Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 06.09.2024

ಧೈನಂದಿನ ಧ್ಯಾನ(Kannada) – 06.09.2024

 

ಚಲಿಸಲಾಗದ ಮಾನವ ಸೇತುವೆ

 

"ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನನುಭವಿಸು" - 2 ತಿಮೊಥೆಯ 2:3

  

ಫ್ರೆಂಚ್ ರಾಜ ನೆಪೋಲಿಯನ್ ತನ್ನ ಸೈನ್ಯದೊಂದಿಗೆ ನದಿಯನ್ನು ದಾಟಲು ಪ್ರಯತ್ನಿಸಿದರು. ಸೇತುವೆಗಳು ಹಾಳಾಗಿದ್ದವು. ಹೀಗಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲು ಮುಂದಾದರು. ಕೆಲವರು ನದಿಗೆ ಇಳಿದು ಕಂಬಗಳ ಮೇಲೆ ಹಲಗೆಗಳು ಮತ್ತು ತಂತಿಗಳ ಮೇಲೆ ನಿಂತು ತಾತ್ಕಾಲಿಕ ಸೇತುವೆಯನ್ನು ಮಾಡಿದರು. ಪಡೆಗಳು ನದಿಯನ್ನು ದಾಟಿದವು. ನೆಪೋಲಿಯನ್ ನದಿಯಲ್ಲಿ ನಿಂತಿದ್ದ ಜನರಿಗೆ ಕಂಬಗಳನ್ನು ಹಿಡಿದುಕೊಂಡು ಬರಲು ಆದೇಶಿಸಿದರು. ಯಾರೂ ಮೇಲೆ ಬರಲಿಲ್ಲ ಕಾರಣ ಚಳಿಯಲ್ಲಿ ಹೆಪ್ಪುಗಟ್ಟಿ ಎಲ್ಲರೂ ಸತ್ತುಹೋದರು. ನೆಪೋಲಿಯನ್ ಕೂಡ ಕಣ್ಣೀರು ಸುರಿಸಿದರು. ಅವನ ಯೋಧರು ನಶಿಸಿಹೋಗುವ ರಾಜ್ಯದ ರಾಜನಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.  

  

ನಾವು ಯಾರು? ರಾಜಾಧಿರಾಜ, ದೇವಾಧಿದೇವಾ, ಕರ್ತಾದಿಕರ್ತನು ಆಗಿರುವ ಯೇಸು ಕ್ರಿಸ್ತನ ಯೋಧರು, ಯೇಸು ಕ್ರಿಸ್ತನು ನಮಗಾಗಿ ಪಾಪಪರಿಹಾರಕ ಬಲಿಯಾಗಿ, ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದು 40 ದಿನಗಳವರೆಗೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡು ಪರಲೋಕಕ್ಕೆ ಏರಿದಾಗ ಅವರು ನೀಡಿದ ಆಜ್ಞೆಯೆಂದರೆ, "ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ" ಎಂದು. ಹೌದು, ಆತನು ನಮಗೆ ಆಜ್ಞಾಪಿಸಿದ್ದನ್ನು ಪೂರೈಸಲು ಎಷ್ಟೊಂದು ಶ್ರಮಿಸಿ ನಮ್ಮನ್ನು ಒಪ್ಪಿಸಿಕೊಡಬೇಕು. ಅವರ ಸೇವೆಗಾಗಿ ಶ್ರಮೆಯನ್ನು ಅನುಭವಿಸಲು ಸಹ ಸಿದ್ಧರಿರಬೇಕಲ್ಲವೇ?

 

ಪ್ರಿಯರೇ, ರಾಜಾಧಿರಾಜನ ಈ ಆಜ್ಞೆಗೆ ನಾವು ಎಷ್ಟರ ಮಟ್ಟಿಗೆ ವಿಧೇಯರಾಗುತ್ತಿದ್ದೇವೆ? ನಾವು ದೇವರ ರಾಜ್ಯವನ್ನು ಹರಡಲು ಶ್ರಮಿಸುತ್ತಿದ್ದೇವೆಯೇ? ಸೈತಾನನ ಬಲೆಗೆ ಬಿದ್ದು ಸತ್ತುಹೋಗುತ್ತಿರುವ ಆತ್ಮಗಳ ಬಗ್ಗೆ ನಮಗೆ ಕಾಳಜಿ ಇದೆಯೇ? ಪಾಪದ ಹಾದಿಯಲ್ಲಿ ಸಾಗುತ್ತಿರುವ ಯುವಕರನ್ನು ನೇರವಾಗಿ ಪರಲೋಕದೆಡೆಗೆ ಮುನ್ನಡೆಸಲು ಮತ್ತು "ಪರಿಶುದ್ಧನು ಇನ್ನೂ ಪರಿಶುದ್ಧನಾಗಲಿ" ಎಂದು ಸತ್ಯವೇದವು ಹೇಳುವಂತೆ ದೇವರಿಗೆ ಭಯಪಟ್ಟು ಜೀವಿಸುತ್ತಿರುವವರನ್ನು ಇನ್ನೂ ಹೆಚ್ಚು ಆಳವಾಗಿ ಕರ್ತನಲ್ಲಿ ಜೀವಿಸಲು ನಾವು ಪ್ರೋತ್ಸಾಹಿಸುತ್ತಿದ್ದೇವೆಯೇ? ಉತ್ತಮ ಸೈನಿಕನಾಗಿ ಯೇಸು ಕ್ರಿಸ್ತನಿಗಾಗಿ ಶ್ರಮೆಯನ್ನು ಅನುಭವಿಸಲು ನಮ್ಮನ್ನು ಒಪ್ಪಿಸಿಕೊಡುತ್ತೇವಾ? ಅಥವಾ ಸುಖ ಭೋಗದ ಜೀವನವನ್ನೇ ಬಯಸುತ್ತಿದ್ದೇವಾ? ಯೋಚಿಸಿ ನೋಡಿ! 

       ಪ್ರಾರ್ಥಿಸೋಣ! ನೀಡೋಣ! ಕೆಲಸ ಮಾಡೋಣ!

 

- Mrs. ವನಜಾ ಪಾಲ್ ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಮಿಷನರಿಗಳ ಜ್ಞಾನ, ಸ್ವಸ್ಥತೆ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)