Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 30.01.2025

ಧೈನಂದಿನ ಧ್ಯಾನ(Kannada) – 30.01.2025

 

ಸುವಾರ್ತೆಯನ್ನು ಹೇಳಲು

ಹಿಂಜರಿಯಬೇಡ

 

"ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ.ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು,... ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವಂಥದಾಗಿದೆ" - ರೋಮಾ 1:16

 

ಬ್ರೆಜಿಲ್‌ನಲ್ಲಿ, ಕಾರ್ಲೋಸ್ ಎಂಬವರು ಮ್ಯಾಟೊ ಗ್ರೊಸೊ ಎಂಬ ಪಟ್ಟಣಕ್ಕೆ ಹೋಗಲು ಲಾರಿಯಲ್ಲಿ ಪ್ರಯಾಣಿಸಿದರು. ಲಾರಿ ಚಾಲಕ ಕಾರ್ಲೋಸ್ ಜೊತೆ ಎಲ್ಲಾ ರೀತಿಯಲ್ಲೂ ಮಾತನಾಡಲು ಪ್ರಯತ್ನಿಸಿದರು ಆದರೆ ಕಾರ್ಲೋಸ್ ಕೊನೆಯವರೆಗೂ ಮೌನವಾಗಿಯೇ ಇದ್ದು ವಿದಾಯ ಹೇಳಿ ಹೊರಟುಹೋದರು. ಇವರು ಹೊರಡುವಾಗ, ಲಾರಿ ಚಾಲಕ ಒಂದು ಸಣ್ಣ "ಹೊಸ ಒಡಂಬಡಿಕೆ"ಯನ್ನು ಕೊಟ್ಟು, "ದಯವಿಟ್ಟು ಸಮಯ ಸಿಕ್ಕಾಗ ಇದನ್ನು ಓದಿ" ಎಂದರು. ಬೇಕಾಬಿಟ್ಟಿಯಾಗಿ ತೆಗೆದುಕೊಂಡ ಅವರು ಯವುದೋ ಯೋಚನೆಯಲ್ಲಿ ನಡೆದು ಹೋದರು. 

 

ಹಲವು ತಿಂಗಳುಗಳ ನಂತರ, ಒಂದು ದಿನ ಲಾರಿ ಚಾಲಕ ಚರ್ಚ್‌ಗೆ ಹೋದಾಗ, ಅಲ್ಲಿ ಕಾರ್ಲೋಸ್‌ನನ್ನು ನೋಡಿದರು. ಅವರ ಬಳಿ ನಿಮಗೆ ನಾನು ಗೊತ್ತಾ? ಎಂದು ಕೇಳಲು, ಕಾರ್ಲೋಸ್, ಗೊತ್ತಾ ಅಂತ ಕೇಳ್ತಾ ಇದೀರಾ? ನೀವು ನನಗೆ ನೀಡಿದ ಹೊಸ ಒಡಂಬಡಿಕೆಯನ್ನು ನಾನು ಸ್ವೀಕರಿಸಿದ ದಿನ, ನಾನು ಒಬ್ಬ ಮನುಷ್ಯನನ್ನು ಕೊಲ್ಲುವ ಹಂತದಲ್ಲಿದ್ದೆ. ಆಗ ಯಾರೋ ನನ್ನ ಅಂಗಿಯನ್ನು ಹಿಡಿದು ಎಳೆಯುತ್ತಿರುವಂತೆ ಭಾಸವಾಯಿತು; ನಾನು ಹಿಂತಿರುಗಿ ನೋಡಿದಾಗ, ಯಾರೂ ಕಾಣಲಿಲ್ಲ. ನಾನು ದಿಗ್ಭ್ರಮೆಗೊಂಡು ಅಲ್ಲೇ ಕುಳಿತುಬಿಟ್ಟೆ, ಸ್ವಲ್ಪ ಸಮಯದ ನಂತರ ನೀವು ನನಗೆ ಕೊಟ್ಟಿದ್ದ ಹೊಸ ಒಡಂಬಡಿಕೆಯನ್ನು ತೆರೆದು ಓದಿದೆ. ಓದುತ್ತಾ ಓದುತ್ತಾ ಆ ಮನುಷ್ಯನನ್ನು ಕೊಲ್ಲಬಾರದು ಎಂಬುದೇ ನನ್ನ ನಿರ್ಧಾರವಾಗಿತ್ತು. ಈಗ ನಾನೊಬ್ಬ ಮಾನಸಾಂತರ ಹೊಂದಿದ ಮನುಷ್ಯನಾಗಿದ್ದೇನೆ ಎಂದು ಸಂತೋಷದಿಂದ ಹೇಳಿದರು.

 

ಪ್ರೀತಿಯ ದೇವರ ಮಗುವೇ! ಆ ಲಾರಿ ಚಾಲಕ ಕೊಟ್ಟ ಹೊಸ ಒಡಂಬಡಿಕೆಯಿಂದ ಎರಡು ಜೀವಗಳು ಉಳಿದವು. ಅವರು ಹೊಸ ಒಡಂಬಡಿಕೆಯನ್ನು ನೀಡಲು ಹಿಂಜರಿದಿದ್ದರೆ, ಒಬ್ಬನು ಕೊಲೆಗಾರನಾಗುತ್ತಿದ್ದನು ಮತ್ತು ಇನ್ನೊಬ್ಬನು ಕೊಲೆಯಾಗುತ್ತಿದ್ದನು. ಒಬ್ಬನು ಯೇಸು ಕ್ರಿಸ್ತನಲ್ಲಿ ನಿತ್ಯಜೀವವನ್ನು ಪಡೆದನು, ಇನ್ನೊಬ್ಬನು ಲೋಕದಲ್ಲಿ ಜೀವಿಸಲು ಜೀವವನ್ನು ಪಡೆದನು.

 

ಸುವಾರ್ತೆಯನ್ನು ಸಾರಲು ನಾವು ಯಾವಾಗಲೂ ಸಿದ್ಧರಾಗಿರಬೇಕು. ನಾಚಿಕೆಪಡಬಾರದು. ಇದೇ ನಮ್ಮ ಕೆಲಸ. ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಿದರೆ, ದೇವರು ಕೂಡ ತನ್ನ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಸತ್ಯವೇದವು ಹೇಳುತ್ತದೆ "ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ." (ಯೆಶಾಯ 55:11) ಆದ್ದರಿಂದ ನಾವು ಹಿಂಜರಿಕೆಯಿಲ್ಲದೆ ಸುವಾರ್ತೆಯನ್ನು ಸಾರೋಣ; ದಾರಿ ತಪ್ಪಿದವರನ್ನು ಸರಿಯಾದ ದಾರಿಗೆ ಕರೆದೊಯ್ಯೋಣ.

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಎಂಬ ಪತ್ರಿಕೆಯ ಮೂಲಕ ಆರಂಭಿಕ ವಿಶ್ವಾಸಿಗಳ ಜೀವನವು ಕಟ್ಟಿ ಎಬ್ಬಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)