ಧೈನಂದಿನ ಧ್ಯಾನ(Kannada) – 02.02.2025
ಧೈನಂದಿನ ಧ್ಯಾನ(Kannada) – 02.02.2025
ಕೃತಜ್ಞತಾ ಸ್ತುತಿ ಸಲ್ಲಿಸು.
"ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ" - 1 ಥೆಸಲೊನೀಕ 5:18
Hello ಪುಟಾಣಿಗಳೇ! ನೀವು ಎಲ್ಲಾ ಸಮಯದಲ್ಲೂ ಸಂತೋಷವಾಗಿ ಇದ್ದಿದ್ದೀರಾ? ಕೆಲವೊಮ್ಮೆ ಜೀವನವು ಕಣ್ಣೀರು, ಕಷ್ಟ, ಕೆಲಸ ಮತ್ತು ಸಂತೋಷ ಇವೆಲ್ಲವೂ ಮಿಶ್ರಣವಾಗಿ ಬರುವುದೇ ಜೀವನ. ಯಾವುದೇ ಪರಿಸ್ಥಿತಿಯಲ್ಲಿ ಕೃತಜ್ಞತಾ ಸ್ತುತಿ ಹೇಳುವುದನ್ನು ನೀವು ಅಭ್ಯಾಸ ಮಾಡಿಕೊಂಡರೆ, ಅದೇ ಕರ್ತನಿಗೆ ಮೆಚ್ಚಿಕೆಯಾದದ್ದು. ಕೃತಜ್ಞತಾ ಸ್ತುತಿ ಸಲ್ಲಿಸಿ, ಇರುವ ಸ್ಥಳವನ್ನು heaven ರೀತಿ ಬದಲಾಯಿಸಿದ ಒಂದು ಕಥೆಯನ್ನು ನಿಮಗೆ ಹೇಳಲಿದ್ದೇನೆ. ನೀವು ಕೇಳಲು ರೆಡಿ ತಾನೇ? Super.
ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ನಡೆದ ಹಾಗೆ, ಎರಡು ದೇಶಗಳ ನಡುವೆ ಆಗಾಗ್ಗೆ ಯುದ್ಧಗಳು ನಡೆಯುತ್ತವೆ. ಶತ್ರು ರಾಷ್ಟ್ರಗಳ ಜನರನ್ನು ಗುಲಾಮರನ್ನಾಗಿ ಬಂಧಿಸುವುದು ವಾಡಿಕೆ. ಅವರು 17 ಜನರನ್ನು ಒಂದು ಸಣ್ಣ ಕೋಣೆಯಲ್ಲಿ ಬಂಧಿಸಿದರು. ಅದರಲ್ಲಿ ಅಕ್ಕ, ತಂಗಿ ಇಬ್ಬರು ಇದ್ದರು. ಸೊಳ್ಳೆಗಳ ಕಡಿತ, ತಿರುಗಿ ಮಲಗುವಷ್ಟು ಜಾಗವೂ ಇಲ್ಲ, ಉಸಿರಾಡಲು ಸಹ ಸಾಧ್ಯವಾಗದಷ್ಟು ವೇದನೆಯಿಂದ ಇದ್ದಾಗ ಒಂದು ಹುಡುಗಿ ಮಾತ್ರ ಯೇಸಪ್ಪಾ ನಿಮಗೆ ಸ್ತೋತ್ರ. ನಿಮಗೆ ಧನ್ಯವಾದ ಎಂದು ಹೇಳಿದಳು. ಅಕ್ಕಳಿಗೆ ಕೋಪ ಬಂತು. ಸೊಳ್ಳೆ ಕಡಿತವನ್ನು ಸಹಿಸೋಕೇ ಆಗ್ತಿಲ್ಲ, ನಿದ್ರೆ ಬರ್ತಿಲ್ಲ. ಹೇಗೆ ಸ್ತೋತ್ರ ಅಂತ ಹೇಳ್ತಿದೀಯ ಎಂದಳು. ಏನು ಪುಟಾಣಿಗಳೇ! ನಿಮಗೂ ಸಹ ಹಾಗೆಯೇ ಅನಿಸುತ್ತಿದೆ ಅಲ್ವಾ. ನೀವು ಫ್ಯಾನ್ ಅಥವಾ ಎಸಿಯಲ್ಲಿ ಚೆನ್ನಾಗಿ ನಿದ್ರಿಸಿದಾಗಲೂ, ಯೇಸಪ್ಪನಿಗೆ ಕೃತಜ್ಞತಾ ಸ್ತುತಿ ಮಾಡಿದ್ದೇ ಇಲ್ಲ ಅಲ್ವಾ? ಓಹ್... ಇನ್ನು ಮುಂದೆ ಹೇಳ್ತೀರಾ? Very good. Super. ಪ್ರತಿ ಕೋಣೆಯ ಮುಂದೆ ಇಬ್ಬರು ಪೊಲೀಸ್ ಅಧಿಕಾರಿಗಳು ನಿಂತಿರುತ್ತಾರಂತೆ. ಯಾರಾದರೂ ಜಗಳವಾಡಿದರೆ ಅಥವಾ ಗಲಾಟೆ ಮಾಡಿದರೆ, ಅವರು ಅವರನ್ನು ಶಿಕ್ಷಿಸುತ್ತಾರೆ. ಅಕ್ಕ, ತಂಗಿ ಇರುವ ಕೋಣೆಯಲ್ಲಿ ಪ್ರತಿದಿನ ಹಾಡು ಹಾಡಿ ಪ್ರಾರ್ಥಿಸುವುದರಿಂದ, ಅಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ. ಇತರ ಕೋಣೆಗಳಲ್ಲಿ ಜಗಳ ಸಮಸ್ಯೆಗಳು ಆಗಾಗ್ಗೆ ಉಂಟಾಗುತ್ತಿತಂತೆ.
ಇಬ್ಬರು ಪುಟ್ಟ ಮಕ್ಕಳು ಪ್ರಾರ್ಥಿಸುತ್ತಿರುವುದನ್ನು ನೋಡಿದ, ಇತರರೂ ಯೇಸುವನ್ನು ತಿಳಿದುಕೊಳ್ಳಲು ಬಯಸಿದರು. ಅವರು ಅವರಿಗೆ ಒಂದು ಹಾಡನ್ನು ಕಲಿಸಿಕೊಟ್ಟರು. ಎಲ್ಲರೂ ಒಟ್ಟಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು. ಎಲ್ಲರೂ ಶಾಂತವಾಗಿರುವುದನ್ನು ಮತ್ತು ಯಾವುದೇ ಸಮಸ್ಯೆಗಳಿಲ್ಲ ಎಂದು ನೋಡಿದ ಪೊಲೀಸರು, ಆ ಕೋಣೆಗೆ ಕಾವಲು ಕಾಯುವ ಅಗತ್ಯವಿಲ್ಲ ಎಂದು ನಿರ್ಧರಿಸಿ ಬೇರೆ ಸ್ಥಳಕ್ಕೆ ತೆರಳಿದರು. ಕಷ್ಟದಲ್ಲಿಯೂ ಮತ್ತು ಇಕ್ಕಟ್ಟಿನ ಸಮಯದಲ್ಲಿಯೂ ಕರ್ತನನ್ನು ಹಾಡಿ ಸ್ತುತಿಸುತ್ತಿದ್ದ ಆ ಕೋಣೆ ಈಗ ಪರಲೋಕದಂತೆ ಮಾರ್ಪಟ್ಟಿದೆ. ಕೆಲವೇ ತಿಂಗಳುಗಳಲ್ಲಿ ಅವರು ಬಿಡುಗಡೆಯಾಗಿ ತಮ್ಮ ಮನೆಗಳಿಗೆ ಹಿಂತಿರುಗಿ ಹೋದರು.
ಪ್ರೀತಿಯ ತಮ್ಮ ತಂಗಿ! ಕಷ್ಟ, ಕಣ್ಣೀರು, ಸಂಕಟ ಮತ್ತು ದುಃಖದಲ್ಲಿ, ಕರ್ತನನ್ನು ಸ್ತುತಿಸಿ ಕೃತಜ್ಞತೆ ಸಲ್ಲಿಸಿ ನೋಡಿ. ನೀವು ಊಹಿಸಲೂ ಸಾಧ್ಯವಾಗದ ಅದ್ಭುತಗಳನ್ನು ಯೇಸು ಕ್ರಿಸ್ತನು ನಿಮಗಾಗಿ ಮಾಡುವರು. ಎಲ್ಲದಕ್ಕೂ ಧನ್ಯವಾದ ಹೇಳಿ ನೋಡಿ ಸ್ವಲ್ಪ. ವಿವರಿಸಲು ಸಾಧ್ಯವಾಗದ ಯೇಸಪ್ಪನ ಕಾರ್ಯಗಳನ್ನು ಕಂಡು ಆನಂದಿಸುತ್ತೀರ. ಸರಿ ಅಲ್ವಾ!
- Sis. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482