Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 15.10.2024

ಧೈನಂದಿನ ಧ್ಯಾನ(Kannada) – 15.10.2024

 

ಜಯಿಸಲು ಹುಟ್ಟಿದವರು 

 

"…ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ" - ರೋಮಾ 8:37

 

ಒಬ್ಬ ಮಹಾನ್ ಸೇನೆಯ ನಾಯಕ ತನ್ನ ದೇಶದ ಸಮೀಪವಿರುವ ದ್ವೀಪವನ್ನು ವಶಪಡಿಸಿಕೊಳ್ಳಲು ಯೋಜಿಸಿದನು. ಕೇವಲ ಒಂದೇ ಒಂದು ಸೇತುವೆ ಮಾತ್ರ ಆ ದ್ವೀಪವನ್ನು ತನ್ನ ಸ್ವಂತ ದೇಶದೊಂದಿಗೆ ಅಂಟಿಕೊಂಡಿತ್ತು . ಒಂದು ದಿನ ರಾತ್ರೋರಾತ್ರಿ ಅವನು ತನ್ನ ಸೈನಿಕರಿಗೆ ಆ ಸೇತುವೆಯ ಮೂಲಕ ಆ ದ್ವೀಪವನ್ನು ತಲುಪಲು ಆದೇಶಿಸಿದನು. ಅವರೂ ಆ ದ್ವೀಪಕ್ಕೆ ಹೋದರು. ಕಮಾಂಡರ್ ತನ್ನ ಸೈನಿಕರಿಗೆ ಸಂಪೂರ್ಣವಾಗಿ ಆ ಸೇತುವೆಯನ್ನು ನೆಲಸಮ ಮಾಡಲು ಆದೇಶಿಸಿದನು. ಸೈನಿಕರು ದಿಗ್ಭ್ರಮೆಗೊಂಡಾಗ ಒಬ್ಬ ಯೋಧ ಎದ್ದುನಿಂತು "ನಮಗೆ ತಪ್ಪಿಸಿಕೊಳ್ಳಲು ಇದೊಂದೇ ಸೇತುವೆ ಬಿಟ್ಟರೆ ಬೇರೆ ದಾರಿಯಿಲ್ಲ. ಇದನ್ನೂ ಧ್ವಂಸ ಮಾಡಿದರೆ ಹೇಗೆ ಪಾರಾಗುವುದು?" ಎಂದು ಕೇಳಿದನು. ಅದಕ್ಕೆ ಆ ನಾಯಕ, “ನಾವು ತಪ್ಪಿಸಿಕೊಳ್ಳಲು ಬಂದಿಲ್ಲ; ಗೆಲ್ಲಲು ಬಂದಿದ್ದೇವೆ,’’ ಎಂದರು. ಸೇತುವೆ ನಾಶವಾಯಿತು ಮತ್ತು ವಿಜಯವನ್ನು ಸಾಧಿಸಲಾಯಿತು. ಸೇತುವೆಯನ್ನು ವಿಜಯ ಸೇತುವೆ ಎಂದು ಮರುನಿರ್ಮಿಸಲಾಯಿತು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ, ನೀವು ಏನನ್ನಾದರೂ ಮಾಡಲು ಪ್ರಾರಂಭಿಸುವಾಗಲೇ, ಇದು ಆಗದೇ ಹೋದರೆ, ಇದು ನಡೆಯದೇ ಹೋದರೆ, ಅದು ಕಾರ್ಯರೂಪಕ್ಕೆ ಬರದಿದ್ದರೆ ಎಂದು ನಕಾರಾತ್ಮಕವಾಗಿ ಯೋಚಿಸಬೇಡಿ. ಹಾಗೆ ಯೋಚಿಸಿದಾಗ ನಾವು ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. "ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ" ಎಂಬ ವಾಕ್ಯದ ಪ್ರಕಾರ ನಮ್ಮ ಹೃದಯದಲ್ಲಿ ನಂಬಿಕೆಯನ್ನು ಆಳವಾಗಿ ಮುದ್ರಿಸಿ ಕೊಳ್ಳಬೇಕು.

 

ಮೋಕ್ಷವನ್ನು ನಿರೀಕ್ಷಿಸಿ ಪ್ರಯಾಣಿಸುತ್ತಿರುವ ನಮ್ಮ ಕ್ರೈಸ್ತವ್ಯದ ಓಟದಲ್ಲಿ ನಾವು ಹಿಂತಿರುಗಿ ನೋಡಲೇ ಬಾರದು. ಮೋಡದಂತಹ ಹೇರಳವಾದ ಸಾಕ್ಷಿಗಳು, ತಮ್ಮ ನಂಬಿಕೆಯ ಓಟದಲ್ಲಿ ಓಡಿ ಮುಗಿಸಿದ್ದನ್ನು ನಾವು ಸತ್ಯವೇದದಲ್ಲಿ ನೋಡಬಹುದು. ಇಬ್ರಿಯ 11: 15, 16 ರಲ್ಲಿ, ನಮ್ಮ ಪೂರ್ವಿಕರು ತಾವು ಹೊರಟುಬಂದಿದ್ದ ದೇಶಕ್ಕೆ ಹಿಂತಿರುಗಿ ಹೋಗಲು ಬಯಸದೇ, ಪಾಡುಗಳು, ಹೋರಾಟಗಳು, ಸಮಸ್ಯೆಗಳ ನಡುವೆಯೂ ಪರಲೋಕವೆಂಬ ಉತ್ತಮದೇಶವನ್ನೇ ಬಯಸಿ, ದೇವರ ಬಳಿ ಉತ್ತಮ ಸಾಕ್ಷಿಯನ್ನು ಪಡೆದುಕೊಂಡರು. 

 

ಎಲೀಯನು ಎಲೀಷನನ್ನು ಕರೆದಾಗ, ಎಲೀಷನು ಅವನ ಉಳುಮೆ ಮತ್ತು ಎತ್ತುಗಳನ್ನು ನಾಶಮಾಡಿದ ನಂತರ ಬಂದನು. ತಾನು ಮಾಡಿದ ಹಳೇ ಕೆಲಸಕ್ಕೆ ಮನಸ್ಸು ಮರುಳಾಗಬಾರದೆಂದು ಹೀಗೆ ಮಾಡಿರಬಹುದು. “ನೇಗಿಲಿಗೆ ಕೈ ಹಾಕಿ ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ಅರ್ಹನಲ್ಲ” ಎಂದು ಕರ್ತನಾದ ಯೇಸು ಹೇಳಿದ್ದಾರೆ. ಇಂದಿನ ಸತ್ಯವೇದ ಭಾಗದಲ್ಲಿ, ನಮ್ಮನ್ನು ಪ್ರೀತಿಸುವ ಯೇಸು ಕ್ರಿಸ್ತನು ನಮ್ಮನ್ನು ಸಂಪೂರ್ಣವಾಗಿ ಜಯಿಸುವವರನ್ನಾಗಿ ಮಾರ್ಪಡಿಸುತ್ತಾರೆ. ಹಾಗಾಗಿ ದಣಿವಾಗದೆ, ನಮ್ಮ ಗುರಿಯತ್ತ ಓಡಿ ಗೆಲ್ಲೋಣ!

- ಶ್ರೀಮತಿ. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಈ ವರ್ಷದೊಳಗೆ ಒಂದು ಲಕ್ಷ ಚಿಕ್ಕ ಮಕ್ಕಳನ್ನು ಭೇಟಿಯಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)