ಧೈನಂದಿನ ಧ್ಯಾನ(Kannada) – 03.02.2025
ಧೈನಂದಿನ ಧ್ಯಾನ(Kannada) – 03.02.2025
ತೋಳಗಳು
"ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ ...ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ." - ಮತ್ತಾಯ 7:15
ಸತ್ಯವೇದದಲ್ಲಿ, ತೋಳಗಳ ಬಗ್ಗೆ ಸೂಚಿಸಿರುವ ಕಾರ್ಯಗಳೇನು ಗೊತ್ತಾ? ತೋಳಗಳು ಉಗ್ರವಾದದ್ದು, ಕಿತ್ತು ತಿನ್ನುವಂಥವು, ವೇಗವಾಗಿ ಓಡುತ್ತವೆ ಮತ್ತು ಹಿಂಡಿನೊಳಗೆ ಪ್ರವೇಶಿಸುತ್ತವೆ. ಅನೇಕ ಸ್ಥಳಗಳಲ್ಲಿ ಬೇಟೆಯಾಡುವ ತೋಳಗಳು ಎಂದು ಬರೆಯಲ್ಪಟ್ಟಿದೆ. ಪ್ರಾಣಿಶಾಸ್ತ್ರಜ್ಞರು ನೀಡುವ ಮಾಹಿತಿ ಏನು ಗೊತ್ತಾ ? ಅವು ಗಂಟೆಗೆ 50-60 ಕಿಲೋಮೀಟರ್ ವೇಗದಲ್ಲಿ ಓಡುತ್ತವೆ. ಅವು ಗುಂಪು ಗುಂಪಾಗಿ ಹೋಗಿ ತಮ್ಮ ಬೇಟೆಯ ಮೇಲೆ ದಾಳಿ ಮಾಡಿ ಕೊಲ್ಲುತ್ತವೆ. ತೋಳಗಳಲ್ಲಿ 38 ಜಾತಿಗಳಿವೆ. ನೋಡಿ, ಮೇಲಿನ ಸತ್ಯವೇದದ ಉಲ್ಲೇಖಗಳು ಮತ್ತು ಇತರ ಮಾಹಿತಿಯು ತೋಳ ಅಪಾಯಕಾರಿ ಪ್ರಾಣಿ ಎಂದು ಸ್ಪಷ್ಟವಾಗಿ ತೋರಿಸುತ್ತಿದೆ. ಯೋಹಾನ 10:12 ರಲ್ಲಿ ಹಿಂಡನ್ನು ಚದರಿಸುವ ತೋಳಗಳ ಬಗ್ಗೆ ಎಂದು ಹೇಳಲ್ಪಟ್ಟಿದೆ. ಚದರಿಸುವ ಎಂದರೆ 'ಗಾಯಪಡಿಸುವ' ಎಂಬ ಅರ್ಥ. ಯಾವುದೇ ಆಯುಧಗಳಿಲ್ಲದೆ, ತಮ್ಮ ಮಾತುಗಳಿಂದ ಬಡವರನ್ನು ಗಾಯಗೊಳಿಸುವವರು ಅನೇಕರಿದ್ದಾರೆ. ಇದನ್ನು ಉಪಯೋಗಿಸಿ ಇತರರನ್ನು ವೇದನೆಪಡಿಸುವುದನ್ನು ನೋಡಬಹುದು. ಈ ಕ್ರಿಯೆ ಚದರಿಸುವ ತೋಳದ ಸ್ವಭಾವವಲ್ಲದೆ ಬೇರೇನೂ ಅಲ್ಲ. ನಾಲಿಗೆಯು ಬೆಂಕಿಯಂತಿದ್ದು, ಮಾರಕ ವಿಷದಿಂದ ತುಂಬಿದೆ ಎಂದು ಅಪೊಸ್ತಲನಾದ ಯಾಕೋಬನು ಹೇಳುತ್ತಾರೆ.
ನಾವು ಬಡವರನ್ನು ಮತ್ತು ನಿರ್ಗತಿಕರನ್ನು ತಿರಸ್ಕರಿಸದಂತೆ ಅಥವಾ ಕಠಿಣ ಮಾತುಗಳಿಂದ ಅವರನ್ನು ನೋಯಿಸದಂತೆ ನಮ್ಮ ನಾಲಿಗೆಯನ್ನು ದೇವರಿಗೆ ಒಪ್ಪಿಸೋಣ. ಹಬಕ್ಕೂಕ 1:8 ರಲ್ಲಿ, "ಸಂಜೆಯಲ್ಲಿ ಅಲೆದಾಡುವ ತೋಳಗಳಿಗಿಂತ" ಎಂದು ಬರೆಯಲ್ಪಟ್ಟಿರುವ ವಾಕ್ಯ, ಸಂಜೆಯ ಮುಸ್ಸಂಜೆಯಲ್ಲಿ ಸೈತಾನನ ಅಂಧಕಾರ ಶಕ್ತಿಯು ಕಾರ್ಯನಿರ್ವಹಿಸುವ ಸಮಯವನ್ನು ಸೂಚಿಸಿ ತೋರುವಂಥದ್ದಾಗಿದೆ. ಹೌದು, ಮನುಷ್ಯನು ಕೊಲೆಪಾತಕನು, ಕೊಲೆ, ಕಳ್ಳತನ ಮತ್ತು ವ್ಯಭಿಚಾರದಂತಹ ಕಾಮಪ್ರಚೋದಕ ಕೃತ್ಯಗಳು ನಡೆಯುವುದೆಲ್ಲಾ ಕತ್ತಲೆಯ ಸಮಯದಲ್ಲೇ ಹೆಚ್ಚಾಗಿ ಎಂಬುದು ನಮಗೆ ತಿಳಿದಿದೆ. ತೋಳವು ಸಹ ಮುಸ್ಸಂಜೆಯಲ್ಲಿ ತನ್ನ ಬೇಟೆಯನ್ನು ಹುಡುಕುತ್ತದೆ, ಅಂದರೆ, ಕತ್ತಲೆ ಆವರಿಸುವ ವೇಳೆಯಲ್ಲಿ, ಅಂದರೆ ಕತ್ತಲೆ ಆವರಿಸುವ ಆ ಸಂಜೆಯ ವೇಳೆಯಲ್ಲೇ ತೀವ್ರವಾಗಿ ಹೊರಡುತ್ತದೆ ಎಂದು ಬರೆಯಲ್ಪಟ್ಟಿದೆ. ತೋಳದಂತೆ, ಸೈತಾನನು ಸಹ ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ಸುತ್ತಾಡುತ್ತಿದ್ದಾನೆ. ಆದ್ದರಿಂದ, ಅವನನ್ನು ಎದುರಿಸಿ ನಿಲ್ಲಿರಿ, ಸಾಕ್ಷಿಯ ಮಾತಿನಿಂದ ಆ ದುಷ್ಟನನ್ನು ಜಯಿಸಿ ತೋರಿಸಿರಿ. ಕುರಿಮರಿಯಾದಾತನ ರಕ್ತದಿಂದ ಅವನನ್ನು ಬೀಳಿಸಿ, ಕಾಲಿನ ಕೆಳಗೆ ಹಾಕಿ ತುಳಿಯಿರಿ.
ಪ್ರಿಯರೇ! ಸತ್ಯವೇದದಲ್ಲಿ ಈ ಕ್ರೂರ ಪ್ರಾಣಿ ಕಾಣಿಸಿಕೊಳ್ಳುವುದರ ಉದ್ದೇಶವೇನು? ಅಜಾಗರೂಕರು, ಮಂದಬುದ್ಧಿಯುಳ್ಳವರು, ಮೂರ್ಖರು ಮತ್ತು ಬುದ್ಧಿ ಹೀನರು ಆಗಿರುವ ನಮಗೆ ಎಚ್ಚರಿಕೆ ನೀಡಿ ಜಾಗೃತಗೊಳಿಸವುದಕ್ಕಾಗಿಯೇ. ನಾವು ಕರ್ತನನ್ನು ನಮ್ಮ ದೇವರಾಗಿ ಮಾಡಿಕೊಂಡ ನಂತರ, ನಾವು ಜಾರದಂತೆ ಕೊನೆಯವರೆಗೂ ದೃಢವಾಗಿ ನಿಲ್ಲಬೇಕು! ಜಾಗರೂಕರಾಗಿರಿ, ಸೋಮಾರಿಯಾಗಬೇಡಿ. ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಇಗೋ! ಲೋಕವನ್ನು ಜಯಿಸಿದವರು ನಮ್ಮೊಂದಿಗಿದ್ದಾರೆ. ಆಮೆನ್.
- Mrs. ಎಮೀಮಾ ಸೌಂದರರಾಜನ್
ಪ್ರಾರ್ಥನಾ ಅಂಶ:
1000 ಮನೆ ಪ್ರಾರ್ಥನಾ ಗುಂಪುಗಳು, ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482