Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 07.09.2024

ಧೈನಂದಿನ ಧ್ಯಾನ(Kannada) – 07.09.2024

 

ನೋಡುತ್ತಿರುವ ದೇವರು

 

"…ನೀನು ನನ್ನನ್ನು ನೋಡುವ ದೇವರು" - ಆದಿಕಾಂಡ 16:13

  

ಅಪರಾಧಗಳು ಹೆಚ್ಚಿರುವ ಇಂದಿನ ಪರಿಸ್ಥಿತಿಯಲ್ಲಿ ಕಣ್ಗಾವಲು ಕ್ಯಾಮೆರಾಗಳು ಬಹಳ ಅಗತ್ಯವಾಗಿವೆ. ವಿಮಾನ ನಿಲ್ದಾಣಗಳು, ರೈಲ್ವೆ ಮತ್ತು ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಶಾಪಿಂಗ್ ಮಾಲ್‌ಗಳು, ಬೀದಿಗಳು, ರಸ್ತೆಗಳು ಮತ್ತು ಮನೆಗಳಂತಹ ಜನನಿಬಿಡ ಸ್ಥಳಗಳಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಿ ನೋಡಲಾಗುತ್ತಿದೆ. ನಡೆದ ಘಟನೆಗಳ ಆಧಾರದ ಮೇಲೆ, ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸುಲಭವಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಪ್ರತಿದಿನ ಅನೇಕ ಘಟನೆಗಳು ಪೊಲೀಸ್ ಕ್ರಮಕ್ಕೆ ಪ್ರಮುಖ ಸಾಕ್ಷಿಗಳಾಗಿ ಬಳಕೆಯಾಗುತ್ತಿವೆ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಒಮ್ಮೆ ಜನರು ತಮ್ಮ ಕಾಣಿಕೆಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಆಸಕ್ತಿಯಿಂದ ಗಮನಿಸಿದರು. ಶ್ರೀಮಂತರಿಗಿಂತ ಬಡ ವಿಧವೆಯ ಕಾಣಿಕೆಯನ್ನು ನೋಡಿ, ಆಕೆಯ ಪ್ರಾಮಾಣಿಕತೆ, ಉತ್ಸಾಹ, ಸತ್ಯ ಮತ್ತು ಮನಸಿನ ಬಯಕೆಯನ್ನು ಅರಿತು ಅವಳು ದೇವರಿಗೆ ಅರ್ಪಿಸಿದ ಕಾಣಿಕೆಯ ಕುರಿತು ಮೆಚ್ಚಿಕೊಂಡರು. ಹಳೆಯ ಒಡಂಬಡಿಕೆಯಲ್ಲಿ, ಅಬ್ರಹಾಮನ ಉಪಪತ್ನಿ ಹಾಗರಳು, ಅವಳು ಗರ್ಭಿಣಿಯಾದಾಗ ತನ್ನ ಯಜಮಾನಿಯಾದ ಸಾರಳಿಂದ ಏರ್ಪಟ್ಟ ಕ್ರೌರ್ಯದಿಂದಾಗಿ ಅರಣ್ಯಕ್ಕೆ ಓಡಿಹೋದಳು. ದೇವರು ಅವಳ ಕೂಗನ್ನು ಕೇಳಿ, ಅವಳ ಕಣ್ಣೀರನ್ನು ನೋಡಿ, ಅವಳೊಂದಿಗೆ ಮಾತನಾಡುತ್ತಾರೆ. ತನ್ನೊಂದಿಗೆ ಮಾತನಾಡಿದ ದೇವರಿಗೆ "ನೀನು ನನ್ನನ್ನು ಕಾಣುವ ದೇವರು" ಎಂದು ಹೆಸರಿಟ್ಟು ಅವರ ಮಾತಿಗೆ ವಿಧೇಯಳಾಗಿ ತನ್ನ ಯಜಮಾನಿಯ ಬಳಿಗೆ ಹೋದಳು. 

  

ಪಿಯುಸಿ ಮುಗಿಸಿ TELC ಹಾಸ್ಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ 1978ರಲ್ಲಿ ಗೃಹ ವಿಜ್ಞಾನ (Home Science) ಕಾಲೇಜಿನಲ್ಲಿ ಓದುವ ಅವಕಾಶವನ್ನು ದೇವರು ಕೊಟ್ಟರು. ನನ್ನ ಮೊದಲ ವರ್ಷದಲ್ಲಿ, ಕಾಲೇಜಿನ ಪ್ರಾಂಶುಪಾಲರು ಸಾರ್ವಜನಿಕ ಸಭೆಯಲ್ಲಿ ನನ್ನನ್ನು ಮುಂದಕ್ಕೆ ಕರೆದು ಎಲ್ಲರೂ ಚಪ್ಪಾಳೆ ತಟ್ಟುವಂತೆ ಹೇಳಿದರು. ಏಕೆಂದರೆ ಮೂರನೇ ಮಹಡಿಯಲ್ಲಿ ಉಳಿದುಕೊಂಡಿದ್ದ ನಮ್ಮ ಪ್ರಿನ್ಸಿಪಾಲ್ ನನ್ನನ್ನು ಮೇಲಿನಿಂದ ಗಮನಿಸುತ್ತಿದ್ದರು ನಾನು ಸಂಜೆ ನಡೆಸುತ್ತಿರುವ ಪ್ರಾರ್ಥನಾ ಕೂಟವನ್ನು ಮತ್ತು ಕಾಲೇಜು ಕ್ಯಾಂಪಸ್‌ನಲ್ಲಿರುವ ಚಿಕ್ಕ ಕಸವನ್ನೂ ತಕ್ಷಣ ಎತ್ತಿ ಡಸ್ಟ್‌ಬಿನ್‌ಗೆ ಹಾಕುವುದನ್ನೂ ಆಗಾಗ್ಗೆ ಗಮನಿಸುತ್ತಿದ್ದರು. ಹಾಸ್ಟೆಲ್ ನಲ್ಲಿದ್ದುಕೊಂಡು ಓದುವಾಗ ನನ್ನ ಕೆಲವು ಚಟುವಟಿಕೆಗಳನ್ನು ಹೇಳಿ ಹೊಗಳಿದರು. ಆ ರಾತ್ರಿ ನಾನು ನನ್ನ ದಿನಚರಿಯಲ್ಲಿ ಹೀಗೆ ಬರೆದೆ, "ನೀನು ನನ್ನನ್ನು ನೋಡುವ ದೇವರು" ನನ್ನ ದೇವರೇ ನೀವು ನನ್ನನ್ನು ಪ್ರತಿ ಸೆಕೆಂಡಿಗೂ ನೋಡುತ್ತಿದ್ದೀರಿ ಮತ್ತು ನನ್ನ ಜೀವಮಾನವೆಲ್ಲಾ ಮನುಷ್ಯರನ್ನು ಮಾತ್ರವಲ್ಲದೆ ನಿಮ್ಮನ್ನೂ ಮೆಚ್ಚಿಸುವಂಥದ್ದಾಗಿಯೇ ಇರುವಂತೆ ನನಗೆ ಸಹಾಯ ಮಾಡಿ" ಎಂದು. ಈಗ ನನಗೆ 71 ವರ್ಷ. ನಾನು ಇಂದಿಗೂ ಅದನ್ನು ಪ್ರಯತ್ನಿಸುತ್ತಿದ್ದೇನೆ, ಕೆಲವೊಮ್ಮೆ ನಾನು ವಿಫಲಗೊಳ್ಳುತ್ತೇನೆ ಮತ್ತು ಕ್ಷಮೆಯನ್ನು ಕೇಳುತ್ತೇನೆ ಮತ್ತು ನನ್ನನ್ನು ಸರಿಪಡಿಸಲು ದೇವರ ಬಳಿ ಸಮರ್ಪಿಸಿಕೊಳ್ಳುತ್ತೇನೆ. ಹೌದು, ನಮ್ಮನ್ನು ಗಮನಿಸುತ್ತಿರುವ ಕ್ಯಾಮೆರಾ ದೇವರ ಕಣ್ಣುಗಳೇ! 

  

ನಿಮಗೆ ಇಷ್ಟವಾದುದನ್ನು ಮಾಡಲು ನನಗೆ ಕಲಿಸಿ. ನೀವೇ ನನ್ನ ದೇವರು ಮತ್ತು ನಿಮ್ಮ ಒಳ್ಳೆಯ ಆತ್ಮವು ನನ್ನನ್ನು ಶುದ್ಧ ಮಾರ್ಗದಲ್ಲಿ ನಡೆಸಲಿ! ಆಮೆನ್.

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ಆಗಸ್ಟ್ 15 ರಂದು ಯೌವನಸ್ಥರ ಕೂಟದಲ್ಲಿ ಯೌವನಸ್ಥರು ತೆಗೆದುಕೊಂಡ ತೀರ್ಮಾನಗಳಲ್ಲಿ ನೆಲೆಗೊಂಡಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)