Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 21.05.2024

ಧೈನಂದಿನ ಧ್ಯಾನ(Kannada) – 21.05.2024

 

ಕೊರತೆಗಳನ್ನು ಪೂರೈಸುವರು

 

"ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು" - ಫಿಲಿಪ್ಪಿ 4:19

 

ಇಂಗ್ಲೆಂಡಿನಲ್ಲಿ ಜಾರ್ಜ್ ಮುಲ್ಲರ್ ಒಬ್ಬ ನಂಬಿಕೆಯ ವೀರನು. ಅವರು ತಮ್ಮ ಹಾಸ್ಟೆಲ್‌ನಲ್ಲಿ ಸಾವಿರಾರು ಮಕ್ಕಳನ್ನು ಪೋಷಿಸುತ್ತಿದ್ದರು. ಒಂದು ದಿನ ತಿಂಡಿಯ ಸಮಯ ಬಂದಾಗ ಆಹಾರವೇನೂ ಇರಲಿಲ್ಲ. ಏನಾದರೂ ತೆಗೆದುಕೊಳ್ಳೋಣ ಎಂದರೆ ಹಣವೂ ಇಲ್ಲ. ಎಲ್ಲಾ ತಟ್ಟೆಗಳು ಮತ್ತು ಎಲ್ಲಾ ಲೋಟಗಳು ಖಾಲಿಯಾಗಿದ್ದವು. ಎಲ್ಲರನ್ನು ಕೂರಿಸಿ ತಲೆಬಾಗಿಸಿ, ನಮ್ಮ ತಂದೆಯೇ, ನೀವು ನಮಗೆ ಕೊಡಲಿರುವ ಆಹಾರಕ್ಕಾಗಿ ವಂದನೆಗಳು ಎಂದು ಹೇಳಿ ಪ್ರಾರ್ಥಿಸಿ ಆಮೆನ್ ಎಂದು ಹೇಳುವ ಮೊದಲೇ, ಬಾಗಿಲು ತಟ್ಟುವ ಶಬ್ದ ಕೇಳಿಸಿತು. ಅಲ್ಲಿ ರೊಟ್ಟಿಗಳನ್ನು ಮಾಡುವ ವ್ಯಕ್ತಿ ನಿಂತಿದ್ದರು. ಅವರು ನನಗೆ ರಾತ್ರಿಯೆಲ್ಲಾ ನಿದ್ದೆಯಿಲ್ಲ. ನಿಮಗೆ ಬೆಳಗ್ಗಿನ ಉಪಹಾರಕ್ಕೆ ತಿನ್ನಲು ಏನೂ ಇಲ್ಲ ಎಂದು ಭಾವಿಸಿದೆ. ಹಾಗಾಗಿ ಬೆಳಗಿನ ಜಾವ ಎರಡು ಗಂಟೆಗೆ ಎದ್ದು ನಿಮಗಾಗಿ ಈ ರೊಟ್ಟಿಗಳನ್ನು ಹೊಸದಾಗಿ ಮಾಡಿದ್ದೇನೆ ಎಂದು ಹೇಳಿ ಅಗತ್ಯವಿರುವಷ್ಟು ರೊಟ್ಟಿಗಳನ್ನು ಅವರ ಕೈಗೆ ಕೊಟ್ಟರು. ಅದು ಮುಗಿದ ಕೂಡಲೇ ಮತ್ತೆ ಬಾಗಿಲು ಬಡಿಯುವ ಸದ್ದು ಕೇಳಿಸಿತು. ತೆರೆದರೆ ಹಾಲಿನವರು ನಿಂತಿದ್ದರು ಅವರ ಗಾಡಿ ಈ ಹಾಸ್ಟೆಲ್ ನ ಮುಂದೆ ರಿಪೇರಿಯಾಗಿ ನಿಂತು ಹೋಯಿತು. ಅದನ್ನು ಸರಿ ಮಾಡಬೇಕಾದರೆ, ಅದರಲ್ಲಿರುವ ಎಲ್ಲಾ ಹಾಲನ್ನು ಹೊರತೆಗೆಯಬೇಕು. ಹಾಗಾಗಿ ನೀವು ಈ ಹಾಲನ್ನು ತೆಗೆದುಕೊಳ್ಳುತ್ತೀರಾ? ಎಂದು ಕೇಳಿದರು. ಹೀಗೆ ಜಾರ್ಜ್ ಮುಲ್ಲರ್ ಅವರ ಅಂದಿನ ಅಗತ್ಯಗಳು ಪೂರೈಸಲ್ಪಟ್ಟು ಕೊರತೆಗಳು ಬದಲಾದವು.

 

ಯೋಹಾನನ ಸುವಾರ್ತೆಯಲ್ಲಿ ಕಾನಾವೂರಿನಲ್ಲಿ ಒಂದು ವಿವಾಹವು ನಡೆಯಿತು. ಆ ಮದುವೆಗೆ ಯೇಸು ಮತ್ತು ಅವರ ಶಿಷ್ಯರನ್ನು ಆಹ್ವಾನಿಸಲಾಗಿತ್ತು. ಮದುವೆ ಮನೆಯಲ್ಲಿ ದ್ರಾಕ್ಷಾರಸದ ಕೊರತೆಯುಂಟಾಯಿತು. ಯೇಸು ಕಲ್ಲಿನ ಜಾಡಿಗಳಲ್ಲಿ ನೀರನ್ನು ತುಂಬಿಸಿ ಅದನ್ನು ದ್ರಾಕ್ಷಾರಸವನ್ನಾಗಿ ಮಾಡಿದರು. ತಕ್ಷಣವೇ ಅಲ್ಲಿದ್ದವರು, ಯಾವುದೇ ಮನುಷ್ಯನು ಮೊದಲು ಒಳ್ಳೆಯ ದ್ರಾಕ್ಷಾರಸವನ್ನು ಕೊಟ್ಟು, ಜನರು ತೃಪ್ತರಾದ ನಂತರ ಕಡಿಮೆ ರುಚಿಯಿರುವುದನ್ನು ಕೊಡುತ್ತಾರೆ. ನೀವಾದರೋ ಒಳ್ಳೆಯ ದ್ರಾಕ್ಷಾರಸವನ್ನು ಕೊಟ್ಟಿದ್ದೀರಲ್ಲಾ ಎಂದು ಟೀಕಿಸಿದರು.

 

ನನಗೆ ಪ್ರಿಯವಾದವರೇ! ಇಂದು ನಿಮ್ಮ ಜೀವನದಲ್ಲಿ ಹಣದ ಕೊರತೆ ಇದೆಯೇ? ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕೊರತೆಯೇ? ಮದುವೆ ನಡೆಸಲು ಹಣದ ಕೊರತೆಯೇ? ಇವೆಲ್ಲದಕ್ಕೂ ಒಂದೇ ಪರಿಹಾರ ಯೇಸುವಿನ ಪಾದಗಳು. ನೀವು ಯೇಸುವಿನ ಪಾದದ ಬಳಿ ಕುಳಿತು ನಿಮ್ಮ ಎಲ್ಲಾ ಕೊರತೆಗಳನ್ನು ಹೇಳುವಾಗ, ನಿಮ್ಮ ಕೊರತೆಗಳು ಪೂರ್ಣಗೊಳ್ಳುತ್ತವೆ. ಆದ್ದರಿಂದ ಕೊರತೆಗಳನ್ನು ಪೂರೈಸುವ ದೇವರು ನಿಮ್ಮೊಂದಿಗಿರುವಾಗ ಕೊರತೆಗಳನ್ನು ನೋಡಿ ವ್ಯರ್ಥವಾಗಿ ಏಕೆ ದುಃಖಿಸಬೇಕು.

- Mrs. ಗ್ಲಾಡಿಸ್ ಮುರಳಿ

 

ಪ್ರಾರ್ಥನಾ ಅಂಶ:

ಮಕ್ಕಳ ಶಿಬಿರಗಳಲ್ಲಿ ಭೇಟಿಯಾಗುವ ಮಕ್ಕಳಿಗೆ ಯೇಸುವಿನ ಉಡುಗೊರೆ ಎಂಬ ಉಡುಗೊರೆಯನ್ನು ನೀಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)