Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 03.09.2024

ಧೈನಂದಿನ ಧ್ಯಾನ(Kannada) – 03.09.2024

 

ಗೆಲ್ಲೋಣ

 

"…ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು,…" - ಮತ್ತಾಯ 7: 8 

 

ಆರೋನ್ ಮತ್ತು ಹೂರರು ಮೋಶೆಯ ಕೈ ಎತ್ತಲು ಸಹಾಯ ಮಾಡಿದವರು. ಯೆಹೋಶುವಾ ಮೂವರಿಂದ ಗೆಲ್ಲಲು ಸಾಧ್ಯವಾಯಿತು. ನಮಗೆ ಪ್ರಾರ್ಥನೆ ಮಾಡಲು ಮೋಶೆಯಂತಹ ಜನರು ಬೇಕು, ವಸ್ತುಗಳನ್ನು ಮತ್ತು ಹಣವನ್ನು ಹೊರಲು ನಮಗೆ ಆರೋನ್ ಮತ್ತು ಹೂರರಂತಹ ಜನರು ಬೇಕು. ಯೆಹೋಶುವರಂತೆ ಯುದ್ಧಕ್ಕೆ ಹೋಗುವ ಯುವ ಮಿಷನರಿಗಳು ನಮಗೆ ಬೇಕು. ಮೋಶೆಯು ತನ್ನ ಕೋಲು ಹಿಡಿದರೆ ಮಾತ್ರ ದೇವರು ಅದ್ಭುತಗಳನ್ನು ಮಾಡಬಲ್ಲನು ಎಂದಲ್ಲ; ಏನೂ ಇಲ್ಲದ ಅರಣ್ಯದಲ್ಲಿಯೂ ಸಹ ಲಾವಕ್ಕಿಗಳನ್ನು ಬೀಳಿಸಲು ಸಾಧ್ಯ. ಆಕಾಶದಿಂದ ಮನ್ನಾವನ್ನು 40 ವರ್ಷಗಳವರೆಗೆ ನೀಡಲು ಸಾಧ್ಯ. ಒಣ ಮೂಳೆಗಳನ್ನು ಸಹ ಪುನರುಜ್ಜೀವನಗೊಳಿಸಲು ಸಾಧ್ಯ. ಇಲ್ಲದವುಗಳನ್ನು ಇರುವ ಹಾಗೆ ಕರೆಯುವವನು. ಕುಗ್ಗಿ ಹೋಗದ ಕೈಯುಳ್ಳವರು ನಿನ್ನೆ, ಇಂದು ಮತ್ತು ಎಂದೆಂದಿಗೂ ಬದಲಾಗದವರಾಗಿದ್ದಾರೆ.

 

ಹೇಗಾದರೂ, ನಾವು ಫಲ ಹೊಂದಬೇಕು ಎಂಬುದಕ್ಕಾಗಿಯೇ, ನಮ್ಮ ಕೆಲಸವನ್ನು ಎದುರುನೋಡುತ್ತಿದ್ದಾರೆ. ಜಯವು ಯೆಹೋವನಿಂದಲೇ ಬರುತ್ತದೆ ಎಂದು ಯೆಹೋಶುವನಿಗೆ ಮನವರಿಕೆ ಮಾಡಲು ಮೋಶೆ, ಆರೋನ್ ಮತ್ತು ಹೂರನ್ನು ಬಳಸಲಾಯಿತು. ಪ್ರಾರ್ಥನೆಯಿಂದ ಮಾತ್ರವೇ ಜಯ ಸಿಗುತ್ತದೆ ಎಂದು ಭಾವಿಸದವರು ಪರಿಶುದ್ಧರಾಗಿರಲು ಸಾಧ್ಯವಿಲ್ಲ. ಜೀವನದಲ್ಲಿ ಹಂತಹಂತವಾಗಿ ಮೇಲೆಬಂದವರಲ್ಲಿ ಜಾರ್ಜ್ ವಾಷಿಂಗ್ಟನ್ ಒಬ್ಬರು. ಅವರ ಪ್ರಾರ್ಥನೆಯೇ ಅವರ ಉನ್ನತಿಗೆ ಕಾರಣವಾಯಿತು ಎಂದು ಇತಿಹಾಸ ಹೇಳುತ್ತಿದೆ. ಅವರು ಯುಎಸ್ ಸೈನ್ಯದ ಕಮಾಂಡರ್ ಆಗಿದ್ದಾಗ, ಅವರು ತಮ್ಮ ಅಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರಿಗಾಗಿ ಪ್ರಾರ್ಥಿಸುತ್ತಿದ್ದರು. ಆದ್ದರಿಂದಲೇ ಅವರು ಪ್ರಬಲ ಆಕ್ರಮಣಕಾರಿ ಸೈನ್ಯವಾಗಿದ್ದರು. ಅವರು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾದ ನಂತರ, ನಿಯಮಿತವಾಗಿ ರಾತ್ರಿ 9 ರಿಂದ 10 ರವರೆಗೆ ತಮ್ಮ ಅಧೀನದಲ್ಲಿರುವ ಪ್ರತಿಯೊಂದು ಇಲಾಖೆಗೆ ಪ್ರಾರ್ಥಿಸುತ್ತಿದ್ದರು. ಜಾರ್ಜ್ ವಾಷಿಂಗ್ಟನ್ ಅವರಂತಹ ಅನೇಕ ಕ್ರೈಸ್ತ ನಾಯಕರು ತಮ್ಮ ಸಂಸ್ಥೆಗಳಿಗಾಗಿ ಪ್ರಾರ್ಥಿಸಿದರೇನೆ ಸಾಕು ಆ ಸಂಸ್ಥೆಗಳು ಇತಿಹಾಸವನ್ನು ನಿರ್ಮಿಸುತ್ತವೆ. ಆರೋನ್ ಮತ್ತು ಹೂರರಂತಹ ಜನರು ಇಲ್ಲದಿದ್ದರೆ ಸಂಸ್ಥೆಗಳು ತಮ್ಮ ಕಾರ್ಯವನ್ನು ಕಳೆದುಕೊಳ್ಳುತ್ತವೆ. ಯೆಹೋಶುವನ ಹಾಗೆ ದುಡಿಯುವವರು ಪೌಲನಂತೆ, ಜಗತ್ತನ್ನು ಕದಲಿಸಲು ಎದ್ದೇಳದಿದ್ದರೆ ದೇಶವು ಶುದ್ಧೀಕರಿಸಲ್ಪಡಲು ಸಾಧ್ಯವಿಲ್ಲ. 

 

ಪ್ರಿಯರೇ, ದೇವರು ತನ್ನ ರಾಜ್ಯದ ನಿರ್ಮಾಣದಲ್ಲಿ ನಿಮಗೂ ಸಹ ಒಂದು ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ನೀವು ಪ್ರಾರ್ಥಿಸುವವರಾ? ನಿಮ್ಮ ಪಾಲು ಯಾವುದೋ ಅದನ್ನು ಸಂಪೂರ್ಣ ಖಚಿತವಾಗಿ ನಿರ್ವಹಿಸಿರಿ. ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ! ಜಯ ಹೊಂದೋಣ ಗೆಲ್ಲೋಣ!  

- Mr. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಕ್ರಿಸ್‌ಮಸ್‌ ವೇಳೆಗೆ 25,000 ಹಳ್ಳಿಗಳಿಗೆ ಸುವಾರ್ತೆ ಸಾರಲು ದೇವರು ತೆರೆದ ಬಾಗಿಲನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)