ಮಳೆಯನ್ನು ಬರಮಾಡಿದ ದೇವರೇ ನಿಜವಾದ ದೇವರೆಂದು ಸ್ವೀಕರಿಸಿದರು. ಅಂತಿಮವಾಗಿ ಆ ದ್ವೀಪದ ನಾಯಕನು ಯೇಸುವನ್ನು ಅಂಗೀಕರಿಸಿದರು. ಜಾನ್ ಪ್ಯಾಟನ್ ಅನಿವಾ ದ್ವೀಪದ ಅಜ್ಞಾನಿಗಳಿಗೆ ಬಹಳಷ್ಟು ಒಳ್ಳೆಯದನ್ನು ಮಾಡಿದರು. ಇಷ್ಟು ಸಾಕು ಎಂದು ಯೋಚಿಸದೆ ಸತ್ಕಾರ್ಯಗಳನ್ನು ಮುಂದುವರೆಸಿದರು. ಪರಿಣಾಮವಾಗಿ ಎಲ್ಲಾ ದ್ವೀಪವಾಸಿಗಳು ಯೇಸುವನ್ನು ಅರಿತುಕೊಂಡರು.

  

ಮುದ್ದು ಪುಟಾಣಿಯೇ, ನಿನ್ನನ್ನೂ ಕೂಡ ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾಗಿದೆ. ಇಂದು ನೀನು ಓದುತ್ತಿರುವುದಕ್ಕೆ ಯಾವುದೋ ಒಂದು ಕ್ರೈಸ್ತ ಮಿಷನರಿಯೇ ಕಾರಣ! ಶಿಕ್ಷಣವಿಲ್ಲದೇ ಹೋಗಿದ್ದರೆ ನಾವು ಹೇಗಿರುತ್ತಿದ್ದೆವು. ಯೋಚಿಸಿ ನೋಡು. ಯಾರಾದರೂ ಸಹಾಯ ಮಾಡಲಿ, ಅವರಿಗೆ ನಾನು ಯಾಕೆ ಸಹಾಯ ಮಾಡಬೇಕು? ಎಂದು ಯೋಚಿಸದೇ ನಿನ್ನಿಂದಾಗುವ ಸಹಾಯವನ್ನು ಮಾಡಿಬಿಡು. ದೇವರು ಖಂಡಿತಾ ಇದಕ್ಕೆ ಫಲ ಕೊಡುತ್ತಾರೆ.  

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)