Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 04.09.2024

ಧೈನಂದಿನ ಧ್ಯಾನ(Kannada) – 04.09.2024

 

ಸುಪ್ರಸನ್ನತೆಯ ಕಾಲ ಇದೇ

 

"…ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ" - 2 ಕೊರಿಂಥ 6:2 

 

ಒಬ್ಬ ವ್ಯಕ್ತಿ ತಾನು ಮಾಡಿದ ಕೊಲೆಗಾಗಿ ಜೈಲಿಗೆ ಹೋದನು ಮತ್ತು ಅವನ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತು. ನ್ಯಾಯಾಧೀಶರು ಅವನ ಕೊಲೆಯ ಅಪರಾಧಕ್ಕಾಗಿ ಮರಣದಂಡನೆ ವಿಧಿಸಿದರು. ಇದನ್ನು ಕೇಳಿಸಿಕೊಂಡ ಅವನಿಗೆ ತಿಳಿದವರೆಲ್ಲ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. "ಆ ಮನುಷ್ಯ ಒಳ್ಳೆಯವನು ಮತ್ತು ಮರಣದಂಡನೆಗೆ ಅರ್ಹನಲ್ಲ, ದಯವಿಟ್ಟು ಅವನನ್ನು ಮರಣದಂಡನೆಯಿಂದ ರಕ್ಷಿಸಿ" ಎಂದು ಎಲ್ಲರೂ ಅರ್ಜಿಯಲ್ಲಿ ಬರೆದು ರಾಷ್ಟ್ರಪತಿಗಳಿಗೆ ಕ್ಷಮಾದಾನದ ಮನವಿಯನ್ನು ನೀಡಿದರು. ಅಧ್ಯಕ್ಷರು ಪಾದ್ರಿಯವರಂತೆ ವಸ್ತ್ರಗಳನ್ನು ಧರಿಸಿ ಕಾರಾಗೃಹಕ್ಕೆ ಹೋಗಿ, ಮರಣದಂಡನೆ ಕೈದಿಯನ್ನು ಕರೆತರಲು ಹೇಳಿದರು. ನಾನು ಪಾದ್ರಿಯವರನ್ನು ನೋಡಲು ಬರುವುದಿಲ್ಲ ಅವರಿಗೆ ಹೋಗಲು ಹೇಳಿ ಎಂದು ಮರಣದಂಡನೆ ಕೈದಿ ಹೇಳಿಬಿಟ್ಟನು. ಅವರು ಹೋಗಿಬಿಟ್ಟರು. ಯಾರೋ ಅವನ ಬಳಿಗೆ ಓಡಿ ಬಂದು ನಿನ್ನನ್ನು ಈ ಮರಣದಂಡನೆಯಿಂದ ಮುಕ್ತಗೊಳಿಸಲು ಬಂದವರು ಪಾದ್ರಿಯಲ್ಲ, ಈ ರಾಷ್ಟ್ರದ ಅಧ್ಯಕ್ಷ ಎಂದು ಹೇಳಿದರು. ಆಗ ಅವನು ನನಗೆ ಉಚಿತವಾಗಿ ದೊರೆತ ಬಿಡುಗಡೆಯನ್ನು ಬೇಡವೆಂದು ನಿರಾಕರಿಸಿಬಿಟ್ಟೆನಲ್ಲಾ ಎಂದು ಬಿಕ್ಕಿ ಬಿಕ್ಕಿ ಅತ್ತನು. ಮರಣದಂಡನೆಯನ್ನೂ ಪಡೆದನು. 

 

ಪಾಪದ ಸಂಬಳವು ಮರಣ (ರೋಮಾ 6:23) ಮತ್ತು ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವುದು (ಯೆಹೆಜ್ಕೇಲ 18:20). ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕಾಗಿಯೇ ಲೋಕಕ್ಕೆ ಬಂದರು. ಈ ಲೋಕದ ಪ್ರತಿಯೊಬ್ಬ ಮನುಷ್ಯನನ್ನು ಮುಕ್ತಗೊಳಿಸಲು ಬಿಡುಗಡೆಯ ಪತ್ರವನ್ನು ತಂದೆಯಾದ ದೇವರಿಂದ ಪಡೆದು ಯೇಸು ಕ್ರಿಸ್ತನು ಈ ಭೂಮಿಗೆ ಬಂದರು. ಒಬ್ಬರೂ ಕೆಟ್ಟು ಹೋಗಬಾರದೆಂದು ಸೇವಕರ ಮೂಲಕ ಆ ಬಿಡುಗಡೆಯ ಪತ್ರವನ್ನು ನೀಡಲು ಬಯಸುತ್ತಿದ್ದಾರೆ. ಇಂದೇ ಕೊಡಲು ಬಯಸುತ್ತಿದ್ದಾರೆ ಆದರೆ ಅನೇಕರು ದೇವರೂ ರಕ್ಷಕನೂ ಆದ ಯೇಸು ನಮಗೆ ಬೇಡವೆಂದು ಹೇಳುತ್ತಿದ್ದಾರೆ. ಯೇಸು ನಮಗೆ ಬೇಕು ಎಂದು ಹೇಳುವವರಿಗೆ, ಪಾಪದ ಸಂಬಳವು ಮರಣವಲ್ಲ

 

ಪ್ರೀತಿಯ ಜನರೇ, ಯೇಸು ಕೊಡಲು ಬಂದ ವಿಮೋಚನೆಯ (ರಕ್ಷಣೆಯ) ಬಾಂಡ್ ಅನ್ನು ನೀವು ಇನ್ನೂ ಖರೀದಿಸಿಲ್ಲದಿದ್ದರೆ, ಅದನ್ನು ಇಂದು ಉಚಿತವಾಗಿ ಖರೀದಿಸಿ. ಇಂದು ಸುಪ್ರಸನ್ನತೆಯ ಕಾಲ, ಇಂದೇ ರಕ್ಷಣೆಯ ದಿನ, ನೀವು ಇಂದು ದೇವರನ್ನು ಸ್ವೀಕರಿಸಿದರೆ, ನೀವು ಮರಣದಿಂದ, ಪಾಪದ ಶಿಕ್ಷೆಯಿಂದ ಮುಕ್ತರಾಗುತ್ತೀರಿ. ನೀವು ಯಶಸ್ವಿ ಜೀವನವನ್ನು ನಡೆಸುತ್ತೀರಿ. ಯೇಸು ನಿಮ್ಮನ್ನು ಆಶೀರ್ವದಿಸಲಿ!  

- Pr.S. L. ಇಮ್ಮಾನುವೇಲ್ 

 

ಪ್ರಾರ್ಥನಾ ಅಂಶ:

25 ಸಾವಿರ ಗ್ರಾಮಗಳಲ್ಲಿ ಸುವಾರ್ತೆ ಸಾರಲು ದ್ವಿಚಕ್ರ, 4 ಚಕ್ರದ ವಾಹನಗಳ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)