Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.10.2024

ಧೈನಂದಿನ ಧ್ಯಾನ(Kannada) – 14.10.2024

 

ಸಂತೋಷ ಬೇಕಾ?

 

"…ನಿನ್ನ ರಕ್ಷಣೆಯಲ್ಲಿ ಸಂತೋಷ ಪಟ್ಟೆನು" - 1 ಸಮುವೇಲ 2:1

  

ಅಮೇರಿಕಾ ದೇಶದಲ್ಲಿ ಒಬ್ಬ ಶ್ರೀಮಂತನಿದ್ದ. ಆದರೆ ಅವರಿಗೋ ಅನೇಕ ತೊಂದರೆಗಳು ಮತ್ತು ಅನೇಕ ಆಂತರಿಕ ಕ್ಷೋಭೆಗಳು ಇದ್ದವು ಮತ್ತು ಸಾವಿನ ಭಯವು ಸಹ ಅವರನ್ನು ಆವರಿಸಿತ್ತು. ಗಳಿಸಿದ ಸಂಪತ್ತನ್ನು ಸುಖವಾಗಿ ಅನುಭವಿಸಲು ಸಾಧ್ಯವಾಗಲಿಲ್ಲ. ಒಂದು ದಿನ ಅವರು ಒಬ್ಬ ಸೇವಕರನ್ನು ನೋಡಿ ನಿಮ್ಮ ಸಂತೋಷದ ರಹಸ್ಯವೇನು ಎಂದು ಕೇಳಿದರು. ಸೇವಕರು ಅವರನ್ನು ಪ್ರೀತಿಯಿಂದ ಶಿಲುಬೆಯ ಕಡೆಗೆ ನಡೆಸಿದರು. ಅವರು ಮಾನಸಾಂತರ ಹೊಂದಿ ಪಾಪ ಕ್ಷಮಾಪಣೆಯನ್ನೂ ಮತ್ತು ರಕ್ಷಣೆಯ ಸಂತೋಷವನ್ನು ಪಡೆದುಕೊಂಡರು. ಪ್ರಪಂಚದಲ್ಲಿರುವ ಎಲ್ಲವೂ ಹೊಸದಾಗಿ ಬದಲಾದಂತಹ ಗ್ರಹಿಕೆ ಉಂಟಾಯಿತು.    

  

ಈ ಜಗತ್ತಿನಲ್ಲಿ ಮೂರು ವಿಧವಾದ ಸಂತೋಷಗಳಿವೆ. ಮೊದಲನೆಯದು ಲೌಕಿಕ ವ್ಯವಹಾರಗಳಲ್ಲಿ ಯಶಸ್ವಿಯಾದಾಗ ಅಂತರಾಳದಲ್ಲಿ ಉಂಟಾಗುವ ಸಂತೋಷ. ಇದು ನೈಸರ್ಗಿಕವಾದದ್ದು ಮತ್ತು ಸಾಮಾನ್ಯವಾದುದು. ಎರಡನೆಯದಾಗಿ, ಸೈತಾನನು ತರುವ ಸಂತೋಷವು ಪಾಪದ ಸಂತೋಷವಾಗಿದೆ. ಅದು ನಿಜವಾದ ಸಂತೋಷವಲ್ಲ. ಅನಿತ್ಯವಾದ ಪಾಪದ ಸಂತೋಷ. ಕೊನೆಗೆ ಅದು ನಮ್ಮನ್ನು ಪಾತಾಳಕ್ಕೆ, ಬೆಂಕಿಯ ಕಡಲಿಗೆ ತಳ್ಳಿ, ನಾವು ನಿತ್ಯಜೀವವನ್ನು ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. ಮೂರನೆಯದು ದೇವರಿಂದ ಬರುವ ಸಂತೋಷ. ಇದನ್ನು ಈ ಲೋಕವು ಕೊಡಲೂ ಸಾಧ್ಯವಿಲ್ಲ ತೆಗೆದುಕೊಳ್ಳಲೂ ಸಾಧ್ಯವಿಲ್ಲ. ನಮ್ಮ ಪಾಪಗಳು ಕ್ಷಮಿಸಲ್ಪಡುವಾಗ ರಕ್ಷಣೆಯ ಸಂತೋಷವು ಬರುತ್ತದೆ. ನಾವು ದೇವರನ್ನು ಸ್ತುತಿಸಿ ಆರಾಧಿಸುವಾಗ ಪರಲೋಕದ ಸಂತೋಷವು ನಮ್ಮೊಳಗೆ ಬರುತ್ತದೆ. ಯೇಸುಕ್ರಿಸ್ತನು ನೀಡುವ ಮುಖ್ಯ ಸಂತೋಷವೇ ರಕ್ಷಣೆಯ ಸಂತೋಷ. ಅವರು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಿಬಿಟ್ಟರು. ನನ್ನನ್ನು ತನ್ನ ಮಗುವಾಗಿ ಸ್ವೀಕರಿಸಿದರು. ಅವರು ನನ್ನ ಆತ್ಮದಲ್ಲಿ ನೆಲೆಸಿದ್ದಾರೆ ಎಂದು ನಾವು ಭಾವಿಸಿದಾಗ ದೊಡ್ಡ ಸಂತೋಷವು ನಮ್ಮ ಹೃದಯವನ್ನು ತುಂಬುತ್ತದೆ. ರಕ್ಷಿಸಲ್ಪಟ್ಟ ನಾವು ಅವರನ್ನು ಅಪ್ಪಾ ತಂದೆಯೇ ಎಂದು ಕರೆಯುವ ಪುತ್ರಸ್ವೀಕಾರದ ಆತ್ಮವನ್ನು ಪಡೆದುಕೊಳ್ಳುತ್ತೇವೆ. ಆತನು ನಮಗೆ ನೀಡುವ ಎಲ್ಲಾ ಸ್ವಾತಂತ್ರ್ಯಗಳನ್ನು ಅನುಭವಿಸುತ್ತೇವೆ. ನಮ್ಮ ಹೆಸರು ಪರಲೋಕದಲ್ಲಿ ಜೀವ ಪುಸ್ತಕದಲ್ಲಿ ಬರೆಯಲ್ಪಡುತ್ತದೆ. ಕರ್ತನು ಹೊಸ ಜೀವವನ್ನು ಕೊಡುತ್ತಾರೆ. ಇಂದಿನ ಸತ್ಯವೇದ ಭಾಗದಲ್ಲಿ ನಾವು ಜಕ್ಕಾಯನ ಬಗ್ಗೆ ಓದುತ್ತೇವೆ. “ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಇಳುಕೊಳ್ಳಬೇಕು" ಎಂದು ಯೇಸು ಹೇಳಿದಾಗ, ಜಕ್ಕಾಯನು ತಟ್ಟನೆ ಇಳಿದು ಬಂದು ಆತನನ್ನು ಸಂತೋಷದಿಂದ ಸೇರಿಸಿಕೊಂಡನು. ಎಂದು ಓದುತ್ತೇವೆ (ಲೂಕ 19:6) ಜಕ್ಕಾಯನ ಹೃದಯದಲ್ಲಿ ಬದಲಾವಣೆ ಉಂಟಾಯಿತು. ಅವನ ಮನೆಗೆ ರಕ್ಷಣೆ ಬಂದಿತು. 

  

ಪ್ರಿಯರೇ! ಇಂದಿನ ಸುಸಂಸ್ಕೃತ ಮತ್ತು ತಾಂತ್ರಿಕ ಜಗತ್ತಿನಲ್ಲಿ ಬದುಕುತ್ತಿರುವ ನಾವು ಸಂತೋಷ, ಶಾಂತಿ ಮತ್ತು ಪರಿಹಾರವನ್ನು ಹುಡುಕುತ್ತಾ ಎಲ್ಲೆಲ್ಲೋ ಓಡುತ್ತಿದ್ದೇವೆ. ನಿಮಗೆ ಉಚಿತವಾಗಿ ಸಂತೋಷವನ್ನು ಮತ್ತು ಸಮಾಧಾನವನ್ನು ಕೊಡಲು ಶಕ್ತನಾದ ಯೇಸುವಿನ ಬಳಿಗೆ ಬನ್ನಿ. ಅವರು ನಿಮ್ಮ ಹೃದಯ ಮತ್ತು ಮನೆಯನ್ನು ಸಂತೋಷ, ಶಾಂತಿಯಿಂದ ತುಂಬಲು ಸಿದ್ಧರಾಗಿದ್ದಾರೆ. ಆತನ ಬಳಿ ನಿಮ್ಮ ಜೀವನವನ್ನು ಸಮರ್ಪಿಸಿರಿ. 

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲಿ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)