Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 16.10.2024

ಧೈನಂದಿನ ಧ್ಯಾನ(Kannada) – 16.10.2024

 

ಪಡೆದುಕೊಳ್ಳ ತಕ್ಕಂತೆ ಓಡಿರಿ 

 

"ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನನುಭವಿಸು" - 2 ತಿಮೊಥೆಯ 2:3

  

ಗ್ಯಾಟ್ವಿಕ್ ಎಂಬ ಈಜುಗಾರ್ತಿ ಅಮೇರಿಕಾಗೆ ಸೇರಿದವರು. ಇವರು ವಿಶ್ವ ಸಾಧನೆ ಮಾಡಲು ಬಯಸಿ ಸಮುದ್ರದಲ್ಲಿ 34 ಕಿಲೋಮೀಟರ್ ಈಜಲು ಯೋಜಿಸಿದ್ದರು. ಕ್ಯಾಟನಿನಾ ದ್ವೀಪದಿಂದ ದಕ್ಷಿಣ ಕ್ಯಾಲಿಫೋರ್ನಿಯಾಗೆ ಪೆಸಿಫಿಕ್ ಸಾಗರವನ್ನು ದಾಟುವುದು ಇವರ ಗುರಿಯಾಗಿತ್ತು. ಈ ಪ್ರದೇಶವು ತುಂಬಾ ಅಪಾಯಕಾರಿ ಏಕೆಂದರೆ ಇದು ಶಾರ್ಕ್ಗಳಿರುವ ಪ್ರದೇಶವಾಗಿದೆ, ಸಮುದ್ರದಲ್ಲಿ ಎತ್ತರದ ಅಲೆಗಳು, ಹವಾಮಾನ ಪರಿಸ್ಥಿತಿಗಳು ಯಾವಾಗಲೂ ಮಂಜಿನಿಂದ ಕೂಡಿರುತ್ತವೆ ಮತ್ತು ನೀರು ತಂಪಾಗಿರುತ್ತದೆ. ಎಲ್ಲಾ ಸವಾಲುಗಳನ್ನು ತಿಳಿದ ನಂತರವೂ ಅವರು ಧೈರ್ಯದಿಂದ ಸಾಗರದ ಆ ಭಾಗವನ್ನು ಈಜಲು ಒಪ್ಪಿಕೊಂಡರು. ಇದಕ್ಕಾಗಿ ಕಠಿಣ ತರಬೇತಿಯನ್ನೂ ಪಡೆದಿದ್ದರು. ಹಾಗಾಗಿ ಸ್ಪರ್ಧೆ ಅವರಿಗೆ ಖುಷಿ ತಂದಿದೆ. ಬಹು ದೂರ, ಬಹು ಸಮಯ ಪ್ರಯಾಣದ ನಂತರವೂ, ದಡ ಬರಲಿಲ್ಲವಲ್ಲಾ? ಎಂಬ ಹಂಬಲದಿಂದ ನೋಡುತ್ತಾ ನೋಡುತ್ತಾ ಸುಸ್ತಾಗಿಹೋದರು. ಮಾನಸಿಕ ಬಳಲಿಕೆ ದೇಹವನ್ನೂ ಬಳಲಿಸಿತ್ತು. ಇದರಿಂದಾಗಿ ಚಳಿ ತಾಳಲಾರದೆ ಮಂಜು ಕಣ್ಣನ್ನು ಮುಚ್ಚಿಸಿತು. ಮುಂದೆ ಇನ್ನೆಷ್ಟು ದೂರ ಎಂದು ತಿಳಿಯದ ಕಾರಣ ತನ್ನನ್ನು ಮೇಲೆತ್ತಿಕೊಳ್ಳುವಂತೆ ಕೇಳಿಕೊಂಡರು. ನಿಮ್ಮಿಂದ ಅದು ಸಾಧ್ಯ ಎಂದು ಕೋಚ್ ಅವರನ್ನು ಎಷ್ಟೋ ಪ್ರೋತ್ಸಾಹಿಸಿದರು. ಇನ್ನು ಕೆಲವು ಗಂಟೆ ಸಮುದ್ರದಲ್ಲಿ ನಿಂತರೆ ಏನಾದ್ರೂ ಅನಾಹುತ ಆಗಬಹುದು ಎಂದುಕೊಳ್ಳುತ್ತಾ ಉದ್ವೇಗಕ್ಕೆ ಒಳಗಾದವಳು ತಕ್ಷಣ ಅವಳನ್ನು ಮೇಲಕ್ಕೆತ್ತುವಂತೆ ಹೇಳಿದಳು. ಅವರು ಅವಳನ್ನು ಮೇಲಕ್ಕೆತ್ತಿ ನೆಲವನ್ನು ತೋರಿಸಿದರು. ಕೆಲವು ನಿಮಿಷಗಳು ಕಳೆದಿದ್ದರೆ ದಡ ತಲುಪಲು ಸಾಧ್ಯವಾಗುತ್ತಿತ್ತು ಎಂದು ಅರಿತುಕೊಂಡಳು. ತುಂಬಾ ವೇದನೆ ಪಟ್ಟಳು. "ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲವಲ್ಲಾ" ಎಂಬ ಗಾದೆಯ ಮಾತಂತಾಯಿತು ಗ್ಯಾಟ್ವಿಕ್ ನ ಕ್ರಿಯೆ.

 

ಇಂದು ನಾವೂ ಕೂಡ ಉತ್ತಮ ಹೋರಾಟವನ್ನು ಹೋರಾಡುತ್ತಿದ್ದೇವೆ. ನೀತಿಯ ಕಿರೀಟವು ನಮಗಾಗಿ ಕಾಯ್ದಿರಿಸಲಾಗಿದೆ. ನಾವು ಕಿರೀಟವನ್ನು ಮರೆತವರಾಗಿ ಹೋರಾಟವನ್ನೇ ನೋಡಿ ಆಯಾಸಗೊಂಡು, ಆಧ್ಯಾತ್ಮಿಕ ಜೀವನದ ಉತ್ತಮ ಹೋರಾಟವನ್ನು ಅರ್ಧದಾರಿಯಲ್ಲೇ ಕೊನೆಗೊಳಿಸುತ್ತೇವೆ. 

 

ಪ್ರಾರ್ಥನಾ ಜೀವನ, ಸತ್ಯವೇದ ಓದುವಿಕೆ, ಸಾಕ್ಷಿ ಜೀವನ ಎಲ್ಲವೂ ನಿರಾಳವಾಗಿ ಹೋರಾಟವು ನಿಂತುಹೋಗುತ್ತದೆ. ನಾವು ಒಂದು ಶೋಚನೀಯ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದೇವೆ. 

  

ದೇವರ ಮಗುವೇ! ಜೀವನದ ಹೋರಾಟಗಳನ್ನು ಕಂಡು ಎದೆಗುಂದಬೇಡಿ. ನಿಮ್ಮನ್ನು ಕರೆದ ದೇವರು ನಿಮ್ಮನ್ನು ನಿತ್ಯ ಜೀವನದ ದಡಕ್ಕೆ ತರಲು ಶಕ್ತನಾಗಿದ್ದಾರೆ. ಆದುದರಿಂದ ದೇವರಲ್ಲಿ ನಂಬಿಕೆಯಿಟ್ಟು ನಮಗಾಗಿ ನೇಮಿಸಿದ ಓಟದಲ್ಲಿ ತಾಳ್ಮೆಯಿಂದ ಓಡಿ ಗೆಲ್ಲೋಣ. ಗೆಲುವು ಖಚಿತ!

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ತಮಿಳುನಾಡಿನಲ್ಲಿ ಸಭೆಗಳಿಲ್ಲದ ಸಾವಿರಾರು ಹಳ್ಳಿಗಳಲ್ಲಿ ಸಭೆಗಳನ್ನು ನಿರ್ಮಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)